ADVERTISEMENT
ಮೂವತ್ತಾದ್ರೂ ಮದುವೆಯಾಗಿಲ್ವೆ?
​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 13:47 IST
Last Updated 14 ಜೂನ್ 2018, 13:47 IST
ಸಿಂಧೂ ಲೋಕನಾಥ್‌
ಸಿಂಧೂ ಲೋಕನಾಥ್‌
ಮಗಳು ಕಾಲೇಜು ಓದು ಮುಗಿಯಿತು ಎಂದಾಗ ಅಪ್ಪ– ಅಮ್ಮನಿಗೆ ಚಡಪಡಿಕೆ ಆರಂಭವಾಗುತ್ತದೆ. ಮಗಳಿಗೆ ಬೇಗ ಮದುವೆ ಮಾಡಬೇಕು, ಸೂಕ್ತ ವರನ ಹುಡುಕಾಟ ಆರಂಭವಾಗುತ್ತದೆ. ಮಗಳಿಗೆ ವಯಸ್ಸು 30 ಆಗಿಬಿಟ್ಟರೆ? ಅಪ್ಪ– ಅಮ್ಮನ ಚಿಂತೆ ಕೇಳುವುದೇ ಬೇಡ. ಆ ಹೆಣ್ಣುಮಗಳಿಗೆ ಹೋದಲ್ಲೆಲ್ಲ ಒಂದೇ ಪ್ರಶ್ನೆ, ವಯಸ್ಸು 30 ಆದರೂ ಇನ್ನೂ ಮದುವೆಯಾಗಿಲ್ವಾ?
ಇದೇ ವಿಷಯವನ್ನಿಟ್ಟುಕೊಂಡು ಕಿರುಚಿತ್ರ ನಿರ್ಮಿಸಿದ್ದಾರೆ ವಿ. ವಿಕಾಸ್‌ ಅವರು. 30ರ ಹರೆಯದ ಹೆಣ್ಣುಮಗಳ ಪಾತ್ರದಲ್ಲಿ ನಟಿ ಸಿಂಧು ಲೋಕನಾಥ್‌ ನಟಿಸಿದ್ದಾರೆ. ಆಕೆ ಚೀಫ್‌ ಎಂಜಿನಿಯರ್‌ ಆಗಿ ಸ್ವಂತ ಕಾಲ ಮೇಲೆ ನಿಂತುಕೊಂಡಿದ್ದಾಳೆ. ಹೊರಗಿನ ಪ್ರಪಂಚಕ್ಕೆ ಆಕೆಯ ಓದು ಅಥವಾ ಆಕೆಯ ಸ್ಥಾನಮಾನ ಮುಖ್ಯವಾಗುವುದೇ ಇಲ್ಲ. ವಯಸ್ಸು 30 ಆದರೂ ಮದುವೆ ಯಾಕಾಗಿಲ್ಲ ಎಂಬುದೇ ಎಲ್ಲರಿಗೂ ಕುತೂಹಲ. ಈ ಚಿತ್ರದ ಹೆಸರೇ ‘ಐ ಆ್ಯಮ್‌ 30!’.
ಈ ಕಿರುಚಿತ್ರದಲ್ಲಿ ನಾಯಕಿ ಒಂದು ಬಾರಿ ಪ್ರೇಮ ವಂಚಿತಳಾದವಳು. ಆತನ ನೆನಪು, ಮೋಸ ಇನ್ನೂ ಆಕೆಯನ್ನು ಕಾಡುತ್ತಲೇ ಇದೆ. ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಿರ್ಧಾರ ಕೈಗೊಳ್ಳಬೇಕಾದಾಗ ಆಕೆ ಭಯಭೀತಳಾಗುತ್ತಾಳೆ. ಮುಂದೇನು? ಎಂಬ ಪ್ರಶ್ನೆ  ಕಾಡತೊಡಗುತ್ತದೆ. ಆಕೆಗೆ ಬೇಕಾಗಿರುವುದು  ಪ್ರೀತಿ, ಕಾಳಜಿ. ಆದರೆ ಎಲ್ಲಾ ಕಡೆ ಆಕೆಯ ವಯಸ್ಸನ್ನೇ ಮುಂದೆ ಮಾಡಿಕೊಂಡು ಹೀಯಾಳಿಸುತ್ತಾರೆ. ಪ್ರೀತಿಯಿಂದ ಕೈಹಿಡಿಯಲು ಮುಂದೆ ಬಂದ ಹುಡುಗನೂ ‘ನಿನ್ನ ಮದುವೆಯಾಗಿ ನಾನು ಪುಣ್ಯದ ಕೆಲಸ ಮಾಡುತ್ತಿದ್ದೇನೆ’ ಎಂಬರ್ಥದಲ್ಲಿ ಮಾತಾಡುತ್ತಾನೆ. ಅಪ್ಪ– ಅಮ್ಮ ಸಹ ಮಗಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸೋಲುತ್ತಾರೆ. ಮದುವೆ ದಿನವೇ ವಿವಾಹ ಬೇಡವೆಂದು ಹೇಳಿ ತಾನೂ ನಿರಾಳವಾಗುತ್ತಾಳೆ.
ADVERTISEMENT
ಮದುವೆಯಿಲ್ಲದೆಯೇ ಮಹಿಳೆಗೊಂದು ಅಸ್ಮಿತೆ ಇದೆ. ಅದನ್ನು ಗೌರವಿಸಿ ಎನ್ನುವ ಸೂಚ್ಯದೊಂದಿಗೆ ಇಷ್ಟವಿಲ್ಲದ ಮದುವೆಗೆ ಒಪ್ಪಬೇಡಿ ಎಂಬ ಸಂದೇಶವನ್ನೂ ನೀಡುತ್ತದೆ ಈ ಕಿರುಚಿತ್ರ.
ವಿಕಾಸ್ ವಿ. ಅವರು ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಕ್ರಂ ಯೋಗಾನಂದ್ ಸಿನಿಮಾಟೊಗ್ರಫಿ ಇದಕ್ಕಿದೆ. 'ಐ ಆ್ಯಮ್ 30' ಈ ಕಿರುಚಿತ್ರ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ 11ನೇ ಸ್ಥಾನದಲ್ಲಿದೆ. ಸನ್ನಿ ಮಹೀಪಾಲ್, ಸೀತಾ ಕೋಟೆ, ಶ್ರೀನಿವಾಸ್ ಚೆಬ್ಬಿ, ಸಂಜನಾ ಪ್ರಕಾಶ್, ಪವನ್ ವೇಣುಗೋಪಾಲ್, ಅಪೂರ್ವ ತೇಜ್ ಇದರಲ್ಲಿ ನಟಿಸಿದ್ದಾರೆ.
ಯೂಟ್ಯೂಬ್‌ ಲಿಂಕ್‌: https://bit.ly/2MnvOw6
ಕಿರುದಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.