ADVERTISEMENT

ಯೇಸುದಾಸ್ ಸಂಧ್ಯಾರಾಗ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST
ಯೇಸುದಾಸ್ ಸಂಧ್ಯಾರಾಗ
ಯೇಸುದಾಸ್ ಸಂಧ್ಯಾರಾಗ   

ಡಿಗ್ನಿಟಿ ಫೌಂಡೇಷನ್: ಸೋಮವಾರ ಬಹುಭಾಷಾ ಹಿನ್ನೆಲೆ ಗಾಯಕ, ಸಂಗೀತಗಾರ ಕೆ.ಜೆ. ಯೇಸುದಾಸ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ.

ಕೇರಳ ಮೂಲದ ಗಾಯಕ ಯೇಸುದಾಸ್ ಐದು ದಶಕಗಳ ತಮ್ಮ ಸಂಗೀತ ಯಾತ್ರೆಯಲ್ಲಿ ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಬಂಗಾಲಿ, ಗುಜರಾತಿ, ಒಡಿಯಾ, ಮರಾಠಿ, ಪಂಜಾಬಿ, ಸಂಸ್ಕೃತ ಸೇರಿ ವಿವಿಧ ಭಾಷೆಯಲ್ಲಿ 50 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ರಷ್ಯನ್, ಮಲಯ, ಅರೆಬಿಕ್, ಲ್ಯಾಟಿನ್ ಮತ್ತು ಇಂಗ್ಲಿಷ್‌ನಲ್ಲಿಯೂ ಹಾಡಿದ ಕೀರ್ತಿ ಅವರದು.

ಹಿನ್ನೆಲೆ ಗಾಯನಕ್ಕಾಗಿ ಕೇರಳ ಸರ್ಕಾರದಿಂದ 30 ಸಲ ರಾಜ್ಯ ಪ್ರಶಸ್ತಿ ಪಡೆದಿರುವ ಅವರು 7 ಸಲ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕೇರಳ ಸರ್ಕಾರ ಅವರಿಗೆ ಆಸ್ಥಾನ ಗಾಯಕ ಎಂಬ ಬಿರುದನ್ನೂ ನೀಡಿದೆ.

ಡಿಗ್ನಿಟಿ ಫೌಂಡೇಷನ್:  ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 9 ಕೋಟಿಗೂ ಹೆಚ್ಚು ವೃದ್ಧರಿದ್ದಾರೆ. ಬಾಳ ಸಂಜೆಯಲ್ಲಿರುವ ಈ ಹಿರಿಯ ಜೀವಗಳಿಗೆ ನೆಮ್ಮದಿಯ ಸೂರು, ಹೊಟ್ಟೆ ತುಂಬ ಊಟ, ಔಷಧ, ಬಟ್ಟೆ ಸಿಗುವುದು ಕೂಡ ಸುಲಭದ ಸಂಗತಿಯಾಗಿಲ್ಲ.

ಇಂಥ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ದುಡಿಯುತ್ತಿರುವ ಡಿಗ್ನಿಟಿ ಫೌಂಡೇಷನ್ ಅಂತರ‌್ರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಸಂಸ್ಥೆ. ಮುಂಬೈ, ಕೋಲ್ಕತ್ತ, ಚೆನ್ನೈ, ಬೆಂಗಳೂರು ಮತ್ತು ಪುಣೆಗಳಲ್ಲಿ ಸೇವೆ ಒದಗಿಸುತ್ತಿದೆ. ಅವರಿಗೆ ವೃತ್ತಿಪರ ಸಲಹೆ, ಸಹಾಯವಾಣಿ, ಉದ್ಯೋಗ ಅವಕಾಶ, ಆಹಾರ ಧಾನ್ಯ ವಿತರಣೆ, ನೆನಪಿನ ಶಕ್ತಿ ಕಳೆದುಕೊಂಡವರಿಗೆ, ಅಶಕ್ತರಿಗೆ ಆಶ್ರಯ ಕೇಂದ್ರಗಳ್ನು ನಡೆಸುತ್ತಿದೆ.

ಈ ಸದುದ್ದೇಶಗಳಿಗಾಗಿ ಹಣ ಸಂಗ್ರಹಿಸಲು ಅದು ಈ ಸಂಗೀತ ಕಚೇರಿ ಏರ್ಪಡಿಸಿದೆ.
ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ, ಬಿಡಿಎ ಸಂಕೀರ್ಣದ ಎದುರು. ಸಂಜೆ 6 ರಿಂದ ರಾತ್ರಿ 9. ದೇಣಿಗೆ ಪಾಸ್‌ಗಳಿಗಾಗಿ 99022 44335 ಮತ್ತು 4151 1307. ವಿವರಗಳಿಗೆ www.dignityfoundation.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.