ADVERTISEMENT

ಮರೆಯುವ ಆತಂಕದಲ್ಲಿದ್ದ ಡಯಾನಾ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಮರೆಯುವ ಆತಂಕದಲ್ಲಿದ್ದ ಡಯಾನಾ
ಮರೆಯುವ ಆತಂಕದಲ್ಲಿದ್ದ ಡಯಾನಾ   

ತುಮ್ಹಿ ಹೋ ಬಂಧು ತುಮ್ಹಿ ಸಖಾ ಹೋ... ಎಂಟು ವರ್ಷಗಳ ಹಿಂದೆ ಕಾಕ್‌ಟೇಲ್‌ ಚಲನಚಿತ್ರ ಬಿಡುಗಡೆಯಾದಾಗ ಈ ಹಾಡಿನಿಂದ ಡಯಾನಾ ಬಲು ಫೇಮಸ್‌ ಆದ್ರು. ಸೈಫ್‌ ಅಲಿಖಾನ್‌ ದೀಪಿಕಾ ಪಡುಕೋಣೆ ಜೊತೆಗೆ ನಟಿಸಿದ್ದ ಈ ನೀಳ ಕಾಯದ ಸುಂದರಿ ತನ್ನ ನಟನೆಯಿಂದಲೇ ಗಮನ ಸೆಳೆದಿದ್ದರು.

ಕಾಕ್‌ಟೇಲ್‌ ಸೂಪರ್‌ ಹಿಟ್‌ ಆಯಿತು. ದೀಪಿಕಾ ಚಿತ್ರಗಳ ಆಯ್ಕೆಯಲ್ಲಿ ಚೂಸಿಯಾಗಿದ್ದು, ಇದೇ ಚಿತ್ರದಿಂದ. ಸೈಫ್‌ ಅಲಿ ಖಾನ್‌ ಗ್ರಾಫ್‌ ಸಹ ಬದಲಾಯಿತು. ಆದರೆ ಡಯಾನಾ ಎಲ್ಲಿ ಮಾಯವಾದರು? ಹ್ಯಾಪ್ಪಿ ಭಾಗ್‌ ಜಾಯೇಗಿ ಚಿತ್ರದಲ್ಲಿ ಮಿಂಚಿದರು. ಮತ್ತೆ ಮಾಯವಾದರು. ಈ ನಾಲ್ಕು ವರ್ಷಗಳ ಅಂತರದಲ್ಲಿ ಚಿತ್ರ ಮಾಡುವುದರಿಂದ ಬಾಲಿವುಡ್‌ ಅವರನ್ನು ಮರೆತೇಹೋಗಿರಬೇಕು ಎಂಬ ಆತಂಕ ಡಯಾನಾಗೆ ಸದಾ ಕಾಡುತ್ತಿತ್ತಂತೆ.

2014ರಲ್ಲಿ ಹ್ಯಾಪ್ಪಿ ಭಾಗ್‌ ಜಾಯೆಗಿ ಚಿತ್ರ ಬಿಡುಗಡೆಯಾದಾಗ ಈ ಮರೆವಿನ ಬಗ್ಗೆ ಅರ್ಥವಾಗಿತ್ತು. ಜನರೆಲ್ಲ ತೆರೆಯಿಂದಾಚೆ ಹೋದವರನ್ನು ಮರೆತೇ ಹೋಗುತ್ತಾರೆ ಎಂದು ಹಲವರು ಹೇಳಿದ್ದರು. ಇರಬಹುದು ಎಂದುಕೊಂಡು ಸುಮ್ಮನಾಗಿದ್ದೆ. ಆದರೆ ಒಂದು ಚಲನಚಿತ್ರದ ನಂತರ ಇನ್ನೊಂದು ಚಿತ್ರ ತೆರೆ ಕಾಣದಿದ್ದರೆ ಎಲ್ಲರೂ.. ನಟನಟಿಯರು ಇನ್ನೇನೋ ಮಾಡುತ್ತಿರುತ್ತಾರೆ ಎಂದು ಭಾವಿಸುತ್ತಾರೆ. ತಾರೆಯರು ಮತ್ತೆ ಕಾಣಿಸಿಕೊಳ್ಳದಿದ್ದರೆ ಮರೆತೇ ಹೋಗುತ್ತಾರೆ. ಆದರೆ ನಾನು ಎಲ್ಲ ಅವಕಾಶಗಳನ್ನು ಬಳಸಿಕೊಂಡಿರಲಿಲ್ಲ. ಆದರೆ ಮನುಷ್ಯ ಸಹಜ ಸ್ವಭಾವವೆಂದರೆ ಒಮ್ಮೆ ಮಿಂಚಿದ ಮೇಲೆ ಮರೆಯಾಗುವ ಬಗೆಗಿನ ಆತಂಕ ಕಾಡಿಯೇ ಕಾಡುತ್ತದೆ. ನಾನೂ ಇದಕ್ಕೆ ಹೊರತಾಗಿರಲಿಲ್ಲ’ ಎನ್ನುತ್ತಾರೆ ಅವರು.

