ADVERTISEMENT

ರಂಗಪ್ರಪಂಚ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ರಂಗ ಪ್ರಪಂಚ ಸಾಂಸ್ಕೃತಿಕ ವೇದಿಕೆ: ಬುಧವಾರ ರಂಗಪ್ರಪಂಚ ಪ್ರಶಸ್ತಿ ಪ್ರದಾನ. ಡಾ.ಶ್ಯಾಮಲಾ ಜಿ.ಭಾವೆ ಅವರಿಂದ `ನಮ್ಮ ರಂಗಪ್ರಪಂಚ~ 50ನೇ ಸಂಚಿಕೆ ಲೋಕಾರ್ಪಣೆ.

ಯಶೋಲಕ್ಷ್ಮಿ ಅವರಿಂದ ಪ್ರಾರ್ಥನಾ ನೃತ್ಯ. ರಂಗಪ್ರಪಂಚ ತಂಡದಿಂದ `ಗಿಳಿಯು ಪಂಜರದೊಳಿಲ್ಲ~ ನಾಟಕ ಪ್ರದರ್ಶನ (ರಚನೆ: ಪಿ.ಲಂಕೇಶ್. ನಿರ್ದೇಶನ: ಎಚ್.ಕೆ. ರಾಮಮೂರ್ತಿ). ಬೊಳುವಾರು ಪುತ್ತೂರು ತಂಡದಿಂದ `ಬಾರಿಸು ಕನ್ನಡ ಡಿಂಡಿಮ~ ಕವಿ ಗೀತೆಗಳ ಗಾಯನ. ನಾಟ್ಯ ದೇಗುಲ ಮತ್ತು ಭರತಾಂಜಲಿ ನಾಟ್ಯಶಾಲೆ ತಂಡಗಳಿಂದ ಭರತನಾಟ್ಯ.

ಮೈಥಿಲಿ ಮಂಡ್ಯಂ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಅರುಣ್ ಸಾಗರ್ ಮತ್ತು ಐಶ್ವರ್ಯ ಎಸ್. ಮೂರ್ತಿ ಅವರಿಂದ ಪಾಶ್ಚಾತ್ಯ ಸಂಗೀತ. ಡಾ. ಬಳ್ಳಾರಿ  ವೀರೇಂದ್ರ ಅವರಿಂದ ಜಾನಪದ ಗೀತೆ. ಅಪರ್ಣ ನರೇಂದ್ರ ಅವರಿಂದ ಸುಗಮ ಸಂಗೀತ. ಕಾವ್ಯ.ಜಿ. ರಾವ್ ಅವರಿಂದ ಯಕ್ಷಗಾನ. ಸರಸ್ವತಿ ಸಂಗೀತ ವಿದ್ಯಾಲಯದಿಂದ ಹಿಂದುಸ್ತಾನಿ ಗಾಯನ.

ಕೆ.ಎನ್. ವಿಜಯಕುಮಾರ್ ಸಿಂಹ ಅವರಿಂದ ರಂಗಪ್ರಪಂಚ-2011 ಪ್ರಶಸ್ತಿ ಪ್ರದಾನ. ಹಿರಿಯ ಪ್ರತಿಭೆ, ಕಲಾಪೋಷಕ, ತಾಂತ್ರಿಕ, ಯುವ ಪ್ರತಿಭೆ, ವಿಶೇಷ ಪ್ರತಿಭೆ, ಕಿರಿಯ ಪ್ರತಿಭೆ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ.
 
ಉದ್ಘಾಟನೆ: ಗುರುದತ್. ಅತಿಥಿಗಳು: ಕಮಿನೀಧರನ್, ಗೋಪಾಲಕೃಷ್ಣ ನಾಯರಿ. ಅಧ್ಯಕ್ಷತೆ: ಸಿ.ವಿ. ಶ್ರೀನಿವಾಸಯ್ಯ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.