ADVERTISEMENT

ರಾಜ್ಯಗಳ ಹಿತರಕ್ಷಣೆ: ಚಿಂತನ ಮಂಥನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಕರ್ನಾಟಕ ಸಾಹಿತ್ಯ ಪರಿಷತ್ತು: ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ವಿಶಿಷ್ಟವಾದ ಸಮಸ್ಯೆಗಳು ಮತ್ತು ಅಗತ್ಯಗಳು ಇರುತ್ತವೆ. ರಾಷ್ಟ್ರೀಯ ಪಕ್ಷಗಳು ರಾಜ್ಯಗಳಲ್ಲಿ ಅಧಿಕಾರ ಸೂತ್ರ ಹಿಡಿದು ಸರ್ಕಾರ ರಚಿಸಿದಾಗ ಎಷ್ಟರ ಮಟ್ಟಿಗೆ ಇವುಗಳನ್ನು ನಿರ್ವಹಿಸಿ ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸಿವೆ ಎಂಬುದು ಎಂದಿಗೂ ಚರ್ಚಾರ್ಹವಾದ ವಿಚಾರ.

ಈ ನಿಟ್ಟಿನಲ್ಲಿ `ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಹಿತರಕ್ಷಣೆ ಸಾಧ್ಯವೇ?' ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಶನಿವಾರ (ಏ.13) ಕರ್ನಾಟಕ ಸಾಹಿತ್ಯ ಪರಿಷತ್ತು ಆಯೋಜಿಸಿದೆ.  ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಿ ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನಸಭಾ ಸದಸ್ಯ ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್ ಮತ್ತು ಚಿಂತಕ ರವೀಂದ್ರ ರೇಷ್ಮೆ ಈ ಚಿಂತನ ಮಂಥನದಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸುವರು. ಡಾ. ಸಿ. ವೀರಣ್ಣ ಅಧ್ಯಕ್ಷತೆ ವಹಿಸುವರು.

ಸ್ಥಳ: ಪಂಪ ಸಭಾಂಗಣ, 83/ಇ, 15 ನೇ ಮುಖ್ಯ ರಸ್ತೆ, ವಿಜಯನಗರ (ವಿಜಯನಗರ ಕ್ಲಬ್ ಎದುರಿಗಿರುವ ರಸ್ತೆ).  ಸಂಜೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT