ಪ್ರೇಮಿಗಳ ದಿನಕ್ಕಾಗಿ ‘ಕ್ರೀಂ ಅಂಡ್ ಫಡ್ಜ್’ ಕಂಪೆನಿಯು ಸ್ಟ್ರಾಬೆರ್ರಿ ಬನಾನ ಹಾಗೂ ಕಾಫಿ ಮತ್ತು ಕೂಕಿ ಡೋ ಎಂಬ ಎರಡು ಹೊಸ ಸ್ವಾದದ ರುಚಿಕರ ಐಸ್‌ಕ್ರೀಂ ಕೇಕ್‌ಗಳನ್ನು ಪರಿಚಯಿಸುತ್ತಿದೆ. ಸ್ಟ್ರಾಬೆರ್ರಿ ಮತ್ತು ಬನಾನ ₨೫೦೦, ಪ್ರತಿ ಸ್ಲೈಸ್‌ಗೆ ₨೯೫, ಕಾಫಿ ಮತ್ತು ಕುಕ್ಕಿ ಡೋ ₨೫೦೦ ಬೆಲೆ ನಿಗದಿಪಡಿಸಿದೆ.
‘ಸ್ಯಾಂಕ್ಟಮ್’ನಲ್ಲಿ ನಕ್ಕುಬಿಡಿ...
ಉದ್ಯಾನದಲ್ಲೋ, ಕಾಲೇಜು ಕ್ಯಾಂಪಸ್‌ನಲ್ಲೋ ಪ್ರೇಮಿಗಳು ಬ್ಯುಸಿಯಾಗಿರುವ ಫೆ.14ರಂದು ರೆಸಿಡೆನ್ಸಿ ರಸ್ತೆಯಲ್ಲಿರುವ ಸ್ಯಾಂಕ್ಟಮ್ ಕ್ಲಬ್ ‘ಇಂಪ್ರೂವ್’ ಹಾಸ್ಯ ಕಾರ್ಯಕ್ರಮ ಆಯೋಜಿಸಿದೆ. ದಾನಿಶ್ ಸೇಟ್, ಸಿದ್ಧಾಂತ್ ಸುಂದರ್, ಕೆನೆತ್ ಸೆಬಸ್ಟಿಯನ್, ಸುಮುಖಿ ಸುರೇಶ್, ಸಾಲ್ ಯೂಸಫ್ ಹಾಗೂ ನಿರ್ದೇಶಕ, ನಿರ್ಮಾಪಕ ಸಾದ್‌ಖಾನ್ ಕಾರ್ಯಕ್ರಮ ನೀಡುವವರು. ಸ್ಥಳ: ನಂ135, ಚಾನ್ಸರಿ ಪೆವಿಲಿಯನ್, ಕಮರ್ಷಿಯಲ್ ಬ್ಲಾಕ್, ರೆಸಿಡೆನ್ಸಿ ರಸ್ತೆ. ಸಂಜೆ 7.30.
ವಿಶೇಷ ಸಂಗ್ರಹ
ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳವವರಿಗಾಗಿ ಡಿಸ್ನಿ ಕನ್ಸ್ಯೂಮರ್ ಪ್ರೊಡಕ್ಟ್ ಕಂಪೆನಿಯು ವಿಶೇಷ ಸಂಗ್ರಹಗಳನ್ನು ಬಿಡುಗಡೆ ಮಾಡಿದೆ.
ಪ್ರೀತಿ ಪಾತ್ರರಿಗೆ ಕೊಡುಗೆಯಾಗಿ ನೀಡಲು ಗೊಂಬೆ, ಬ್ಯಾಗ್, ಟೀಶರ್ಟ್, ಐಫೋನ್ ಕವರ್ ಹಾಗೂ ಯುವತಿಯರಿಗಾಗಿ ವಿಶೇಷ ಉಡುಪುಗಳ ಸಂಗ್ರಹವೇ ಇಲ್ಲಿದೆ. ಕೆಂಪು, ನಸುಗೆಂಪು ಹಾಗೂ ಬಿಳಿ ಬಣ್ಣಗಳ ಈ ಸಂಗ್ರಹ ಪ್ರೇಮಿಗಳಿಗೆ ಇಷ್ಟವಾಗಲಿವೆ.
ಉಚಿತ ಸೌಂದರ್ಯ ಚಿಕಿತ್ಸೆ
ನಗರದ ಹೇರ್‌ಲೈನ್ ಇಂಟರ್‌ನ್ಯಾಷನ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ಪ್ರೇಮಿಗಳ ದಿನಕ್ಕಾಗಿ ಫೆ. ೧೬ರವರೆಗೆ ಸೌಂದರ್ಯ, ತ್ವಚೆ ಹಾಗೂ ಕೂದಲಿನ ಚಿಕಿತ್ಸೆ ಪಡೆಯುವ ಪ್ರೇಮಿಗಳಲ್ಲಿ ಒಬ್ಬರಿಗೆ ಉಚಿತ ಸೇವೆ ನೀಡಲಿದೆ. ‘ಇನ್‌ಸ್ಟೆಂಟ್ ಮೇಕ್ ಓವರ್’, ‘ಇನ್‌ಸ್ಟೆಂಟ್ ಗ್ಲೋ’, ‘ಬೋಟೋಕ್ಸ್ ಇಂಜೆಕ್ಷನ್’, ‘ಸೆಲ್ಫಿಲ್ ಫೇಸ್‌ಲಿಫ್ಟ್’, ‘ಫೇಶಿಯಲ್ ಕ್ಲೀನ್ ಅಪ್‘, ‘ಬಾಡಿ ಹೇರ್ ರಿಡಕ್ಷನ್‘, ‘ಮುಂಗುರುಳು’, ‘ಕೃತಕ ಕೂದಲು’, ಶಸ್ತ್ರಚಿಕಿತ್ಸೆ ರಹಿತ ‘ಫೇಸ್‌ಲಿಫ್ಟ್’ ಸೇರಿದಂತೆ ಸೌಂದರ್ಯ, ತ್ವಚೆ ಹಾಗೂ ಕೂದಲಿನ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ: ೦೮೦-೨೫೨೯ ೯೦೦೨/೦೩.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.