ಕ್ರಿಕೆಟ್ ಆಡುವ ಹಂಬಲವನ್ನು ಹತ್ತಿಕ್ಕಿಕೊಂಡು ನೋಡಿಯಷ್ಟೇ ತೃಪ್ತಿ ಪಡೆದುಕೊಳ್ಳುತ್ತಿದ್ದ ಯುವ ಪ್ರತಿಭೆಗಳಿಗೆ ಸ್ಪ್ರೈಟ್ ಈ ಬಾರಿ ಉತ್ತಮ ಅವಕಾಶ ಒದಗಿಸುತ್ತಿದೆ.
ಯುವ ಪ್ರತಿಭೆಗಳಿಗೆ ಕ್ರಿಕೆಟ್‌ನ ನೈಜ ಮೋಜನ್ನು ನೀಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ `ಸ್ಪ್ರೈಟ್ ಗಲ್ಲಿ ಕ್ರಿಕೆಟ್ ಚಾಂಪ್-2012~ ಆಯೋಜಿಸಿದೆ.
ಗ್ರಾಹಕರನ್ನು ತಲುಪುವ ಉದ್ದೇಶದೊಂದಿಗೆ ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಪಂದ್ಯಾವಳಿಯ 5ನೇ ಆವೃತ್ತಿ ಇದು. ಈ ಬಾರಿ ಹೊಸ ಬಗೆಯಲ್ಲಿ ಈ ಪಂದ್ಯಾವಳಿಯನ್ನು ರೂಪಿಸಲಾಗಿದ್ದು, ಲಕ್ಷಾಂತರ ಉದಯೋನ್ಮುಖ ಕ್ರಿಕೆಟಿಗರನ್ನು ತಲುಪಲಿದೆ.
ಕ್ರಿಕೆಟ್ ಪ್ರೇಮಿಗಳು ನೇರವಾಗಿ ಕ್ರಿಕೆಟ್ ಆಟದೊಂದಿಗೆ ಸಂಪರ್ಕ ಹೊಂದಲು ಮತ್ತು ಚಟುವಟಿಕೆಯಿಂದ ತೊಡಗಿಕೊಳ್ಳಲು ನೆರವಾಗುವುದು ಈ ಚಾಂಪಿಯನ್‌ಶಿಪ್‌ನ ಉದ್ದೇಶವಾಗಿದೆ. 2012ರ ಏಪ್ರಿಲ್ 1ರಿಂದ ಆರಂಭವಾಗಿರುವ ಪಂದ್ಯಾವಳಿಯಲ್ಲಿ ದೇಶದ ನಾಲ್ಕು ವಲಯಗಳಿಂದ 13 ರಾಜ್ಯಗಳ 112 ನಗರಗಳ ಸಾವಿರಾರು ಕ್ರಿಕೆಟ್ ಆಟಗಾರರು ಇದರಲ್ಲಿ ಭಾಗವಹಿಸಿದ್ದಾರೆ.
ಈ ಚಟುವಟಿಕೆಯ ಒಂದು ಭಾಗವಾಗಿ, ಪ್ರತಿ ನಗರದಲ್ಲೂ ಸ್ವತಂತ್ರವಾಗಿ ಟೂರ್ನಿ ಆಯೋಜಿಸಲಿದ್ದು, ಅಲ್ಲಿ ನಡೆಯುವ ನಾಕೌಟ್ ಹಂತದ ಪಂದ್ಯಗಳಲ್ಲಿ ಎಲ್ಲ ಸ್ಥಳೀಯ ತಂಡಗಳು ಪಾಲ್ಗೊಳ್ಳಲಿವೆ.
ಸಿಟಿ ಲೀಗ್ ಪಂದ್ಯಾವಳಿಯಲ್ಲಿ ಜಯಗಳಿಸುವ ತಂಡ 30,000 ರೂಪಾಯಿ ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ 20,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ.
ನಂತರ ನಡೆಯುವ ವಲಯ ಮಟ್ಟದ ಪಂದ್ಯಾವಳಿಯನ್ನು ಗೆಲ್ಲುವ ತಂಡ 5 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಲಿದೆ.
ಚಾಂಪಿಯನ್‌ಶಿಪ್‌ಗೆ ಪ್ರವೇಶ 15 ವರ್ಷ ಮತ್ತು ಮೇಲ್ಪಟ್ಟ ಆಟಗಾರರಿಗೆ ಮಾತ್ರ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು 53030ಗೆ `GULLY~ ಎಂದು ಎಸ್‌ಎಂಎಸ್ ಅಥವಾ 95554 95554ಗೆ ಕರೆ ಮಾಡಬಹುದು. ಇಲ್ಲವೇ www.sprite.in ಗೆ ಲಾಗ್ ಇನ್ ಆಗಬಹುದು.
ನಗರ ಮಟ್ಟ, ಕೇಂದ್ರ ಮಟ್ಟ ಮತ್ತು ನಾಕ್-ಔಟ್ ವಲಯ ಮಟ್ಟದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾವಳಿಯ ಆರಂಭದ ಬಗ್ಗೆ ಆನ್ ಲೇಬಲ್ ಪ್ರಮೋಷನ್, ರೇಡಿಯೋ, ಮುದ್ರಣ ಮತ್ತು ಹೊರಾಂಗಣ ಜಾಹೀರಾತು ಅಥವಾ ಪ್ರಕಟಣೆಗಳ ಮೂಲಕ ಪ್ರಚಾರ ಮಾಡಲಾಗುತ್ತದೆ. ಪಂದ್ಯಾವಳಿಯ ಆಯೋಜನೆ ಮತ್ತು ವಿಜೇತರಿಗೆ ಬಹುಮಾನದ ಮೊತ್ತ ತಲುಪಿಸುವ ಹೊಣೆಯನ್ನು ವಿವಿಫೈ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ಗೆ ವಹಿಸಿಕೊಡಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.