ADVERTISEMENT

ಶಾಲಾ ಮಕ್ಕಳಿಗೆ ಫುಟ್‌ಬಾಲ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 13:38 IST
Last Updated 19 ಡಿಸೆಂಬರ್ 2013, 13:38 IST

ನಿರ್ಲಕ್ಷಿತ ಮತ್ತು ಬಡ ಮಕ್ಕಳಿಗಾಗಿ ೨೦ ಸಾವಿರ ಫುಟ್‌ಬಾಲ್‌ಗಳನ್ನು ಕೊಡುಗೆ ನೀಡುವ ಉದ್ದೇಶದೊಂದಿಗೆ ಷವರ್ಲೆ ಇಂಡಿಯಾ ಆಯೋಜಿಸಿರುವ ಒನ್ ವರ್ಲ್ಡ್ ಫುಟ್‌ಬಾಲ್‌ ಪ್ರಾಜೆಕ್ಟ್‌ನ ಅಡಿ ನಗರದ ಗುಂಜೂರು ಶಾಲೆಯ 70 ಮಕ್ಕಳಿಗೆ ಫುಟ್‌ಬಾಲ್‌ಗಳನ್ನು ವಿತರಿಸಲಾಯಿತು.

‘ಹೆಚ್ಚಿನ ಬಡ ಮಕ್ಕಳು ನಿರ್ಲಕ್ಷಿತ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಫುಟ್‌ಬಾಲ್‌ ಆಟ ಇಂತಹ ಮಕ್ಕಳ ಉತ್ಸಾಹ, ಸಂತಸವನ್ನು ಹೆಚ್ಚಿಸಿ, ಅವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲಿದೆ. ಷವರ್ಲೆ ಪ್ರಾಯೋಜಿತವಾದ ಒನ್ ವರ್ಲ್ಡ್ ಫುಟ್‌ಬಾಲ್‌ ಪ್ರಾಜೆಕ್ಟ್ ದೇಶದಾದ್ಯಂತ ಮಕ್ಕಳಿಗೆ ತಮ್ಮ ಬಡತನದ ಸ್ಥಿತಿಯ ನಡುವೆಯೂ ದೈಹಿಕ ಬಲ, ಕ್ರೀಡೆ ಮತ್ತು ತಂಡದ ಉತ್ಸಾಹ ತಂದು ಕೊಡುವ ಮಾರ್ಗಗಳನ್ನು ಒದಗಿಸಲು ನೆರವಾಗಲಿದೆ.

ಇದನ್ನು ನಾವು ಕೆಲವೊಂದು ಬಾರಿ ಪವರ್ ಆಫ್ ಪ್ಲೇ ಎಂದು ಬಣ್ಣಿಸುತ್ತೇವೆ’ ಎನ್ನುತ್ತಾರೆ ಜನರಲ್ ಮೋಟಾರ್‍ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾದ ಉಪಾಧ್ಯಕ್ಷ ಎಡ್ವರ್ಡ್ ಜೆ. ