ಅಖಿಲ ಭಾರತ 6ನೇ ಖಾದಿ ಹಾಗೂ ಗ್ರಾಮೋದ್ಯೋಗ ವಸ್ತು ಪ್ರದರ್ಶನ 1946 ರಲ್ಲಿ ಬೆಂಗಳೂರಿನಲ್ಲಿ ಜರುಗಿತು. ಅದು ನಡೆದಿದ್ದು ಇಂದಿನ ಮೆಜಿಸ್ಟಿಕ್‌ನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ. ಆಗ ಅದಕ್ಕೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಹೆಸರಿಡಲಾಗಿತ್ತು. ನಂತರ ಅದು ಸುಭಾಷ್‌ನಗರ ಬಸ್ ನಿಲ್ದಾಣವೆಂದೇ ಹೆಸರಾಯಿತು.
ಬಸವನಗುಡಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ 1945 ರಲ್ಲಿ ಆರಂಭವಾಯಿತು. ಇದನ್ನು ಸ್ಥಾಪಿಸಿದವರು ಬಿ.ಪಿ. ವಾಡಿಯಾ ಹಾಗೂ ಸೋಫಿಯಾ ವಾಡಿಯಾ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಭಾರತ- ವೆಸ್ಟ್‌ಇಂಡೀಸ್ ನಡುವೆ ನಡೆಯಿತು (1974).
ಪಾರಿವಾಳಗಳ ವಾಸಕ್ಕೆಂದು ಪಾರಿವಾಳ ಗೃಹವನ್ನು 1893 ರಲ್ಲಿ ಬೆಂಗಳೂರು ಲಾಲ್‌ಬಾಗ್‌ನಲ್ಲಿ ನಿರ್ಮಿಸಲಾಯಿತು. ಇದು ಕಲಾತ್ಮಕ ಗೂಡುಗಳಿರುವ ಆಕರ್ಷಕ ಕಟ್ಟಡ.
ಕೋಟೆ ವೆಂಕಟರಮಣಸ್ವಾಮಿ ದೇವಾಲಯವನ್ನು ಮೈಸೂರು ಮಹಾರಾಜ ಚಿಕ್ಕದೇವರಾಜ ಒಡೆಯರು ನಿರ್ಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.