ADVERTISEMENT

ವೈಕುಂಠ ಏಕಾದಶಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 19:30 IST
Last Updated 29 ಡಿಸೆಂಬರ್ 2017, 19:30 IST
ರಾಜಾಜಿನಗರದಲ್ಲಿರುವ ಕೈಲಾಸ ವೈಕುಂಠ ದೇಗುಲದಲ್ಲಿ ಮೂಲದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ನಸುಕಿನಿಂದಲೇ ದರ್ಶನಕ್ಕಾಗಿ ಪಾಳಿಯಲ್ಲಿ ನಿಂತಿದ್ದರು. ಚಿತ್ರ: ಎಂ.ಎಸ್. ಮಂಜುನಾಥ್
ರಾಜಾಜಿನಗರದಲ್ಲಿರುವ ಕೈಲಾಸ ವೈಕುಂಠ ದೇಗುಲದಲ್ಲಿ ಮೂಲದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ನಸುಕಿನಿಂದಲೇ ದರ್ಶನಕ್ಕಾಗಿ ಪಾಳಿಯಲ್ಲಿ ನಿಂತಿದ್ದರು. ಚಿತ್ರ: ಎಂ.ಎಸ್. ಮಂಜುನಾಥ್   

ಮಾರ್ಗಶಿರ ಶುದ್ಧ ಏಕಾದಶಿಗೆ ‘ವೈಕುಂಠ ಏಕಾದಶಿ’ಯ ಹಿರಿಮೆ. ದೇಗುಲಗಳಲ್ಲಿ ನಸುಕಿನಿಂದಲೇ ವಿಶೇಷ ಪೂಜೆ, ಉತ್ಸವಗಳ ಸಂಭ್ರಮ. ಮಿರಿಮಿರಿ ಮಿನುಗುವ ಉತ್ಸವಮೂರ್ತಿಗಳು ಪ್ರಾಕಾರೋತ್ಸವ ಮುಗಿಸಿ ಅಟ್ಟ ಏರಿ ವಿಶ್ರಮಿಸುವುದೇ ತಡ, ಭಕ್ತರು ವೈಕುಂಠದ್ವಾರ ಪ್ರವೇಶಿಸಿ ಧನ್ಯರಾಗಲು ಕಾತರಿಸುತ್ತಾರೆ.

ಗರ್ಭಗುಡಿಯಲ್ಲಿರುವ ದೇವರು ಭಕ್ತರ ಮನಕ್ಕೆ ಇಳಿದು ಬರುವ, ನಂಬಿದವರನ್ನು ತನ್ನ ಮನೆಗೂ ಕರೆಸಿಕೊಳ್ಳುವ ವಿಶಿಷ್ಟ ಭಾವಪ್ರಪಂಚದ ಪ್ರತೀಕ ವೈಕುಂಠ ಏಕಾದಶಿ.

*

ADVERTISEMENT


ವೈಕುಂಠ ಏಕಾದಶಿ ಪ್ರಯುಕ್ತ ಕೋಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಿತ್ರ: ಚಂದ್ರಹಾಸ ಕೋಟೆಕಾರ್

*


ಜೆ.ಪಿ.ನಗರ 2ನೇ ಹಂತದಲ್ಲಿರುವ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇಗುಲದ ಎದುರು ಸೇರಿದ್ದ ಭಕ್ತಸಮೂಹ. ಚಿತ್ರ: ಎಸ್‌.ಕೆ. ದಿನೇಶ್

*


ರಾಜಾಜಿನಗರದಲ್ಲಿರುವ ಇಸ್ಕಾನ್ ರಾಧಾಕೃಷ್ಣ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಮೂರ್ತಿಗೆ ಸಹಸ್ರ ನಾಮಾರ್ಚನೆ ನಡೆಯಿತು.

*


ಕೋಟೆ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಭಾರಿ ಜನಸಂದಣಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.