ADVERTISEMENT

ಯಕ್ಷಗಾನ ಸಮ್ಮಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

`ಕರಾವಳಿ ಯಕ್ಷಗಾನ ಕಲಾವಿದರು~ ಸಂಘಟನೆಯ ಬೆಳ್ಳಿಹಬ್ಬದ ಅಂಗವಾಗಿ ರಾಜಾಜಿನಗರದ ಕುಮಾರವ್ಯಾಸ ಮಂಟಪದಲ್ಲಿ ನಡೆದ ಮೂರು ದಿನಗಳ ಯಕ್ಷೋತ್ಸವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಹಾಗೂ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎಲ್. ಸಾಮಗ ಅವರನ್ನು ಸನ್ಮಾನಿಸಲಾಯಿತು.

ಯಕ್ಷೋತ್ಸವದಲ್ಲಿ ಸಂಘದ ಬಾಲಕಲಾವಿದರು ಗರುಡ ಗರ್ವಭಂಗ, ಹಿರಿಯ ಕಲಾವಿದರು `ಯಜ್ಞ ಸಂರಕ್ಷಣೆ- ಸೀತಾ ಕಲ್ಯಾಣ~, `ಪಂಚವಟಿ-ವಾಲಿಮೋಕ್ಷ~, ಹಾಗೂ `ಮಕರಾಕ್ಷ-ಇಂದ್ರಜಿತು-ಕುಂಭಕರ್ಣ-ರಾವಣ~ ಯಕ್ಷಗಾನ ಪ್ರಸಂಗಗಳನ್ನು ಆಡಿ ತೋರಿಸಿದರು.

ಮಾರೀಚ (ಬಾಲಕಲಾವಿದ ಆಕಾಶ್), ಮಾಯಾ ಶೂರ್ಪನಖಿ (ರವಿ ಅಲೆವೂರಾಯ), ರಾವಣ (ಶಿವರಾಮ ಭಟ್), ಸುಗ್ರೀವ ಹಾಗೂ ರಾಮ (ಉಮೇಶ ಶೆಟ್ಟಿ ಉಬರಡ್ಕ ಹಾಗೂ ಎಂ.ಎಲ್. ಸಾಮಗ) ಪಾತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.