ADVERTISEMENT

ಬ್ರಿಟಾನಿಯಾ ಜೊತೆಗೆ ಮೋಜಿನ ಕಲಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಬ್ರಿಟಾನಿಯಾ ಜೊತೆಗೆ ಮೋಜಿನ ಕಲಿಕೆ
ಬ್ರಿಟಾನಿಯಾ ಜೊತೆಗೆ ಮೋಜಿನ ಕಲಿಕೆ   

ಅಮ್ಮ, ನನಗೆ ಮೆಟ್ರಿಕ್ ವ್ಯವಸ್ಥೆ ಎಂದರೆ ಇಷ್ಟ. ಏಕೆಂದರೆ ಕಿಂಗ್ ಹೆನ್ರಿ ಚಾಕೊಲೇಟ್ ಹಾಲು ಸೇವಿಸಿದ್ದರಿಂದ ಮೃತಪಟ್ಟ (ಕಿಂಗ್ ಹೆನ್ರಿ ಡೈಡ್ ಬೈ ಡ್ರಿಂಕಿಂಗ್ ಚಾಕೊಲೇಟ್ ಮಿಲ್ಕ್). ಗೊಂದಲಮಯವಾಗಿದೆಯೇ? `ಟ್ರೀಟ್‌ಕ್ವೆಸ್ಟ್ 2011~ರ ನೂತನ ಆವೃತ್ತಿಯಲ್ಲಿ ಭಾಗವಹಿಸಿದ ನಂತರ ನಿಮ್ಮ ಮಗು ಹೀಗೆಯೇ ಹೇಳುತ್ತದೆ. ಕಲಿಕೆಯ ನೂತನ ಮಾರ್ಗ ಇಲ್ಲಿದೆ.

ಬ್ರಿಟಾನಿಯಾ ಟ್ರೀಟ್ ದೇಶದ ಅತ್ಯಂತ ಜನಪ್ರಿಯ ಕ್ರೀಮ್ ಬಿಸ್ಕತ್‌ನ ಬ್ರಾಂಡ್. ಟ್ರೀಟ್ ಕ್ವೆಸ್ಟ್ ಈಗ ಶಾಲಾ ಸಂಪರ್ಕ ಕಾರ್ಯಕ್ರಮದ ಅಡಿಯಲ್ಲಿ  ದೇಶದ 15 ನಗರಗಳ 1,100 ಶಾಲೆಗಳಲ್ಲಿ ಮೋಜಿನ ಕಲಿಕೆ ತರಲು ಉದ್ದೇಶಿಸಿದೆ. ಶಾಲಾ ಕೊಠಡಿ ಹಾಗೂ ಬೋಧನೆಯಲ್ಲಿ ಏಕತಾನತೆ ಹೋಗಲಾಡಿಸಿ ಕಲಿಕೆಯನ್ನು ಆನಂದಿಸುವಂತೆ ಮಾಡುವುದು ಇದರ ಉದ್ದೇಶ. ಪದ್ಯಗಳು ಬಾಲಿಶವಾಗಿರಬೇಕು ಮತ್ತು ಎಲ್ಲಾ ಹಿಂದಿನ ನಿಯಮಗಳನ್ನು ಮುರಿಯಬೇಕು ಎಂಬುದೇ ಇದರ ನಿಯಮ. ಕಲಿಕೆ ಇಲ್ಲಿ ಮೋಜಿನಿಂದ ಕೂಡಿರುತ್ತದೆ. ಮಕ್ಕಳು ತಮ್ಮ ಶಿಕ್ಷಕರನ್ನು ಕಷ್ಟಕರವಾದ ಪ್ರಶ್ನೆ ಕೇಳುತ್ತಾರೆ. ಶಿಕ್ಷಕರು ಅಷ್ಟೇ ಸರಳವಾಗಿ ಉತ್ತರ ನೀಡುತ್ತಾರೆ. ಈಗ ಗಣಿತದ ಚಿನ್ನೆಗಳು ಮತ್ತು ಫಾರ್ಮುಲಾಗಳನ್ನು ಮಕ್ಕಳಾಟಕ್ಕೆ ವಸ್ತುವಾಗುತ್ತವೆ.

ಟ್ರೀಟ್ ಕ್ವೆಸ್ಟ್ ತನ್ನ ತುಂಟ ಬ್ರಾಂಡ್ ಮಾಸ್ಕಾಟ್ ಫನ್‌ಟೂನ್‌ನೊಂದಿಗೆ 1,100 ಶಾಲೆಗಳ ಸುಮಾರು 9 ಲಕ್ಷ ಮಕ್ಕಳನ್ನು ಭೇಟಿಯಾಗಲಿದೆ. 6ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಕಲಿಕೆಯಲ್ಲಿ ಮೋಜಿನ ಸಮೃದ್ಧ ಅನುಭವ ಅನುಭವಿಸಲಿದ್ದಾರೆ.

`ಮಕ್ಕಳನ್ನು ಮಕ್ಕಳಾಗಿ ಇರುವಂತೆ ಬಿಡುವುದು ಯಾವಾಗಲೂ ನಮ್ಮ ಉದ್ದೇಶ. ಈ ವರ್ಷದ ಟ್ರೀಟ್ ಕ್ವೆಸ್ಟ್‌ನೊಂದಿಗೆ ನಾವು ಕಲಿಕೆಯನ್ನು ಪುನರ್ ನಿರೂಪಿಸಲು ಮತ್ತು ಅದನ್ನು ಮಕ್ಕಳಿಗೆ ಹೆಚ್ಚು ಉತ್ಸಾಹಕರವಾಗಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ಆಸಕ್ತಿಕರ ಮಾರ್ಗಗಳನ್ನು ರೂಪಿಸಿ ಕಲಿಕೆಯಲ್ಲಿ ಎದುರಾಗುವ ಕಷ್ಟವನ್ನು ನಿವಾರಿಸುವ ಪ್ರಯತ್ನ ಕೈಗೊಂಡಿದ್ದೇವೆ. ಇದು ಮಕ್ಕಳ ಆರೋಗ್ಯಕರ ಮತ್ತು ಆನಂದಕರ ಬೆಳವಣಿಗೆಗೆ ಅಗತ್ಯ. ಕಲಿಕೆ ಅವರಿಗೆ ಹೆಚ್ಚು ಮೋಜಿನದಾಗಿರಬೇಕು~ ಎನ್ನುತ್ತಾರೆ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಡಿಲೈಟ್ ಅಂಡ್ ಲೈಫ್‌ಸ್ಟೈಲ್‌ನ ವಿಭಾಗೀಯ ನಿರ್ದೇಶಕಿ ಶಾಲಿನಿ ದೇಗನ್.                                                                                              
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.