ADVERTISEMENT

ಪೋರಿಯ ಕಣ್ಣಲ್ಲಿ ಡಾನ್ಸರ್ ಕನಸು

ಮಾಳಿಂಗರಾಯ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಅಂಚಲ್‌ ಎನ್‌.ಜಿ
ಅಂಚಲ್‌ ಎನ್‌.ಜಿ   

ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಉದ್ದೇಶದಿಂದ ‘ಒಪೋ ಟೈಮ್ಸ್‌ ಫ್ರೆಶ್‌ ಫೇಸ್‌’ ಓಪನ್ ಆಡಿಷನ್ ಸ್ಪರ್ಧೆ ಈಚೆಗೆ ಕೋರಮಂಗಲದ ಫೋರಂ ಮಾಲ್‌ನಲ್ಲಿ ನಡೆಯಿತು.

ಕ್ರೈಸ್ಟ್‌ ಕಾಲೇಜಿನ ಎನ್‌.ಜಿ.ಅಂಚಲ್ ಗೆಲುವಿನ ನಗೆ ಬೀರಿದರೆ, ಎಂಜಿನಿಯರಿಂಗ್ ವಿದ್ಯಾರ್ಥಿ ಲಿಖಿತ್ ನಾಯ್ಡು ರನ್ನರ್‌ ಅಪ್ ಆದರು. ಅಕುಲ್ ಬಾಲಾಜಿ ನಿರೂಪಣೆ ಸ್ಪರ್ಧೆಯ ರಂಗೇರಿಸಿತ್ತು.

ಸ್ಪರ್ಧೆಯ ನಂತರ ಮಾತಿಗೆ ಸಿಕ್ಕ ಅಂಚಲ್ ಖುಷಿಖುಷಿಯಾಗಿಯೇ ಮಾತು ಆರಂಭಿಸಿದರು. 'ನನಗೆ ಡಾನ್ಸ್ ಅಂದ್ರೆ ಇಷ್ಟ. ಹಿಪ್‌ಹಾಪ್ ಹಾಡಿಗೆ ನನ್ನದೇ ಶೈಲಿಯಲ್ಲಿ ಡಾನ್ಸ್ ಮಾಡಿದೆ. ಮೂರನೇ ತರಗತಿಯಲ್ಲಿರುವಾಗಲೇ ಪೋಷಕರು ನೃತ್ಯ ತರಬೇತಿ ಶಾಲೆಗೆ ಕಳುಹಿಸಿದರು. ಚಿತ್ರಕಲೆ ಮತ್ತು ಕ್ರೀಡಾ ಚಟುವಟಿಕೆಯಲ್ಲೂ ನಾನು ಎತ್ತಿದ ಕೈ. 2009ರಲ್ಲಿ ಜೀ ಕನ್ನಡ ವಾಹಿನಿಯ ‘ಕುಣಿಯೋಣ ಬಾರಾ’ದಲ್ಲಿ ಸೆಮಿ ಫೈನಲ್‌ವರೆಗೂ ತಲುಪಿದ್ದೆ. ಮುಂದೆ ಒಳ್ಳೇ ಡಾನ್ಸರ್ ಆಗಬೇಕು, ಅಷ್ಟೇ ಅಲ್ಲ ಬಾಹ್ಯಾಕಾಶ ವಿಜ್ಞಾನಿಯೂ ಆಗಬೇಕು ಎನ್ನುವ ಕನಸು ನನಗಿದೆ' ಎನ್ನುತ್ತಾರೆ ಅವರು.

ADVERTISEMENT

ರನ್ನರ್ ಪ್ ಆದ ಲಿಖಿತ್‌ ನಾಯ್ಡು ಅಣ್ಣಾವ್ರ ಅಪ್ಪಟ ಅಭಿಮಾನಿ. ಮಾಡೆಲಿಂಗ್‌ ಹಾಗೂ ಹಾಡು, ನಟನೆಯ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 'ನಾನು ದೊಡ್ಡ ನಟನಾಗಿ ಬೆಳೆಯಬೇಕು' ಎನ್ನುವುದು ಅವರ ಮನದ ಮಾತು.

ಒಪ್ಪೊ ಸಂಸ್ಥೆಯು ಈವರೆಗೆ ಒಟ್ಟು ಏಳು ವಿದ್ಯಾರ್ಥಿಗಳನ್ನು ಸಿಟಿ ವಿಜೇತರು ಎಂದು ಘೋಷಿಸಿದೆ. ಇದೇ ತಿಂಗಳು ನಗರದಲ್ಲಿ ಸೆಮಿಫೈನಲ್ಸ್ ನಡೆಯಲಿದೆ. ನಂತರ ಮುಂಬೈನಲ್ಲಿ ಗ್ರ್ಯಾಂಡ್‌ ಫಿನಾಲೆ ಇದೆ.

ಇಬ್ಬರು ವಿಜೇತರಿಗೆ ಬಹುಮಾನ ರೂಪದಲ್ಲಿ ಅಂತರರಾಷ್ಟ್ರೀಯ ಪ್ರವಾಸಕ್ಕೆ ಅವಕಾಶ ಮತ್ತು ಸ್ಮಾರ್ಟ್‌ಫೋನ್ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.