ADVERTISEMENT

ಮಕ್ಕಳ ಬುದ್ಧಿಮತ್ತೆಗೆ ಐಕೆನ್ ಸೈಂಟಿಫಿಕಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಮಗುವಿಗೂ ಬುದ್ಧಿಮತ್ತೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಮೆಕ್ಸಸ್ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಆಧಾರಿತ ತಂತ್ರಜ್ಞಾನವಾದ `ಐಕೆನ್ ಸೈಂಟಿಫಿಕಾ~ವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ.

ಬೇಯರ್, ಮೈಕ್ರೋ ಇಂಕ್ಸ್ ಮತ್ತು ಪ್ರಥಮ್ ಎನ್‌ಜಿಓ ಈ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ತರಗತಿ ಪಾಠದ ಹೊರಗಡೆ ವಾಸ್ತವ ಜಗತ್ತಿನ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಲ್ಲಿ ಅಭ್ಯರ್ಥಿಗಳು ವಿಶೇಷ ಸಮಸ್ಯೆಗಳಿಗೆ ಲಿಖಿತವಾಗಿ ಪರಿಹಾರ ಕಂಡುಕೊಳ್ಳುವ ಸವಾಲನ್ನು ಎದುರಿಸಲಿದ್ದಾರೆ. ನವೀನ ಸಮಸ್ಯೆಗಳಲ್ಲಿ ವಿನ್ಯಾಸ ತಂತ್ರಜ್ಞಾನ, ಮೆಕಾನ್ಸಿಕ್, ವಿಜ್ಞಾನ ಪ್ರಯೋಗಗಳು, ಮಾಡೆಲ್ ವಿನ್ಯಾಸ, ಸುಸ್ಥಿರ ಅಭಿವೃದ್ಧಿ ಇನ್ನಿತರೆ ಅಂಶಗಳನ್ನು ಐಕೆನ್ ಸೈಂಟಿಫಿಕಾ ಒಳಗೊಂಡಿದೆ.

ಐಕೆನ್ ಸೈಂಟಿಫಿಕಾ: ಐಕೆನ್ ಸೈಂಟಿಫಿಕಾ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿದ್ದು, ನಾಲ್ಕು ಸುತ್ತಿನಲ್ಲಿ ಸ್ಪರ್ಧೆಗಳು ನಡೆಯಲಿವೆ. ನಗರ,  ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ ಈ ಸ್ಪರ್ಧೆಗಳು 4ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಏರ್ಪಡಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ 15 ರಾಷ್ಟ್ರಗಳ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಮಾಹಿತಿಗೆ ದೇವೇಂದ್ರ ಶರ್ಮಾ (9223236259) ಅವರನ್ನು ಸಂಪರ್ಕಿಸಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.