ಯಕ್ಷಮಿತ್ರಕೂಟ ಆಶ್ರಯದಲ್ಲಿ 13ನೇ ವಾರ್ಷಿಕೋತ್ಸವ `ರಂಗಸ್ಥಳ' ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಶ್ಯಾಮರಾಯ, ಅತಿಥಿ- ಗೌರಿ ಸಾಸ್ತಾನ, ನೀಲಾವರ ಸಂಜೀವ ರಾವ್, ಎಚ್.ಟಿ.ನರಸಿಂಹ, ಕೆ.ಎಂ.ರಾಮ ಮತ್ತು ಕೆ.ಎಂ.ಲಕ್ಷ್ಮಣ, ತಾರಾನಾಥ ವರ್ಕಾಡಿ.
ಬೆಳಿಗ್ಗೆ 9.30ಕ್ಕೆ ಯಕ್ಷಗಾನದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದಿ. ಹಾರಾಡಿ ರಾಮಗಾಣಿಗ ಅವರ ಸ್ಮರಣಾರ್ಥ ವಿಚಾರ ಸಂಕಿರಣ ಹಾಗೂ ಪ್ರಾತ್ಯಕ್ಷಿಕೆ. ವಿಷಯ- ಯಕ್ಷಗಾನದಲ್ಲಿ ಹಾರಾಡಿ ಶೈಲಿ. ಪಾಲ್ಗೊಳ್ಳುವ ಕಲಾವಿದರು- ಕೋಟ ಶ್ರೀಧರ ಹಂದೆ, ಬಿರ್ತಿ ಬಾಲಕೃಷ್ಣಗಾಣಿಗ, ಕೋಟ ಶಿವಾನಂದ, ಕೋಟ ಸುಜಯೀಂದ್ರ ಹಂದೆ, ಮನೋಜ್ ಭಟ್ ಮತ್ತು ನವೀನ್‌ಮಣೂರು. 11.30ಕ್ಕೆ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ಬಳಗದಿಂದ `ರತಿ ಕಲ್ಯಾಣ' ಯಕ್ಷಗಾನ ಪ್ರದರ್ಶನ.
ಮಧ್ಯಾಹ್ನ 2ಕ್ಕೆ ಹೆರಂಜಾಲು ಗೋಪಾಲ ಗಾಣಿಗ ಹಾಗೂ ಕುಮಾರ ಪಲ್ಲವ ಗಾಣಿಗ ಅವರಿಂದ `ಯಕ್ಷರಾಗರಸದೌತಣ'. 2.30ಕ್ಕೆ ಶಂಕರ ಬಾಳ್ಕುದ್ರು ನಿರ್ದೇಶನದಲ್ಲಿ ಬಾಲ ಕಲಾವಿದರಿಂದ `ಕುಶ ಲವ' ಯಕ್ಷಗಾನ ಪ್ರದರ್ಶನ.
ಸಂಜೆ 4ಕ್ಕೆ ಜಯಕುಮಾರ ಉದ್ಯಾವರ ಹಾಗು ಮೊಳಹಳ್ಳಿ ಹೆರಿಯ ನಾಯ್ಕ ಅವರಿಗೆ ರಂಗಸ್ಥಳ ಪ್ರಶಸ್ತಿ ಪ್ರದಾನ. ಸಂಜೆ 5.30ಕ್ಕೆ ಹುಳಿಮಾವು ಯಕ್ಷಸಂಭ್ರಮ ತಂಡದವರಿಂದ ಸತ್ಯ ಹರಿಶ್ಚಂದ್ರ ಪ್ರಸಂಗ. ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಮುಂಭಾಗ, ಜೆ.ಸಿ. ರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.