ADVERTISEMENT

ವಿಭಿನ್ನ ಪ್ರದರ್ಶನ...

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST
ವಿಭಿನ್ನ ಪ್ರದರ್ಶನ...
ವಿಭಿನ್ನ ಪ್ರದರ್ಶನ...   

ಇದು ಮಾಮೂಲಿಗಿಂತ ಭಿನ್ನವಾದ ಪ್ರದರ್ಶನ. ಹೌದು, ಒಂದೆಡೆ, ಪ್ರತಿಷ್ಠಿತ ಉದ್ಯಮಿ ಸುಮೀತ್ ಗುಪ್ತಾ ಉಪವಾಸ ಸತ್ಯಾಗ್ರಹ, ಇನ್ನೊಂದೆಡೆ ಟಾಸ್ಮಾಕ್‌ನ ಟಿಸಮೀರ್ ಡುವಾರ ಅವರಿಂದ ‘ಅಂಗದಾನ ಮಾಡಿ’ ಎಂಬ ಕಣ್ತೆರೆಸುವ ಕಳಕಳಿಯ ಮನವಿ, ಮತ್ತೊಂದೆಡೆ ನಗರದ ಪ್ರಮುಖ ತಾಣಗಳಲ್ಲಿ ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಅರಿವು, ತ್ಯಾಜ್ಯ ವಸ್ತುಗಳಿಂದ ತಯಾರಿಸಬಹುದಾದ ಇಂಧನದ ಬಗ್ಗೆ ಜೆರಿ ಮಾರ್ಟಿನ್ ಪ್ರಾತ್ಯಕ್ಷಿಕೆ, 

ಗೋವಿಂದ ಅವರಿಂದ 950 ಎಕರೆ ವಿಸ್ತೀರ್ಣದ ಬೆಳಂದೂರು ಕೆರೆಯ ಮರುಸಂಸ್ಕರಣದ ಯೋಜನಾ ನಕ್ಷೆ, ನಾಗರಾಜ್ ಉಡುಪ ನಿರ್ದೇಶಿಸಿದ 5 ಲಕ್ಷ ಬುಡಕಟ್ಟು ಮಕ್ಕಳ ಜೀವನದಲ್ಲಿ ತರಬಹುದಾದ ಮಾರ್ಪಾಟಿನ ಚಿತ್ರ, ಉಪೇಂದ್ರ ಶೆಟ್ಟಿಯವರು ಕರ್ನಾಟಕದ ಹಳ್ಳಿ ಮಂದಿಗಾಗಿ ನಿರ್ಮಿಸಿರುವ ಲೈಬ್ರರಿಗಳು ಇತ್ಯಾದಿ ಇತ್ಯಾದಿ. ಪ್ರದರ್ಶನವನ್ನು ಉದ್ಘಾಟಿಸಿದ ಲೋಕಾಯುಕ್ತ ಸಂತೋಷ್ ಹೆಗಡೆ, ಜನಜಾಗೃತಿಗಾಗಿ ಶ್ರೀಸಾಮಾನ್ಯರೆಲ್ಲ ಸೇರಿ ಇಂಥ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.