ADVERTISEMENT

ಯುಗಾದಿ ಉತ್ಸವದಲ್ಲಿ ಪದ್ಮನಾಭ ಗಾಯನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST
ಯುಗಾದಿ ಉತ್ಸವದಲ್ಲಿ ಪದ್ಮನಾಭ ಗಾಯನ
ಯುಗಾದಿ ಉತ್ಸವದಲ್ಲಿ ಪದ್ಮನಾಭ ಗಾಯನ   

ಹೊಸ ವರುಷದ ಆಗಮನ. ಮಾವು, ಬೇವಿನ ಚಿಗುರು. ಪ್ರಕೃತಿ ಹಸಿರು ಸೀರೆಯುಟ್ಟು ಕಂಗೊಳಿಸುವ ಸುದಿನ ಯುಗಾದಿ. ಹಬ್ಬದ ಜೊತೆಗೆ ಮನರಂಜನೆ ಬೆರೆತರೆ ಮತ್ತಷ್ಟು ಹಿತ. ಹೌದು ಯುಗಾದಿ ಅಂಗವಾಗಿ ಭಾನುವಾರ (ಮಾ.25) ತ್ರಿದಳ ಸಂಸ್ಥೆಯು ಆರ್.ಕೆ. ಪದ್ಮನಾಭ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಜೆ ಹಮ್ಮಿಕೊಂಡಿದೆ.

`ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಬಳಗವು ಅಮೋಘ ಶಾಸ್ತ್ರೀಯ ಸಂಗೀತ ರಸಸಂಜೆಯ ಪ್ರಯೋಜಕತ್ವ ವಹಿಸಿಕೊಂಡಿದೆ. ಬೇವು ಬೆಲ್ಲ ತಿಂದು, ಹಬ್ಬದೂಟ ಸವಿದ ಸಂಗೀತಾಸಕ್ತರಿಗೆ ಗಾನ ಕಲಾಭೂಷಣ ಆರ್.ಕೆ.ಪದ್ಮನಾಭ ಅವರ ಗಾಯನದ ತಾಂಬೂಲ ಸಿಗಲಿದೆ. ಯುಗಾದಿ ಚಂದಿರನನ್ನು ಕಾಣದ ಮಂದಿ ಸಂಗೀತ ಸಂಜೆಯಲ್ಲಿ ಮಿಂದು ಪುಳಕಿತರಾಗಬಹುದು.

ಟಿಕೆಟ್ ದರ ರೂ 100.
ಸ್ಥಳ: ಕುವೆಂಪು ಕಲಾಕ್ಷೇತ್ರ, ಒಕ್ಕಲಿಗರ ಸಂಘ, ಕೆ.ಆರ್.ರಸ್ತೆ, ವಿ.ವಿ.ಪುರಂ. ಸಂಜೆ 5.30ಕ್ಕೆ.
 ಮಾಹಿತಿ ಹಾಗೂ ಟಿಕೆಟ್‌ಗಳಿಗಾಗಿ: 88840 11330, 88840 11440, 88840 11550

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.