ADVERTISEMENT

ಮಹಿಳಾ ಸಬಲೀಕರಣಕ್ಕೆ ಈಡಲ್‌ಗಿವ್ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಈಡಲ್‌ಗಿವ್ ಸೋಶಿಯಲ್ ಇನ್ನೋವೇಶನ್ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಸಂಘಟನೆಗಳಿಗೆ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಾ ಬರುತ್ತಿದೆ.

ಈ ಸಂಬಂಧ ದಕ್ಷಿಣ ಭಾರತದಲ್ಲಿ ಆರೋಗ್ಯ ಮತ್ತು ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಆರ್ಥಿಕ ಭದ್ರತೆ ಮೊದಲಾದ ಹಕ್ಕುಗಳ ಪ್ರಾತಿನಿಧ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.

ಮಹಿಳೆಯರು ಎದುರಿಸುತ್ತಿರುವ ಅಸಂಖ್ಯಾತ ಸವಾಲುಗಳನ್ನು ಎದುರಿಸಲು ಸಹಾಯ ಮಾಡುವ ಸಂಘಟನೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಪ್ರಶಸ್ತಿಯ ಆಶಯ. ಕಳೆದ ಮೂರು ವರ್ಷದಲ್ಲಿ ಅದು 1.8 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪ್ರಶಸ್ತಿ ರೂಪದಲ್ಲಿ ವಿತರಿಸಿದೆ.

ಅರ್ಜಿ ಸಲ್ಲಿಸಲು ಸೆ. 23 ಕೊನೆಯ ದಿನ. 2012 ಜನವರಿ 19ರಂದು ಪ್ರಶಸ್ತಿ ನೀಡಲಾಗುವುದು. ಮಾಹಿತಿಗೆ: www.edelgive.org 022 6524 0579. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.