ADVERTISEMENT

ಇದೀಗ ಮತ್ತೆ ನಾಲ್ಕು ವರ್ಷಗಳ ಬಿಡುವಿನ ನಂತರ ಪರಮಾಣು ದ ಸ್ಟೋರಿ ಆಫ್‌ ಪೋಖ್ರಾನ್‌ ಚಿತ್ರದಲ್ಲಿ ಜಾನ್‌ ಅಬ್ರಹಾಂ ಜೊತೆಗೆ ನಟಿಸಿದ್ದಾರೆ.

‘ನನಗೆ ನನ್ನ ಈ ನಿಧಾನದ ಬೆಳವಣಿಗೆಯ ಬಗ್ಗೆ ಅರಿವಿತ್ತು. ಅದಕ್ಕೆ ಕಾರಣವೂ ಗೊತ್ತಿತ್ತು. ನನ್ನ ಮುಂದೆ ಬಂದಿದ್ದ ಎಲ್ಲ ಅವಕಾಶಗಳನ್ನೂ ನಾನು ಬಾಚಿಕೊಳ್ಳಲಿಲ್ಲ. ನನ್ನ ಆಂತರ್ಯ ಯಾವತ್ತಿಗೂ ಈ ಬಗ್ಗೆ ಒಂದು ಎಚ್ಚರ ನೀಡುತ್ತಲೇ ಇತ್ತು. ಪೋಖ್ರಾನ್‌ ಒಪ್ಪಿಕೊಂಡಿದ್ದೂ ಹೀಗೆ ಒಳಧ್ವನಿಯ ಮಾತನ್ನು ಕೇಳಿಯೇ. ನನ್ನ ಆಯ್ಕೆಗಳೆಲ್ಲವೂ ನನ್ನ ಒಳಧ್ವನಿಯ ಅಭಿಪ್ರಾಯಗಳೇ ಆಗಿದ್ದವು.

ಕೆಲವೊಮ್ಮೆ ಮಲಗೆದ್ದ ನಂತರ ನಿಮಗೆ ಇಂಥ ಚಿಂತೆ ಕಾಡಬಹುದು... ಓಹ್‌... ಇವೊತ್ತೇನು ಮಾಡುವೆ? ಇನ್ನೇನು ಮಾಡುವೆ..? ನಿನ್ನ ಕೈಲೀಗ ಒಂದೇ ಒಂದು ಚಿತ್ರವಿಲ್ಲ.. ಹೌದು ನನಗೂ ಹೀಗೆ ಅನಿಸಿದ್ದಿದೆ. ಆದರೆ ಕೊನೆಗೆ ನಮ್ಮನ್ನು ಕಾಪಾಡುವುದು ನಮ್ಮ ಅಂತರಾತ್ಮವೇ. ಈ ಅನುಭವವೇ ಅನನ್ಯವಾದುದು. ನಾನು ಎಂದಿಗೂ ನನ್ನ ಆಂತರ್ಯದ ವಿರುದ್ಧ ಹೋಗಲೇ ಇಲ್ಲ. ಹೋಗಲಾಗುವುದೇ ಇಲ್ಲ.  ಆದರೆ ಜನಮಾನಸದಲ್ಲಿ ನನ್ನ ನೆನಪುಳಿಯುವಂಥ ಪ್ರಯತ್ನಗಳನ್ನೂ ನಾನು ಮಾಡಲಿಲ್ಲ. ಯಾವುದೇ ವಾದ ವಿವಾದಗಳನ್ನು ಹುಟ್ಟುಹಾಕಲಿಲ್ಲ. ಸುಮ್ನೆ ಪ್ರಚಾರ ಬಯಸಲಿಲ್ಲ.  ಜನರ ನಡುವೆ ನಮ್ಮ ಹೆಸರು ಓಡಾಡುತ್ತಿರಬೇಕು, ಪ್ರಚಾರದಲ್ಲಿರಬೇಕು ಎಂದರೆ ಯವಾಗಲೂ ಸ್ವಸ್ತುತಿ, ಪರನಿಂದನೆ ಮಾಡುತ್ತಲೇ ಇರಬೇಕು ಎಂದೇನೂ ಇಲ್ಲವಲ್ಲ!

ಇಷ್ಟಕ್ಕೂ ಜನರು ನಿಮ್ಮನ್ನು ನೆನಪಿಡುವುದು ನಿಮ್ಮ ಇಂಥ ಪ್ರಚಾರತಂತ್ರಗಳಿಂದಲ್ಲ. ಅದೂ ನನಗೆ ಅರ್ಥವಾಗಿದೆ’ ಎನ್ನುವ ಡಯಾನಾ ತಮ್ಮ ಭೀತಿ, ಆತಂಕವನ್ನು ಮೆಟ್ಟಿರುವ ಬಗೆಯನ್ನೂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.