ರಂಗಶಂಕರ: 2ನೇ ಹಂತ, ಜೆ.ಪಿ.ನಗರ, ಭಾನುವಾರ ಅರುಂಧತಿ ನಾಗ್ ಏಕವ್ಯಕ್ತಿ ಅಭಿನಯದ, ಗಿರೀಶ್ ಕಾರ್ನಾಡ್ ರಚಿತ `ಬಿಖರೆ ಬಿಂಬ್~ ನಾಟಕ ಪ್ರದರ್ಶನ. ಮಧ್ಯಾಹ್ನ 3.30 ಹಾಗೂ ಸಂಜೆ 7.30.
ನಾಟಕದ ಬಗ್ಗೆ: ಏಕಪಾತ್ರಾಭಿನಯದ ಈ ನಾಟಕ ಇಂಗ್ಲಿಷ್ ಪ್ರೊಫೆಸರ್ ಮಂಜುಳಾ ನಾಯಕ್ ಕತೆಯನ್ನು ಹೇಳುತ್ತದೆ. ಕನ್ನಡದಲ್ಲಿ ಲೇಖಕಿಯಾಗಲು ಯಶಸ್ವಿಯಾಗದ ಈಕೆ ಇಂಗ್ಲಿಷ್‌ನಲ್ಲಿ ಕಾದಂಬರಿ ಬರೆದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಳಾಗುತ್ತಾಳೆ, ಈಕೆಯ ಕಾದಂಬರಿ ಅತ್ಯಂತ ಮಾರಾಟವಾದ ಪುಸ್ತಕವಾಗುತ್ತದೆ.
ಈ ಕಾದಂಬರಿ ಆಧಾರಿತ ಕತೆ ಸಿನಿಮಾ ಆಗಿ ಪರಿವರ್ತನೆಯಾದಾಗ ದೂರದರ್ಶನದಲ್ಲಿ ಈಕೆಯ ಸಂದರ್ಶನ ನಡೆಯುವ ಸಂದರ್ಭವೇ ನಾಟಕದ ಆರಂಭದ ಹಂತವಾಗಿರುತ್ತದೆ.
ನಂತರ ತನ್ನನ್ನು ತಾನೇ ಪರದೆಯ ಮೇಲೆ ಕಂಡ ಈಕೆಗೆ ತನ್ನ ಭಾಷೆಯಿಂದ ದೂಡಲ್ಪಟ್ಟ ಮತ್ತು ಇಂಗ್ಲಿಷ್‌ನಲ್ಲಿ ಗುರುತಿಸಿಕೊಂಡ ಕುರಿತು ಅನೇಕ ಪ್ರಶ್ನೆಗಳು ಮೂಡುವ ಸಂದರ್ಭ ಈ ನಾಟಕದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.