ADVERTISEMENT

ವೆಜ್ ಲವ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ತಾಪ್ಸಿ ಪನ್ನು
ತಾಪ್ಸಿ ಪನ್ನು   

ಸಿನಿಮಾ ನಟ, ನಟಿಯರಿಗೆ ವಿವಾಹ ಹಾಗೂ ಪ್ರೇಮ ನಿವೇದನೆಗಳು ಬರುವುದು ಸರ್ವೇ ಸಾಮಾನ್ಯ.

‘ಬೇಬಿ’, ‘ಜುಡುವಾ’ ಮೊದಲಾದ ಚಿತ್ರಗಳ ಮೂಲಕ ಬಾಲಿವುಡ್ ಅಂಗಳದಲ್ಲಿ ಮಿಂಚಿದ್ದ ನಟಿ ತಾಪ್ಸಿ ಪನ್ನುಗೆ ಸಹ ಇತ್ತೀಚೆಗೆ ಇ–ಮೇಲ್‌ ಮೂಲಕ ಇಂತಹದೇ ಒಂದು ಪ್ರೇಮ ನಿವೇದನೆ ಬಂದಿದೆ.

ಯುವಕನೊಬ್ಬ ‘ಹಲೋ ತಾಪ್ಸಿ ಪನ್ನು, ಐ ಲವ್‌ ಯೂ. ನನ್ನನ್ನು ಮದ್ವೆಯಾಗ್ತೀಯಾ? ನಾನು ಬ್ರಹ್ಮಚಾರಿ, ಹೆಂಡ ಕುಡಿಯಲ್ಲ, ಪ್ಯೂರ್ ವೆಜ್, ಸುಳ್ಳು ಪರೀಕ್ಷೆ, ಬ್ರೈನ್‌ ಮ್ಯಾಪಿಂಗ್ ಪರೀಕ್ಷೆಗಳಿಗೆ ಸದಾ ಸಿದ್ಧ. ನನ್ನನ್ನು ಮದುವೆಯಾಗು’ ಎಂದು ಇ–ಮೇಲ್‌ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ADVERTISEMENT

ಟ್ವಿಟರ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ತಾಪ್ಸಿ ‘ಎಂದೂ ಮರೆಯಲಾಗದ ವಿವಾಹ ನಿವೇದನೆ, ವೆಜಿಟೇರಿಯನ್‌ ಲವ್‌’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.