ADVERTISEMENT

‘ಮನಸು ಮಲ್ಲಿಗೆ’ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST

ಮರಾಠಿಯಲ್ಲಿ ಸೂಪರ್ ಹಿಟ್ ಆಗಿ ವಿಶ್ವದ ಗಮನ ಸೆಳೆದಿದ್ದ ಚಿತ್ರ ‘ಸೈರಾಟ್’ ಚಿತ್ರವನ್ನು ಎಸ್.ನಾರಾಯಣ್ ಅವರು ಕನ್ನಡಕ್ಕೆ ತರುತ್ತಿದ್ದಾರೆ. ಚಿತ್ರೀಕರಣ ಮುಕ್ತಾಯಗೊಂಡಿದೆ.

ರಾಕ್‌ಲೈನ್ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೊ ಜಂಟಿ ನಿರ್ಮಾಣದ ಈ ಚಿತ್ರದ ಮೂಲಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ನಾರಾಯಣ್‌ ಮತ್ತೆ ಒಂದಾಗಿದ್ದಾರೆ.  ನಿಶಾಂತ್ ಹಾಗೂ ರಿಂಕು ರಾಜಗುರು ನಾಯಕ–ನಾಯಕಿಯಾಗಿ ಅಭಿನಯಿಸಿದ್ದು ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.

ಶ್ರೀಕಾಂತ್ ಸಂಕಲನ, ಮನೋಹರ ಜೋಷಿ ಛಾಯಾಗ್ರಹಣ, ಇಸ್ಮಾಯಿಲ್ ಕಲಾ ನಿರ್ದೇಶನ ಹಾಗೂ ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ಯೋಗರಾಜ ಭಟ್ ಮತ್ತು ಕವಿರಾಜ್  ಅವರ ಗೀತ ಸಾಹಿತ್ಯ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.