ADVERTISEMENT

ರೆಡಿಫ್ ಡೀಲ್

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ರೆಡಿಫ್ ಡಾಟ್ ಕಾಮ್ ಗೃಹಿಣಿಯರಿಗಾಗಿ ಡೀಲ್ಸ್ ಫಾರ್ ಹೌಸ್‌ವೈಫ್ಸ್ ಸೇವೆ ಪ್ರಾರಂಭಿಸಿದೆ.

ಇದರ ಮೂಲಕ ಸ್ಪಾ, ರೆಸ್ಟೋರೆಂಟ್, ಆರೋಗ್ಯ ಆರೈಕೆ, ಹಾಬಿ ಕ್ಲಾಸ್, ಫೇಸ್ಟ್ ಲಿಫ್ಟಿಂಗ್ ಅಂಡ್ ಟೋನಿಂಗ್, ರುದ್ರ ಸ್ಪಾ, ಫಿಶ್ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಧನ್ವಂತ್ರಿ ಕೇರಳ ಆಯುರ್ವೇದ ಹಾಗೂ ಸಾಸಹ ಕ್ರೀಡೆ ಮೊದಲಾದವುಗಳಿಗೆ ವಿಶೇಷ ರಿಯಾಯ್ತಿ ಕೂಪನ್ ಪಡೆದುಕೊಳ್ಳಬಹುದು. ಇದಕ್ಕಾಗಿ ಮಹಿಳೆಯರು ಮನೆಯಿಂದಲೇ http://dealhojaye.rediff.com/  ಗೆ ಲಾಗಿನ್ ಆದರೆ ಸಾಕು.

`ಗೃಹಿಣಿಯರು ಗೃಹ ಬಳಕೆ ವಸ್ತುಗಳನ್ನು ಖರೀದಿಸುವಾಗ ಹೆಚ್ಚಿನ ಹಣ ಉಳಿತಾಯ ಮಾಡಲು ಇಚ್ಛಿಸುತ್ತಾರೆ. ಈ ಕೊಡುಗೆಯಿಂದ ಗೃಹಿಣಿಯರು ಹಣ ಉಳಿಸಲು ಹಾಗೂ ಡಿಸ್ಕೌಂಟ್ ಕೂಪನ್ ಪಡೆದುಕೊಳ್ಳಲು ಸುಲಭವಾಗಿದೆ~ ಎನ್ನುತ್ತಾರೆ ಸಣ್ಣ ಮತ್ತು ಮಧ್ಯಮ ಉದ್ಯಮ ವಿಭಾಗದ ಮಾರಾಟ ಮತ್ತು ವಹಿವಾಟು ವ್ಯವಹಾರ ಕಾರ್ಯಾಚರಣೆ ಉಪಾಧ್ಯಕ್ಷ ವಿವೇಕ್ ಶರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.