ADVERTISEMENT

ಬಿಗ್, ಈಟಿವಿ ನವರಾತ್ರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಈಟೀವಿ ಕನ್ನಡವಾಹಿನಿ ನವರಾತ್ರಿ ಸಂದರ್ಭದಲ್ಲಿ ಶೃಂಗೇರಿ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಬುಧವಾರ ಮತ್ತು ಶುಕ್ರವಾರ ನಡೆಯುವ ಅದ್ಧೂರಿ ದಸರಾ ಮಹೋತ್ಸವ ನೇರಪ್ರಸಾರ ಮಾಡಲಿದೆ.

 ಬುಧವಾರ ಬೆಳಿಗ್ಗೆ 9.05 ರಿಂದ ಮಧ್ಯಾಹ್ನ1ರ ವರೆಗೆ ಶ್ರೀ ಭಾರತಿತೀರ್ಥ ಸ್ವಾಮಿಜಿಯವರಿಂದ ನಡೆಯುವ ಗಂಗಾಪೂಜೆ, ದೇವಸ್ಥಾನಗಳ ಪ್ರತ್ಯಕ್ಷ ದರ್ಶನ, ಶ್ರೀ ಶಾರದೆಯ ಪೂಜೆ, ಮಹಾಮಂಗಳಾರತಿ, ಚಂಡಿಹೋಮ, ಅಶ್ವಪೂಜೆ ಇತ್ಯಾದಿ ವೀಕ್ಷಿಸಬಹುದು. ರಾತ್ರಿ 11ರಿಂದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಪೂಜೆಯ ವಿಶೇಷ ಪ್ರಸಾರ ಇರುತ್ತದೆ.

 ಶುಕ್ರವಾರ ಬೆಳಿಗ್ಗೆ 9.05 ರಿಂದ ಮಧ್ಯಾಹ್ನ1ರ ವರೆಗೆ ಶಾರದಾಂಬಾ ರಥೋತ್ಸವ, ಪಲ್ಲಕ್ಕಿ ಉತ್ಸವ ಮತ್ತು ದರ್ಬಾರ್ ಕಾರ್ಯಕ್ರಮಗಳ ಪ್ರಸಾರ ಇರುತ್ತದೆ.

ದೇವಿ ಮಹಿಮೆ
ಕನ್ನಡ ಎಫ್‌ಎಂ ರೇಡಿಯೊ ಕೇಂದ್ರ 92.7 ಬಿಗ್ ಎಫ್‌ಎಂ, ನವರಾತ್ರಿ ಪ್ರಯುಕ್ತ ಪ್ರತಿ ದಿನ ಬೆಳಿಗ್ಗೆ 5ರಿಂದ 7ರ ವರೆಗೆ ಸುಪ್ರಭಾತದಲ್ಲಿ `ದೇವಿ ಮಹಿಮೆ~ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಆರ್‌ಜೆ ರಶ್ಮಿ ಇದನ್ನು ನಡೆಸಿಕೊಡುತ್ತಿದ್ದಾರೆ. 

ಇದರಲ್ಲಿ ಒಂಬತ್ತು ಪ್ರಮುಖ ದೇವಸ್ಥಾನಗಳ ಪೂಜಾ ಕಾರ್ಯಕ್ರಮಗಳ ಕುರಿತು ಶ್ರೋತೃಗಳಿಗೆ ವಿವರಣೆ ನೀಡಲಾಗುವುದು. ಈಗಾಗಲೇ ಬನಶಂಕರಿಯ ಬನಶಂಕರಿ ದೇವಾಲಯ, ಬನ್ನೇರುಘಟ್ಟದ ಮೀನಾಕ್ಷಿ ದೇವಾಲಯ, ಮಲ್ಲೆೀಶ್ವರ ಸರ್ಕಲ್ ಮಾರಮ್ಮ, ಮೆಜೆಸ್ಟಿಕ್‌ನ ಅಣ್ಣಮ್ಮ ದೇವಿ, ಶಂಕರಪುರದ ಶಂಕರ ಮಠ- ಶಾರದಾ ದೇವಿ, ಯಶವಂತಪುರದ ಗಾಯಿತ್ರಿ ದೇವಾಲಯ ಕುರಿತು ಕಾರ್ಯಕ್ರಮ  ಪ್ರಸಾರವಾಗಿದೆ.

ಇಂದಿನಿಂದ ಅ. 6ರ ವರೆಗೆ ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿ ದೇವಾಲಯ, ಗವಿಪುರದ ಬಂಡೆಮಹಾಕಾಳಿ ದೇವಾಲಯ ಹಾಗೂ ಸಜ್ಜನ್‌ರಾವ್ ವೃತ್ತದ ಕನ್ನಿಕಾ ಪರಮೇಶ್ವರಿ ದೇವಾಲಯ ಕುರಿತು ಆಲಿಸಬಹುದು.

ಅನಿಮಲ್ ಪ್ಲಾನೆಟ್‌ನಲ್ಲಿ ಇಂದು ವನ್ಯಜೀವಿ ದಿನ
ಮಂಗಳವಾರ ವಿಶ್ವ ವನ್ಯಜೀವಿ ದಿನ. ಅನಿಮಲ್ ಪ್ಲಾನೆಟ್ ಚಾನೆಲ್ ಇದನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಿದೆ. ಮಧ್ಯಾಹ್ನ 12ರಿಂದ ರಾತ್ರಿ 12ರ ವರೆಗೆ ವನ್ಯ ಸಂಕುಲದ ವೈವಿಧ್ಯವನ್ನು ವೀಕ್ಷಿಸಬಹುದು.

ನದಿಯಲ್ಲಿರುವ ಡಾಲ್ಫಿನ್‌ಗಳು, ದಕ್ಷಿಣ ಆಫ್ರಿಕಾದ ಹೇನ್ಸ್, ಬೋರ್ನಿಯೊ ಕಾಡಿನ ಪಿಗ್ಮಿ ಆನೆ, ಇಥಿಯೋಪಿಯಾದ ಕಾಡು ತೋಳ, ನಮೀಬಿಯಾದ ನರಿಗಳು ಮತ್ತು ಆಫ್ರಿಕಾದ ಮೊಸಳೆ ಮುಂತಾದವುಗಳ ಬದುಕನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.