ADVERTISEMENT

ಮೇಣದ ಪ್ರತಿಮೆಯಲ್ಲಿ ಮಧುಬಾಲಾ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST
ಮೇಣದ ಪ್ರತಿಮೆಯಲ್ಲಿ ಮಧುಬಾಲಾ
ಮೇಣದ ಪ್ರತಿಮೆಯಲ್ಲಿ ಮಧುಬಾಲಾ   

ಬಾಲಿವುಡ್‌ನ ಎವರ್‌ಗ್ರೀನ್ ನಾಯಕಿ ಮಧುಬಾಲಾಗೆ ಮೇಡಂ ಟುಸ್ಸಾಡ್ ಮೇಣದ ಸಂಗ್ರಹಾಲಯದಲ್ಲಿ ತಡವಾದರೂ ಸ್ಥಾನ ದೊರೆತಿದೆ.

ಹಿಂದಿ ಚಿತ್ರರಂಗದ ಹಳೆಯ ನಾಯಕಿಯರಲ್ಲಿ ಅಪ್ರತಿಮ ಸುಂದರಿ ಎಂದೇ ಖ್ಯಾತಿ ಗಳಿಸಿದ್ದ ಮಧುಬಾಲಾ ಅವರ ಮೇಣದ ಪ್ರತಿಮೆಯನ್ನು ತಯಾರಿಸಲು ಮೇಡಂ ಟುಸ್ಸಾಡ್ ಒಲವು ತೋರಿದ್ದಾರೆ. ಇದೇ ವರ್ಷ ದೆಹಲಿಯಲ್ಲಿ ಮೇಡಂ ಟುಸ್ಸಾಡ್ ಮೇಣದ ಪ್ರತಿಮೆಯ ವಸ್ತುಸಂಗ್ರಹಾಲಯ ಆರಂಭಿಸಲಿದ್ದು, ಅಲ್ಲಿ ‘ಮೊಗಲ್ ಎ ಆಜ್‌ಂ’ ಚಿತ್ರದಲ್ಲಿ ಮಧುಬಾಲಾ ಕಾಣಿಸಿಕೊಂಡಿರುವ ರೀತಿಯಲ್ಲೇ ಮೇಣದ ಪ್ರತಿಮೆ ರೂಪುಗೊಳ್ಳಲಿದೆ ಎನ್ನಲಾಗಿದೆ.

ಮಧುಬಾಲಾ ಅವರ ಸೌಂದರ್ಯಕ್ಕೆ ಜಾಗತಿಕವಾಗಿ ಮನ್ನಣೆ ಇದ್ದು, 1952ರಲ್ಲಿ ಅಮೆರಿಕದ ಪತ್ರಿಕೆಯೊಂದು ತನ್ನ ಮುಖಪುಟಕ್ಕೆ ಮಧುಬಾಲಾ ಅವರ ಚಿತ್ರ ಬಳಸಿತ್ತು.

ADVERTISEMENT

ಟುಸ್ಸಾಡ್ ಅವರ ಮೇಣದ ಪ್ರತಿಮೆ ವಸ್ತು ಸಂಗ್ರಹಾಲಯದಲ್ಲಿ ಬಾಲಿವುಡ್‌ ನಟರಾದ ಅಮಿತಾಭ್ ಬಚ್ಚನ್, ಶಾರೂಕ್ ಖಾನ್, ನಟಿ ಐಶ್ವರ್ಯಾ ರೈ, ಗಾಯಕಿಯರಾದ ಆಶಾ ಭೋಸ್ಲೆ, ಶ್ರೇಯಾ ಘೋಷಾಲ್ ಅವರ ಪ್ರತಿಮೆಗಳು ಸ್ಥಾನ ಪಡೆದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.