ADVERTISEMENT

ಶನೈಶ್ಚರಸ್ವಾಮಿ ಜಯಂತಿ

​ಪ್ರಜಾವಾಣಿ ವಾರ್ತೆ
Published 26 ಮೇ 2014, 19:30 IST
Last Updated 26 ಮೇ 2014, 19:30 IST
ಶನೈಶ್ಚರಸ್ವಾಮಿ ಜಯಂತಿ
ಶನೈಶ್ಚರಸ್ವಾಮಿ ಜಯಂತಿ   

ನಗರದ ಜಕ್ಕೂರು ಬಡಾವಣೆಯಲ್ಲಿರುವ ಶನೈಶ್ಚರಸ್ವಾಮಿ ದೇವಾಲಯದ 28ನೇ ವರ್ಷದ ಶನೈಶ್ಚರಸ್ವಾಮಿ ಜಯಂತಿ ಹಾಗೂ ಆರಾಧನಾ ಮಹೋತ್ಸವ ಮೇ 27ರಿಂದ ಮೇ 31ರವರೆಗೆ ನಡೆಯಲಿದೆ.

ಮಂಗಳವಾರ (ಮೇ 27) ಸಂಜೆ 5.30ಕ್ಕೆ ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಮಂಗಳದ್ರವ್ಯನಯನ ಅಂಕುರಾರ್ಪಣೆ, ಯಾಗಶಾಲಾಪ್ರವೇಶ, 108 ಕಳಶ ಸ್ಥಾಪನೆ, ಅಗ್ನಿಮುಖ ಗಣಪತಿಹೋಮ ನಡೆಯಲಿವೆ. ಬುಧವಾರ ತಿಲತೈಲಾಭಿಷೇಕ, ತಿಲಧಾನ್ಯ ಅಭಿಷೇಕ, ಮಂಗಳ ದ್ರವ್ಯನಯನ, ಅಭಿಷೇಕ, ಪಂಚಾಮೃತ ಅಭೀಷೇಕ, ಶನೈಶ್ಚರ ಸಹಸ್ರನಾಮಹೋಮ ಹಾಗೂ ಅನ್ನದಾನ ಏರ್ಪಡಿಸಲಾಗಿದೆ. 

ಮಧ್ಯಾಹ್ನ 2ರಿಂದ 5ರವರಗೆ ಶ್ರೀರಾಮಪುರದ ಶ್ರೀ ಮುನೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ನಂತರ ಜೇಷ್ಠಾದೇವಿಸಮೇತ ಸ್ವಾಮಿಯ ‘ಕಲ್ಯಾಣೋತ್ಸವ’ಕ್ಕೆ ಭಕ್ತರು ಸಾಕ್ಷಿಯಾಗಲಿದ್ದಾರೆ.

ಗುರುವಾರ ರುದ್ರಾಭಿಷೇಕ, ದುರ್ಗಾಹೋಮ, ಮಧ್ಯಾಹ್ನ 2ರಿಂದ 5ರವರಗೆ ಜಕ್ಕೂರಿನ ಕೋದಂಡರಾಮ ಭಜನಾಮಂಡಳಿ ಹಾಗೂ ಅಮೃತಹಳ್ಳಿಯ ಉಭಯಮಾರಮ್ಮ ಭಕ್ತ ಮಂಡಳಿಯವರಿಂದ ಭಜನಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ಶನೈಶ್ಚರಸ್ವಾಮಿಯ ಮೆರವಣಿಗೆ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶಯನೋತ್ಸವ ಹಾಗೂ ಶನಿವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ ಹಾಗೂ ವಸಂತೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾ ಗಿದೆ. ಹೆಚ್ಚಿನ ಮಾಹಿತಿಗೆ–9845301012.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.