ADVERTISEMENT

ಯುವ ರುಚಿಗೆ ಎಫ್ 5

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 19:30 IST
Last Updated 5 ಆಗಸ್ಟ್ 2011, 19:30 IST
ಯುವ ರುಚಿಗೆ ಎಫ್ 5
ಯುವ ರುಚಿಗೆ ಎಫ್ 5   

ಅದೊಂದು ಸುಂದರ ಸಂಜೆ. ಅಲ್ಲಿ ಯುವಕ, ಯುವತಿಯರ ಹಿಂಡು ಫ್ಯೂಷನ್ ಸಂಗೀತಕ್ಕೆ ತಲೆದೂಗುತ್ತಿತ್ತು, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಿತ್ತು.

ಇದು ಸ್ನೇಹಿತರ ಸಂತೋಷ ಕೂಟವಲ್ಲ, ಬದಲಿಗೆ ಆರು ಸಮಾನ ಮನೋಭಾವ, ವಯಸ್ಸಿನ ಯುವಕರು ಸೇರಿ ನೆಟ್ಟಕಲ್ಲಪ್ಪ ವೃತ್ತದ ಸಮೀಪ ಆರಂಭಿಸಿದ `ಎಫ್ 5~ ಕೆಫೆ ರೆಸ್ಟೋರೆಂಟ್‌ನ ಉದ್ಘಾಟನೆ ಸಂದರ್ಭ.
 
ನಿಖಿಲ್, ಸಂತೋಷ್, ವಿನಯ್, ಸುಕೀರ್ತ್, ಸಂಕಲ್ಪ್ ಹಾಗೂ ಮನೀಷ್ ಸೇರಿ ಯುವಜನತೆಯನ್ನು ಗುರಿಯಾಗಿಸಿಕೊಂಡು ಈ ರೆಸ್ಟೋರೆಂಟ್ ಆರಂಭಿಸಿದ್ದಾರೆ. ವಿಶೇಷ ಎಂದರೆ ಇವರೆಲ್ಲ ವಿವಿಧ ವಿಷಯದಲ್ಲಿ ಪದವೀಧರರು, ಬೇರೆ ಬೇರೆ ವೃತ್ತಿಗಳನ್ನು ಮಾಡುತ್ತಿದ್ದಾರೆ.

`ಸುತ್ತಮುತ್ತ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳು, ಯುವಕರು ಸ್ನೇಹಿತರೊಂದಿಗೆ ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಸೂಕ್ತ ಸ್ಥಳದ ಕೊರತೆ ಇತ್ತು.
 
ಅದನ್ನು ತುಂಬುವ ಜತೆಗೆ ಆಹಾರ ಪದಾರ್ಥಗಳಿಗೆ ಬೇರೆ ರೆಸ್ಟೋರೆಂಟ್‌ಗಳಿಗಿಂತ ಕಡಿಮೆ ಬೆಲೆ ನಿಗದಿ ಮಾಡಿದ್ದೇವೆ. ಎಫ್ 5 ಅಂದರೆ ಫ್ರೆಂಡ್ಸ್ ಹಾಗೂ ಕಂಪ್ಯೂಟರ್ ಕೀ ಬೋರ್ಡಿನ ಸಂಖ್ಯೆಯ ಗುರುತು. ರಿಫ್ರೆಶ್ ಎಂಬ ಅರ್ಥವನ್ನು ಒಳಗೊಂಡಿದೆ~ ಎನ್ನುತ್ತಾರೆ ನಿಖಿಲ್.

ನಾಲ್ಕನೇ ಮಹಡಿ ಮೇಲಿರುವ ಈ ರೆಸ್ಟೋರೆಂಟ್ ಪಕ್ಕಾ ಸಸ್ಯಾಹಾರಿ. ಇಟಾಲಿಯನ್, ಮೆಕ್ಸಿಕನ್ ಹಾಗೂ ಚೈನೀಸ್ ಆಹಾರಗಳು ಜೊತೆಗೆ ಐಸ್‌ಕ್ರೀಂ, ತಂಪುಪಾನೀಯ ಲಭ್ಯವಿದೆ.  ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಪಂದ್ಯ ವೀಕ್ಷಣೆಗಾಗಿ ಬೃಹತ್ ವಿಡಿಯೋ ಸ್ಕ್ರೀನ್ ಅಳವಡಿಸಲಾಗಿದೆ. ಒಳಗೋಡೆಯ ಮೇಲೆ ಜಲವರ್ಣ ಚಿತ್ರಗಳನ್ನು ಬಿಡಿಸಲಾಗಿದೆ. ತಿಂಡಿ ತಿನಿಸಿನಲ್ಲೂ ವೈವಿಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.