ADVERTISEMENT

ಮಹಾದಾನಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 19:30 IST
Last Updated 11 ಮಾರ್ಚ್ 2011, 19:30 IST


ಬಿ.ಕೆ. ಮರಿಯಪ್ಪ ಧರ್ಮಸಂಸ್ಥೆ: ಭಾನುವಾರ ಬಿ.ಕೆ. ಮರಿಯಪ್ಪ ಅವರ 132ನೇ ಜಯಂತಿ ಆಚರಣೆ, ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಕೆ. ವಿದ್ಯಾ ನಮ್ರತಾ ಅವರಿಂದ ಭಾವಗೀತೆ,  10.30ಕ್ಕೆ ಉದ್ಘಾಟನೆ: ಲೋಕಸಭಾ ಸದಸ್ಯ ಪಿ.ಸಿ. ಮೋಹನ್, ಅತಿಥಿಗಳು: ಪಿ. ಎನ್. ಸದಾಶಿವ, ಬಿ.ವಿ. ಗಣೇಶ್, ಜಿ. ಕೋಕಿಲ ಚಂದ್ರಶೇಖರ್, ಅಧ್ಯಕ್ಷತೆ: ಬಿ.ಕೆ. ಮರಿಯಪ್ಪ ಧರ್ಮಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿಎನ್. ಪುಟ್ಟರುದ್ರ.

ದಿವಂಗತ ಬಿ.ಕೆ. ಮರಿಯಪ್ಪ ಅವರ ಹೆಸರು ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಜನಜನಿತ. ಸ್ವಾತಂತ್ರ್ಯಪೂರ್ವದಲ್ಲಿ ಉಳ್ಳವರಿಗೆ ಮಾತ್ರ ವಿದ್ಯೆ ಸಾಧ್ಯ ಇದ್ದಂತ ದಿನಗಳಲ್ಲಿ ಬಿ.ಕೆ. ಮರಿಯಪ್ಪನವರು ಜಾತಿ ಭೇದವಿಲ್ಲದೇ ಆರ್ಥಿಕವಾಗಿ ಹಿಂದುಳಿದ ಎಲ್ಲ ಜನಾಂಗದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಅವಕಾಶ ಮಾಡಿಕೊಟ್ಟರು. ತಮಗೆ 35 ವರ್ಷವಾದಾಗ ಆಸ್ತಿಯನ್ನೆಲ್ಲಾ ದಾನ ಮಾಡಿ ಅದರ ಫಲ ವಿದ್ಯಾರ್ಥಿ ವೃಂದಕ್ಕೆ ಸಲ್ಲುವಂತೆ ಮಾಡಿದರು. ಅವರ ತ್ಯಾಗದ ಫಲವಾಗಿ 1921ರ ಜುಲೈನಲ್ಲಿ 45 ವಿದ್ಯಾರ್ಥಿಗಳೊಂದಿಗೆ ಬಿ.ಕೆ. ಮರಿಯಪ್ಪ ವಿದ್ಯಾರ್ಥಿ ನಿಲಯ ಆರಂಭವಾಯಿತು.

1946ರಲ್ಲಿ  ವಿದ್ಯಾರ್ಥಿ ನಿಲಯದ ಸೌಲಭ್ಯ ಪಡೆದು ಉದ್ಯೋಗ ಹಿಡಿದ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಥಾಪನೆಗೆ ಮುಂದಾದರು. ಈ ಸಂಘ ಸಂಸ್ಥೆಗೆ ನಿರಂತರವಾಗಿ ಆರ್ಥಿಕ ನೆರವು, ಕಾಣಿಕೆ ನೀಡುತ್ತಲೇ ಇದೆ. ಬಿ.ಕೆ. ಮರಿಯಪ್ಪ ಧರ್ಮಸಂಸ್ಥೆ ಈಗ ಬಡ ವೃದ್ಧರಿಗೆ ಸಮಾಜಿಕ ಭದ್ರತೆ ಕಲ್ಪಿಸಲು ವೃದ್ಧಾಶ್ರಮ ಸ್ಥಾಪಿಸಲು ಸಿದ್ಧತೆ ನಡೆಸಿದೆ. ಪ್ರಸ್ತುತ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮರಿಯಪ್ಪನವರ 132ನೇ ಜಯಂತಿ ಆಚರಿಸುತ್ತಿದೆ.

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಮಂದಿರ, ಪಂಪ ಮಹಾಕವಿ ರಸ್ತೆ.
ಮಧ್ಯಾಹ್ನ 2.30ಕ್ಕೆ ಹಿರಿಯ ವಿದ್ಯಾರ್ಥಿಗಳ ಮಿಲನ. ಸ್ಥಳ: ವಿದ್ಯಾರ್ಥಿ ನಿಲಯ ಸಭಾಂಗಣ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ.

ತಾಳವಾದ್ಯ ವಿಚಾರ ಸಂಕಿರಣ
ಪರ್ಕಸ್ಸಿವ್ ಆರ್ಟ್ಸ್ ಸೆಂಟರ್ ಮತ್ತು ಎಂಇಎಸ್ ಕಲಾವೇದಿಗಳು  ಭಾನುವಾರ ತಾಳವಾದ್ಯ ಕುರಿತಂತೆ 16ನೇ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸಿವೆ.

ಇಲ್ಲಿ ‘ಹಿಂದುಸ್ತಾನಿ ತಾಳಪದ್ಧತಿಯಲ್ಲಿ ರಚನೆಗಳು ಹಾಗೂ ಅಭಿಪ್ರಾಯಗಳು’ ಕುರಿತು ರವೀಂದ್ರ ಯಾವಗಲ್, ಉಮೇಶ್ ಮೊಗ್ಗೆ, ಉದಯರಾಜ ಕರ್ಪೂರ ವಿಷಯ ಮಂಡಿಸಲಿದ್ದಾರೆ. ಉದ್ಘಾಟನೆ: ಪಂಡಿತ್ ಶೇಷಗಿರಿ ಹಾನಗಲ್. ಅತಿಥಿ: ಡಾ.ಎಂ. ಸೂರ್ಯಪ್ರಸಾದ್.
ಸ್ಥಳ; ಎಂಇಎಸ್ ಕಾಲೇಜು ಸಭಾಂಗಣ, 15ನೇ ಮುಖ್ಯ ರಸ್ತೆ, ಮಲ್ಲೇಶ್ವರ. ಬೆಳಿಗ್ಗೆ 10.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.