ADVERTISEMENT

`ರಾಗಾನುರಾಗ'ದ ಸಂಭ್ರಮದಲಿ...

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಕಲಾ ಪ್ರೇಮಿ ಸಂಸ್ಥೆಯು ತನ್ನ 5ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗಷ್ಟೆ ಮಲ್ಲೇಶ್ವರದಲ್ಲಿರುವ ಸೇವಾ ಸದನದ ಸಭಾಂಗಣದಲ್ಲಿ   `ರಾಗಾನುರಾಗ' ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ನವ್ಯ ನೋಟವನ್ನು ಬೀರಿದ ಈ ಕಾರ್ಯಕ್ರಮವನ್ನು ಶತಾವಧಾನಿ ಡಾ. ಗಣೇಶ್ ಮತ್ತು ವಿದುಷಿ ರಂಜನಿ ವಾಸುಕಿ ಅವರು ನಡೆಸಿಕೊಟ್ಟರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ ರಾಗದಿಂದ ಗಣೇಶ್ ಅವರು ಕಾರ್ಯಕ್ರಮ ಆರಂಭಿಸಿದರು. ರಂಜನಿಯವರು ಈ ರಾಗದಲ್ಲಿ ರಚಿಸಿರುವ ತ್ಯಾಗರಾಜರ `ಯವರುರಾ ನಿನುವಿನಾ' ಎಂಬ ಕೃತಿಯನ್ನು ಹಾಡಿತೋರಿಸಿದರು. 

ಒಂದು ರಾಗದ ಆರೋಹಣ ಮತ್ತು ಇನ್ನೊಂದು ರಾಗದ ಅವರೋಹಣವನ್ನು ಸೇರಿಸಿದಾಗ ಹೊಸದೊಂದು ರಾಗ ಸೃಷ್ಟಿಯಾಗುತ್ತದೆ ಎಂದು ರಾಗಗಳ ಬಗ್ಗೆ ವಿವರಣೆ ನೀಡಿದರು ಡಾ. ಗಣೇಶ್. ಇದೇ ವೇಳೆ ಅನೇಕ ರಾಗಗಳನ್ನೂ ಉಲ್ಲೇಖಿಸಿದರು. ಶಿವರಂಜನಿ, ಶಂಕರಾಭರಣ, ದುರ್ಗಾ, ಇತ್ಯಾದಿ ರಾಗಗಳನ್ನು ಪರಿಚಯಿಸಿದರು. ಶ್ಲೋಕದಿಂದ ಕಾರ್ಯಕ್ರಮ ತೆರೆಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.