ADVERTISEMENT

ವಧು ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಜೈಪುರ ಮೂಲದ ಮನಮೋಹಕ ವಿನ್ಯಾಸಗಳ ಆಭರಣ ಬ್ರಾಂಡ್ ಹೆಸರು ಆಮ್ರಪಾಲಿ. ಅಂದರೆ ಅನನ್ಯ ಚೆಲುವು, ಸೌಂದರ್ಯದ ಪ್ರತೀಕ ಎಂದರ್ಥ. ರಾಜಸ್ತಾನ, ಗುಜರಾತ್‌ನ ಬುಡಕಟ್ಟು ಜನರ ಸಮೃದ್ಧ ಡಿಸೈನ್‌ಗಳು, ಮೀನಾಕಾರಿ, ಜಡಾವ್ ಕಲೆಗಳು, ಭವ್ಯ ಮುಘಲ್ ಶೈಲಿಗಳನ್ನೆಲ್ಲ ಸಮಕಾಲೀನ ಅಭಿರುಚಿಗೆ ತಕ್ಕಂತೆ ಪುನರ್ ವಿನ್ಯಾಸಗೊಳಿಸಿದ ಆಭರಣಗಳು `ಆಮ್ರಪಾಲಿ~ಯ ವಿಶೇಷ.

ಸಂಪ್ರದಾಯದ ಜತೆ ಸಮಕಾಲೀನ ಮಿಶ್ರಣದೊಂದಿಗೆ ಅದ್ಧೂರಿತನ ಎಂಥವರ ಗಮನವನ್ನೂ ಸೆಳೆಯುತ್ತವೆ. ಅದು ಈಗ ಹೇರಳ, ವೈವಿಧ್ಯಮಯ, ವಿನೂತನ ವಧು, ದೇವಾಲಯ ವಿನ್ಯಾಸದ ಆಭರಣಗಳ ಸಂಗ್ರಹವನ್ನು ಮಂಗಳವಾರದ ವರೆಗೆ ಪ್ರದರ್ಶಿಸುತ್ತಿದೆ. ಇಲ್ಲಿ ವಜ್ರ, ಬಂಗಾರ, ಮಾಣಿಕ್ಯ, ಪಚ್ಚೆ ಮುಂತಾದ ಆಭರಣಗಳನ್ನೂ ಪ್ರದರ್ಶಿಸಲಾಗುತ್ತದೆ.

ಮೊದಲು ಬೆಳ್ಳಿ ಆಭರಣಗಳ ತಯಾರಿಸುವುದರಲ್ಲಿ ಹೆಸರು ಗಳಿಸಿದ್ದ ಅಮ್ರಪಾಲಿ ಇಂದು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತನ್ನದೇ ವಿಶಿಷ್ಟ ವಿನ್ಯಾಸಗಳಿಂದ ಜನರನ್ನು ಆಕರ್ಷಿಸುತ್ತಿದೆ. ಆದರೆ ಬಹುತೇಕ ಮಂದಿ ಇದು ಶ್ರೀಮಂತರು ಮಾತ್ರ ಖರೀದಿ ಮಾಡುವಂತಹ ಆಭರಣಗಳು ಎಂದುಕೊಂಡಿದ್ದಾರೆ. ಆದರೆ ಅದು ಖಂಡಿತವಾಗಿಯೂ ತಪ್ಪು. ಇಲ್ಲಿನ ಆಭರಣಗಳು ಕಡಿಮೆ ಬೆಲೆಗೂ ಕೂಡ ದೊರಕುತ್ತವೆ. ಬೆಳ್ಳಿಯ ಆಭರಣಗಳು ಒಂದು ಸಾವಿರದಿಂದ ಆರಂಭವಾಗುತ್ತದೆ ಎಂದು ವಿನ್ಯಾಸಕ ಮತ್ತು ವ್ಯವಸ್ಥಾಪಕ ನಿರ್ದೇಶಕ ತರಂಗ್ ಹೇಳುತ್ತಾರೆ.

 ಪಾರಂಪರಿಕ ದೇವಾಲಯ ಮತ್ತು  ಪಚ್ಚೆ ಮತ್ತು ಮಾಣಿಕ್ಯಗಳಿಂದ ಮಾಡಿರುವ ಗಣೇಶ ಪೆಂಡೆಂಟ್ ನೋಡಲು ಆಕರ್ಷಕವಾಗಿದೆ. ಇದರೊಂದಿಗೆ ವಧುವಿನ ಸಂಗ್ರಹದಲ್ಲಿ ವಧುವಿಗಾಗಿ ದೊಡ್ಡ ದೊಡ್ಡ ಜುಮುಕಿ,  ಕೊರಳಹಾರ (ನೆಕ್‌ಲೇಸ್), ಟೀಕಾ, ಕಿವಿಯೋಲೆ, ಬೈತಲೆ ಬೊಟ್ಟು, ಸೊಂಟಪಟ್ಟಿ, ತೋಳಬಂದಿ ಒಳಗೊಂಡಂತೆ ಸುಮಾರು 300 ವಿನ್ಯಾಸಗಳಿವೆ.

`ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಮರೆಯಲಾಗದ ಮಧುರವಾದ ಕ್ಷಣ. ಆ ಸಂದರ್ಭದಲ್ಲಿ ವಧುವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ಈ ಸಂಗ್ರಹ ವಿನ್ಯಾಸಗೊಂಡಿದೆ~ ಎನ್ನುತ್ತಾರೆ ತರಂಗ್. 

  ಸ್ಥಳ: ಆಮ್ರಪಾಲಿ ಐಷಾರಾಮಿ ಬ್ರಾಂಡೆಡ್ ಮಳಿಗೆ, ಕಸ್ತೂರಬಾ ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT