ADVERTISEMENT

ಮೇಡ್ ಇನ್ ಜಪಾನ್ ಟ್ಯೂಶನ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST
ಮೇಡ್ ಇನ್ ಜಪಾನ್ ಟ್ಯೂಶನ್
ಮೇಡ್ ಇನ್ ಜಪಾನ್ ಟ್ಯೂಶನ್   

ಶಿಕ್ಷಕ-ವಿದ್ಯಾರ್ಥಿ ನೇರ ಸಂಪರ್ಕದ (ಒನ್ ಟು ಒನ್) ಕೇಂದ್ರ ಇತ್ತೀಚೆಗಷ್ಟೇ ನಗರದಲ್ಲಿ ಕಾರ್ಯಾರಂಭ ಮಾಡಿದೆ. ಅಸೆಪ್ ಟ್ಯೂಟರ್ ಸಂಸ್ಥೆ ಮೂರು ವರ್ಷಗಳ ಹಿಂದೆ  ಆರಂಭಿಸಿದ್ದ ಈ ವಿಧಾನಕ್ಕೆ ವ್ಯಾಪಕ ಉತ್ತೇಜನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಪಾನ್‌ನ ಹೈಟೆಕ್ ಟ್ಯೂಶನ್ ಪದ್ದತಿಯನ್ನು ಇಲ್ಲಿನ ಶೈಕ್ಷಣಿಕ ಪದ್ದತಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲಾಗಿದೆ.

ಇಲ್ಲಿ ಮೊದಲೇ ತಯಾರಿಸಿಟ್ಟುಕೊಂಡ ಕಲಿಕಾ ಮಾದರಿಯ ಡಿವಿಡಿಯನ್ನು ವಿದ್ಯಾರ್ಥಿಗೆ ಕೊಟ್ಟು ಹೆಡ್‌ಫೋನ್ ಬಳಸಿ ಕೇಳಿಸಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಕ್ಯಾಬಿನ್, ಲ್ಯಾಪ್‌ಟಾಪ್ ಇದ್ದು, ಡಿವಿಡಿ ಆನ್ ಮಾಡಿದಾಗ ಶಿಕ್ಷಕರು ಬೋರ್ಡ್ ಮೇಲೆ ಬರೆದ ವಿಷಯಗಳ ಸಹಿತ ಅವರ ಪಾಠವೆಲ್ಲಾ ಪರದೆಯಲ್ಲಿ ಮೂಡುತ್ತವೆ.

ಯಾವುದಾದರೂ ವಿಷಯ ಅವರಿಗೆ ಅರ್ಥವಾಗುವವರೆಗೆ ಎಷ್ಟು ಬಾರಿಯಾದರೂ ಅದನ್ನು ರಿಪ್ಲೆ ಮಾಡಬಹುದು. ಹೀಗಿದ್ದೂ ಅರ್ಥವಾಗದೆ ಹೋದಲ್ಲಿ ಅಲ್ಲೇ ಇರುವ ಶಿಕ್ಷಕರ ಬಳಿ ಸಂಶಯ ಪರಿಹರಿಸಿಕೊಳ್ಳಬಹುದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಕಷ್ಟ ವಿಷಯಗಳನ್ನು ಶಿಕ್ಷಕರೊಂದಿಗೆ ಚರ್ಚಿಸಲು ಇದು ಅವಕಾಶ ಕಲ್ಪಿಸಿಕೊಡುತ್ತದೆ, ಅದರೊಂದಿಗೆ ಇತರ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುವ ಭೀತಿಯೂ ಇಲ್ಲ.

ಪ್ರತಿ ಡಿವಿಡಿಯಲ್ಲೂ 15 ಸೆಷನ್‌ಗಳಿವೆ. ಬುದ್ದಿವಂತ ವಿದ್ಯಾರ್ಥಿಗೆ ಕೆಲವು ಸೆಷನ್ಸ್‌ಗಳ ಅಗತ್ಯವಿಲ್ಲ ಎಂದಾದರೆ ಆತ ಮುಂದಿನ ಡಿವಿಡಿ ಬಳಸಿ ಕಲಿಕೆ ಮುಂದುವರಿಸಬಹುದು. ಹೆಚ್ಚಿನ ಮಾಹಿತಿಗೆ: www.asaptutor.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.