ADVERTISEMENT

ಬೆರಗುಗೊಂಡ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST
ಬೆರಗುಗೊಂಡ ಪ್ರೇಕ್ಷಕರು
ಬೆರಗುಗೊಂಡ ಪ್ರೇಕ್ಷಕರು   

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟಾಂಡರ್ಡ್ ಸಹಯೋಗದೊಂದಿಗೆ ಹಲವು ಐಟಿ ಕೈಗಾರಿಕೆಗಳ ಜೊತೆಗೂಡಿ ಮೂರನೇ ಆಯಾಮದ ಐಟಿ ರಸಪ್ರಶ್ನೆ ಟಿಸಿಎಸ್ ಟೆಕ್ ಬೈಟ್ಸ್ ಹಮ್ಮಿಕೊಂಡಿತ್ತು. ಐಟಿ ಉದ್ಯಮಿಗಳಿಗೆ  ಪ್ರಸ್ತುತ ತಂತ್ರಜ್ಞಾನದ ಬೆಳವಣಿಗೆಯ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿತು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂರು ಹಂತದಲ್ಲಿ ಈ ಸ್ಪರ್ಧೆಯನ್ನು ನಡೆಸಲಾಯಿತು. ಮೊದಲ ಸುತ್ತಿನ ಆಯ್ಕೆ ಕಾಲೇಜು ಮಟ್ಟದಲ್ಲಿ ನಡೆಸಿದ್ದರು. ಪ್ರತಿ ಸಂಸ್ಥೆಗಳಿಂದ 10 ತಂಡಗಳನ್ನು ಆಯ್ಕೆಯನ್ನು ಮಾಡಲಾಗಿತ್ತು. ಈ ತಂಡಗಳು ಗುಲ್ಬರ್ಗಾ, ಮಂಗಳೂರು, ಧಾರವಾಡ, ತುಮಕೂರು, ಮೈಸೂರು, ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ನಡೆಸಿದ ಪ್ರಾದೇಶಿಕ ಫೈನಲ್ಸ್‌ನಲ್ಲಿ ಭಾಗವಹಿಸಿದ್ದವು. 

 ಈ ರಸಪ್ರಶ್ನೆ ಒಲಿಂಪಿಕ್ ವಿಷಯವನ್ನು ಅಧರಿಸಿತ್ತು. ಮೊದಲ ಸುತ್ತಿನಲ್ಲಿ `ವೈಡರ್ ವರ್ಲ್ಡ್~ ನಡೆಸಲಾಯಿತು. ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ತಯಾರಿ ನಡೆಸಿ ಕಷ್ಟದ ಪ್ರಶ್ನೆಗಳಿಗೂ ಉತ್ತರ ನೀಡಿ ಪ್ರೇಕ್ಷಕರನ್ನು ಬೆರಗುಗೊಳಿಸಿದರು.

ಚೈತನ್ಯ .ಕೆ, ಸಮರ್ಥ. ಆರ್ ಸ್ಪರ್ಧೆಯಲ್ಲಿ ಜಯಗಳಿಸಿದರು. ಟ್ರೋಫಿ  ಜತೆಗೆ ರೂ.60ಸಾವಿರ ಮೊತ್ತದ ಟಿಸಿಎಸ್ ಶೈಕ್ಷಣಿಕ ವಿದ್ಯಾರ್ಥಿ ವೇತನ, ಮೊಬೈಲ್ ಫೋನ್, ಫಾಸ್ಟ್‌ಟ್ರ್ಯಾಕ್ಸ್ ಗಿಫ್ಟ್ ಕಾರ್ಡ್ಸ್, ಅಯಾನ್ ಪೆನ್‌ಡ್ರೈವ್ ಬಹುಮಾನವಾಗಿ ಪಡೆದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.