ADVERTISEMENT

ರೇಷ್ಮೆ, ಹತ್ತಿ ಬಟ್ಟೆಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ರೇಷ್ಮೆ, ಹತ್ತಿ ಬಟ್ಟೆಗಳ ಪ್ರದರ್ಶನ
ರೇಷ್ಮೆ, ಹತ್ತಿ ಬಟ್ಟೆಗಳ ಪ್ರದರ್ಶನ   

ಜಯನಗರ ಸಮೀಪದ ಅಶೋಕ ಪಿಲ್ಲರ್ ಬಳಿ ರೇಷ್ಮೆ ಮತ್ತು ಹತ್ತಿ ಬಟ್ಟೆಗಳ ಪ್ರದರ್ಶನ ಮೇಳವು ಈಗಾಗಲೇ ಪ್ರಾರಂಭವಾಗಿದ್ದು, ಇದು ಜೂನ್ 3ರ ವರೆಗೆ ನಡೆಯಲಿದೆ.

ದೇಶದ ವಿವಿಧೆಡೆಯ ನುರಿತ ನೇಕಾರರಿಂದ ಸಿದ್ಧವಾಗಿರುವ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಮತ್ತು ಹತ್ತಿ ಬಟ್ಟೆಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

‘ಶಾಂತಿನಿಕೇತನ್‍ನ ಕಾಂತಾ ಸಿಲ್ಕ್ ಸೀರೆಗಳು’, ಕಾಂತಾ ವರ್ಕ್ ಉಡುಪುಗಳ ವಸ್ತುಗಳು, ಅಪ್ಪಟ ರೇಷ್ಮೆಯ ಪ್ರಿಂಟೆಡ್ ಸೀರೆಗಳು ಇಲ್ಲಿ ಲಭ್ಯ. ಹುಬ್ಬಳ್ಳಿಯ ಸಿಲ್ಕ್ ಕಾಟನ್ ಸೀರೆಗಳು, ಪಶ್ಚಿಮ ಬಂಗಾಳದ ಬಾಟಿಕ್ ಸೀರೆ ಮತ್ತು ಡ್ರೆಸ್ ಮೆಟೀರಿಯಲ್ಸ್, ಭಾಗಲ್‍ಪುರದ ರೇಷ್ಮೆ ಧಿರಿಸಿನ ವಸ್ತ್ರಗಳು ಹಾಗೂ ಬಿಹಾರದಲ್ಲಿ ತಯಾರಾದ ‘ಹ್ಯಾಂಡ್‍ಬ್ಲಾಕ್ ಪ್ರಿಂಟ್’, ಖಾದಿ ಸಿಲ್ಕ್, ಚೂಡಿದಾರ ವಸ್ತ್ರಗಳೂ ಇಲ್ಲಿ ಸಿಗಲಿವೆ.

ADVERTISEMENT

ಮಧ್ಯಪ್ರದೇಶದ ಪ್ರಸಿದ್ಧ ಚಂದೇರಿ ಮತ್ತು ಮಹೇಶ್ವರಿ ಹತ್ತಿ ಮತ್ತು ರೇಷ್ಮೆ ಸೀರೆಗಳು, ಉತ್ತರ ಪ್ರದೇಶದ ಹೆಸರಾಂತ ಬನಾರಸಿ ಸಿಲ್ಕ್ ಸೀರೆ-ಡ್ರೆಸ್ ಮೆಟೀರಿಯಲ್ಸ್, ಬನಾರಸಿ ಜಮಾವರ್, ಜಮ್ದಾನಿ ರೇಷ್ಮೆ ಸೀರೆ, ಬನಾರಸಿ ಡಿಸೈನರ್ ನೆಟ್ ಸೀರೆಗಳು ಇವೆ.

ಬಡತನ ರೇಖೆಗಿಂತ ಕೆಳಗಿರುವ ಕುಶಲಕರ್ಮಿಗಳ (ಬಿಪಿಎಲ್‍ಎ) ಮತ್ತು ನೇಕಾರರ ಶ್ರಮಕ್ಕೆ ನೆರವಾಗುವ ದೃಷ್ಟಿಯಿಂದ ಅವರು ಸಿದ್ಧಪಡಿಸಿದ ವಸ್ತುಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದೇವೆ. ಗ್ರಾಹಕರಿಗೂ ಬೇರೆ ಬೇರೆ ರಾಜ್ಯಗಳ ಸಾಂಪ್ರದಾಯಿಕ ವಸ್ತ್ರಗಳು ಹಾಗೂ ಆಭರಣಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೂ ಪ್ರದರ್ಶನದ ವೀಕ್ಷಣೆಗೆ ಹಾಗೂ ಖರೀದಿಗೆ ಮುಕ್ತವಾಗಿರಲಿದೆ.

ಸಂಪರ್ಕ: 9901663291

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.