ADVERTISEMENT

ವಸ್ತ್ರಗಳಲ್ಲಿ ವಸಂತಾಗಮನ ವರ್ಣ ವೈಭವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST
ವಸ್ತ್ರಗಳಲ್ಲಿ ವಸಂತಾಗಮನ ವರ್ಣ ವೈಭವ
ವಸ್ತ್ರಗಳಲ್ಲಿ ವಸಂತಾಗಮನ ವರ್ಣ ವೈಭವ   

ಬೇಸಿಗೆ ಬಂದಂತೆಲ್ಲ ಉಡುಗೆ-ತೊಡುಗೆಯತ್ತ ಒಂದಷ್ಟು ಗಮನ ಹೆಚ್ಚುತ್ತದೆ. ಆರಾಮದಾಯಕವಾಗಿರಬೇಕು. ಕಣ್ಣಿಗೆ ತಂಪು ನೀಡುವಂತಿರಬೇಕು. ಹಿತವಾಗಿರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಹತ್ತಿ ಉಡುಗೆಯತ್ತ ಒಲವು ತೋರುವುದು ಸಹಜ. ಬೆವರು ಹೀರುವಂಥ ವಸ್ತ್ರಗಳತ್ತ ಜನರು ಆಕರ್ಷಿತರಾಗುವುದು ಸಹಜ.

ಸಿಲಿಯೊ ಫ್ರಾನ್ಸ್‌ನ ವಸ್ತ್ರ ಕಂಪೆನಿ ಹೊಸ ವಸಂತ ಸಂಗ್ರಹವನ್ನು ಬಿಡುಗಡೆ ಮಾಡಿದೆ. 
ಆರಾಮದಾಯಕವಾಗಿದ್ದರೂ ಸ್ಟೈಲಿಷ್ ಮತ್ತು ಟ್ರೆಂಡಿ ಎಂದು ಪ್ರಚಾರ ಮಾಡುತ್ತಿದೆ.

ಸಿಲಿಯೊ ಮಳಿಗೆಯಲ್ಲಿ ಈ ಸಂಗ್ರಹ ಲಭ್ಯವಿದೆ. ಉಡುಗೆ ತೊಡುಗೆಗಳೊಂದಿಗೆ ಆ್ಯಕ್ಸಸರಿಗಳೂ ಲಭ್ಯ ಇವೆ. ಬೆಲೆ 699ರಿಂದ 5999ರವರೆಗಿನ ಶ್ರೇಣಿಯಲ್ಲಿ ಲಭ್ಯ. ಟೀ-ಷರ್ಟ್, ಕಾರ್ಗೊ, ಡೆನಿಮ್, ಪೊಲೊಸ್, ಪುಲ್ ಓವರ್ಸ್, ಟ್ರೌಶರ್ಸ್ ಹ್ಯಾಟು, ಬರ್ಮುಡಾ ಮುಂತಾದವು ಈ ಸಂಗ್ರಹಗಳಲ್ಲಿವೆ.

ವೈವಿಧ್ಯಮಯ ವಸ್ತ್ರಗಳ ಕ್ಷೇತ್ರದಲ್ಲಿ ಹೆಸರು ಮಾಡಿರುವ ಲೈಫ್‌ಸ್ಟೈಲ್ ಮಳಿಗೆಯು ಸಹ ವಸಂತ ಸಂಗ್ರಹವನ್ನು ಬಿಡುಗಡೆಗೊಳಿಸಿದೆ.ಹೂವಿನ ಆಹ್ಲಾದಕರ ಅನುಭವ ನೀಡಲು ಹೂ ಪ್ರಿಂಟಿರುವ ಉಡುಗೆಗಳು ಈ ಸಂಗ್ರಹದ ಮುಖ್ಯ ಆಕರ್ಷಣೆಯಾಗಿವೆ.

ಇದಲ್ಲದೇ ಕಣ್ಣಿಗೆ ತಂಪೆನಿಸುವ ತಿಳಿ ವರ್ಣದಲ್ಲಿಯೂ ತನ್ನ ಸಂಗ್ರಹವನ್ನು ಬಿಡುಗಡೆಗೊಳಿಸಿದೆ.ಗಾಢ ವರ್ಣಗಳಿದ್ದರೂ ಢಾಳಾಗಿ ಕಾಣದಂತೆ ಹೂ ಚಿತ್ತಾರಗಳಿರುವ ವಿಶೇಷ ಸಂಗ್ರಹವನ್ನೂ ಬಿಡುಗಡೆಗೊಳಿಸಿದೆ. ಬೆಲೆ 299ರಿಂದ 1699ರವರೆಗೆ ವಿವಿಧ ಶ್ರೇಣಿಯಲ್ಲಿ ವಿವಿಧ ಸಂಗ್ರಹಗಳು ಲಭ್ಯ ಇವೆ.

ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗಾಗಿ ಸಮಕಾಲೀನ ಫ್ಯಾಶನ್‌ನೊಂದಿಗೆ ಸ್ಟೈಲಿಷ್ ಉಡುಗೆ ಇದು ಎಂಬ ಪ್ರಚಾರ ಲೈಫ್‌ಸ್ಟೈಲ್ ಮಳಿಗೆಯದ್ದಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.