ADVERTISEMENT

ರಂಗಶಂಕರದಲ್ಲಿ ಗುಂಡಾಯಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ಕ್ರಿಯೇಟಿವ್ ಥಿಯೆಟರ್ ತಂಡವು ಮಂಗಳವಾರ ಮತ್ತು ಬುಧವಾರ (ಏ.10ಮತ್ತು 11) `ಗುಂಡಾಯಣ~ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಹಾಸ್ಯಲೇಖಕ ನಾ.ಕಸ್ತೂರಿಯವರ ಕಾದಂಬರಿ ಆಧಾರಿತ ಈ ನಾಟಕವನ್ನು ಜೋಸೆಫ್ ನಿರ್ದೇಶಿಸಿದ್ದಾರೆ.

ಇದರಲ್ಲಿ ಮೂಡಿಬರುವ 10 ವಿಭಿನ್ನ ಪಾತ್ರಗಳನ್ನು  ಸುಂದರ್ ಮತ್ತು ಲಕ್ಷ್ಮೀ ಚಂದ್ರಶೇಖರ್ ಇಬ್ಬರೇ ನಿರ್ವಹಿಸುವ ರೀತಿ, ವಯೊಲಿನ್ ವಾದಕ ಎಚ್.ಎನ್.ಭಾಸ್ಕರ್ ಅವರೊಂದಿಗೆ ಗಜಾನನ ನಾಯಕ್ ನೀಡಿರುವ ಹಿನ್ನಲೆ ಸಂಗೀತ ಹಾಗೂ ಮೇಕಪ್ ಪಟು ರಾಮಕೃಷ್ಣ ಕನ್ನರಪಾಡಿಯವರ ಕೈಚಳಕ ರಂಗಾಸಕ್ತರನ್ನು ಬೆರಗುಗೊಳಿಸುತ್ತದೆ. ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಟಿಕೆಟ್ ಹಾಗೂ ಮಾಹಿತಿಗೆ 9620604479ಗೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.