ADVERTISEMENT

ಬೆಳಕಿನ ಕೋಲುಗಳು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ನಗರದಲ್ಲಿ `ನಾಗರಿಕ ಪ್ರಜ್ಞೆ~ ಎಷ್ಟರ ಮಟ್ಟಿಗಿದೆ ಎಂಬುದು ಆಗೀಗ ಅನಾವರಣವಾಗುತ್ತಲೇ ಇರುತ್ತದೆ. ದೀಪಾವಳಿ ಸಂದರ್ಭದಲ್ಲಿಯೂ ಜನರ ಪಟಾಕಿ ಮೋಹ ಕೆಲವೊಮ್ಮೆ ಕಿರಿಕಿರಿ ಮಾಡುವುದುಂಟು.

ಫ್ಲೈಓವರ್ ಮೇಲೆ ಸಾಗುವ ಸವಾರರ ತಲೆಗಳ ನಡುವೆಯೇ ಚೆಲ್ಲಾಪಿಲ್ಲಿಯಾಗುವ ಬೆಳಕಿನ ಕೋಲುಗಳು ದೂರದಿಂದ ನೋಡಲು ಚೆನ್ನ. ಆ ಸವಾರರ ಪಾಲಿಗೆ ಅವು ಸುಂದರ ಬೆಳಕಿನ ಕೋಲುಗಳಾಗಲು ಹೇಗೆ ಸಾಧ್ಯ? ಬೆಳಕು ಹಚ್ಚುವುದು ಕತ್ತಲನ್ನು ಓಡಿಸಲು. ಪಟಾಕಿ ಹಚ್ಚುವುದು ಬೆಳಕನ್ನು ಸಂಕೇತವಾಗಿಸಲು.

ಕ್ಯಾಮೆರಾ ಕಣ್ಣಿಗೆ ಚೆಂದವಾಗಿ ಕಾಣುವ ಈ ಬೆಳಕಿನ ಕೋಲುಗಳು ಯಾರದ್ದೋ ಪಾಲಿಗೆ ನೋವಿನ ಕಿಡಿಗಳೂ ಆಗಬಹುದು ಎಂಬ ಅರಿವು ಜನರಲ್ಲಿ ಮೂಡಲಿ. ನೋಡನೋಡುತ್ತಲೇ ಇನ್ನೊಂದು ದೀಪಾವಳಿ ಸರಿದುಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.