ADVERTISEMENT

ವಿಭಿನ್ನ ಪಾತ್ರಗಳಲ್ಲಿ ಅನಿಲ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ಬಾಲಿವುಡ್‌ನ ಅತಿ ಹೆಚ್ಚು ಬೇಡಿಕೆಯ ನಟರಲ್ಲೊಬ್ಬರು ಅನಿಲ್‌ ಕಪೂರ್‌. ವಯಸ್ಸು 61 ಆದರೂ ಈಗಲೂ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ಈಗಿನ ಯುವನಟರಿಗೆ ಸ್ಫೂರ್ತಿಯಾಗಿದ್ದಾರೆ.

ಅನಿಲ್‌ ಕಪೂರ್‌ ಸದ್ಯ ಸಲ್ಮಾನ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರೇಸ್‌– 3’, ಐಶ್ವರ್ಯಾ ರೈ ಬಚ್ಚನ್‌ ಹಾಗೂ ರಾಜ್‌ಕುಮಾರ್‌ ರಾವ್‌ ಅಭಿನಯದ ‘ಫನ್ನೆ ಖಾನ್‌’ ಹಾಗೂ ಮಗಳು ಸೋನಂ ಕಪೂರ್‌ ಅಹುಜಾ ಅವರ ‘ಏಕ್‌ ಲಡ್ಕಿ ಕೊ ದೇಖಾ ತೋ ಐಸಾ ಲಗಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ 90ರ ದಶಕದ ತಮ್ಮ ಸಹನಟಿ ಮಾಧುರೀ ದೀಕ್ಷಿತ್‌ ಅವರ ‘ಟೋಟಲ್‌ ಧಮಾಲ್‌’ ಚಿತ್ರದಲ್ಲೂ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರಗಳಲ್ಲಿ ತಮ್ಮ ಪಾತ್ರ ವೈವಿಧ್ಯದ ಬಗ್ಗೆ ಮಾತನಾಡಿರುವ ಅನಿಲ್‌, ‘ರೇಸ್‌ –3 ಸಿನಿಮಾದಲ್ಲಿ ನಾನು ಕುಟುಂಬವೊಂದರ ಯಜಮಾನನಾಗಿ ಅಭಿನಯಿಸಿದ್ದೇನೆ. ಇದರಲ್ಲಿ ನಾನು ರೇಸ್‌–1, ರೇಸ್‌– 2 ಸಿನಿಮಾಕ್ಕಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಇನ್ನು ಐಶ್ವರ್ಯಾ, ಸೋನಂ, ಮಾಧುರಿಯಂತಹ ಬ್ಯೂಟಿಫುಲ್‌ ನಟಿಯರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಆ ಚಿತ್ರಗಳಲ್ಲಿ ಅವರಿರುವುದರಿಂದಲೇ ಅವುಗಳು ವಿಶೇಷದ್ದಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.