ADVERTISEMENT

‘ವೀಕೆಂಡ್‌ ವಿತ್‌...’ ಇನ್ನು ಮೂರೇ ಸಂಚಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ರಮೇಶ್‌ ಅರವಿಂದ್‌ ಜೊತೆ ಎಚ್‌.ಡಿ. ದೇವೇಗೌಡ
ರಮೇಶ್‌ ಅರವಿಂದ್‌ ಜೊತೆ ಎಚ್‌.ಡಿ. ದೇವೇಗೌಡ   

ಈ ಬಾರಿ ‘ವೀಕೆಂಡ್‌ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕುಳಿತುಕೊಳ್ಳಲಿದ್ದಾರೆ. ತಮ್ಮ ಬಾಲ್ಯದಿಂದ ಆರಂಭಿಸಿ, ರಾಜಕೀಯ ಜೀವನದವರೆಗಿನ ಏಳು–ಬೀಳುಗಳನ್ನು ಹೇಳಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.  ಚಿತ್ರೀಕರಣ ಈಗಾಗಲೇ ನಡೆದಿದೆ.

ದೇವೇಗೌಡರ ಕಾರ್ಯಕ್ರಮ ಪ್ರಸಾರವಾದ ಎರಡು ವಾರಗಳ ನಂತರ ‘ವೀಕೆಂಡ್ ವಿತ್ ರಮೇಶ್ ಸೀಸನ್ – 3’ ಕಾರ್ಯಕ್ರಮ ಮುಕ್ತಾಯವಾಗಲಿದೆ.

ADVERTISEMENT

ಕಾರ್ಯಕ್ರಮ ಮುಗಿಯುವ ಮೊದಲು ನಟ ಗಣೇಶ್, ನಟಿ ಮಾಲಾಶ್ರೀ ಹಾಗೂ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಸಾಧಕರ ಕುರ್ಚಿಯಲ್ಲಿ ಕೂರಲಿದ್ದಾರೆ.

‘ರಕ್ಷಿತ್ ಶೆಟ್ಟಿ ಅವರನ್ನು ಕರೆಸಿದ್ದಾಗ ಬಹಳ ವಿರೋಧ ವ್ಯಕ್ತವಾಯಿತು. ಹಾಗೆಯೇ, ಸಾಕಷ್ಟು ಬೆಂಬಲವೂ ದೊರೆಯಿತು. ಮುಂದಿನ ಸೀಸನ್‌ನಲ್ಲಿ ಸಿನಿಮಾ ರಂಗಕ್ಕೆ ಸೇರಿಲ್ಲದ, ಸಾಧನೆಯ ಹಾದಿಯಲ್ಲಿರುವ ಯುವಕರನ್ನು ಕರೆಸಬೇಕು ಎಂಬ ಆಲೋಚನೆ ಇದೆ’ ಎಂದು ಝೀ ಕನ್ನಡ ವಾಹಿನಿಯ ವಾಣಿಜ್ಯ ಮುಖ್ಯಸ್ಥ ರಾಘವೇಂದ್ರ ಅವರು ಮುಂದಿನ ಹಾದಿಯ ಬಗ್ಗೆ ವಿವರ ನೀಡಿದರು.

ಕನ್ನಡಿಗನಾಗಿ ಪ್ರಧಾನಿ ಹುದ್ದೆಗೆ ಏರಿದ ಏಕೈಕ ವ್ಯಕ್ತಿ ದೇವೇಗೌಡ. ಹಾಗಾಗಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ರಾಘವೇಂದ್ರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.