ADVERTISEMENT

ಭವ್ಯಾ ಸಂಗೀತ ಕಛೇರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 19:30 IST
Last Updated 13 ನವೆಂಬರ್ 2012, 19:30 IST
ಭವ್ಯಾ ಸಂಗೀತ ಕಛೇರಿ
ಭವ್ಯಾ ಸಂಗೀತ ಕಛೇರಿ   

ಕರ್ನಾಟಕ ಸಂಗೀತದಲ್ಲಿ ಎಚ್.ಎಸ್. ಭವ್ಯಾ ಉದಯೋನ್ಮುಖ ಪ್ರತಿಭೆ. ವೈಣಿಕ ವಿದ್ವಾನ್ ಎಚ್. ಕೆ. ಸುಬ್ಬಣ್ಣ ಮತ್ತು ವಿದುಷಿ ಸುಶೀಲ ಸುಬ್ಬಣ್ಣ ಅವರ ಮಗಳಾದ ಭವ್ಯಾ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆ. ಸಂಗೀತದ ಆರಂಭ ಶಿಕ್ಷಣವನ್ನು ತಾಯಿಯ ಬಳಿಯೇ ಕಲಿತ ಭವ್ಯಾ, ಇದೀಗ ಉನ್ನತ ಸಂಗೀತ ಅಭ್ಯಾಸವನ್ನು ವಿದ್ವಾನ್ ಆರ್.ಕೆ. ಪದ್ಮನಾಭ ಅವರಲ್ಲಿ ಕಲಿಯುತ್ತಿದ್ದಾರೆ.

ಮಹಾರಾಣಿ ಕಾಲೇಜಿನಲ್ಲಿ ಬಿ.ಎ ಓದಿದ ಇವರು ಸದ್ಯ ಜೈನ್ ಕಾಲೇಜಿನಲ್ಲಿ ಎಂ.ಎ ಸಂಗೀತ ಪದವಿ ಕಲಿಯುತ್ತಿದ್ದಾರೆ. ಪದವಿ ಕಾಲೇಜಿನಲ್ಲಿರುವಾಗ ಅನೇಕ ರಾಜ್ಯ ಮಟ್ಟದ ಅಂತರಕಾಲೇಜು ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ಈಕೆ ತಿರುಚಿಯ ರಸಿಕ ರಂಜನ ಸಭಾ, ತಿರುಪತಿಯ ಯುವಲೀಲಾಗಳಲ್ಲಿ ಸಂಗೀತ ಪಾರಿತೋಷಕ ಪಡೆದಿದ್ದಾರೆ. ರಾಮನವಮಿ, ಗಣೇಶೋತ್ಸವಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿದ ಅನುಭವ ಈಕೆಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಸುವ `ಯುವಸೌರಭ~ ಕಾರ್ಯಕ್ರಮದಲ್ಲಿ ಬುಧವಾರ (ನ.14) ಭವ್ಯಾ ಅವರ ಸಂಗೀತ ಕಛೇರಿ ಇದೆ. ಸಮಯ: ಸಂಜೆ 6.00 ಗಂಟೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.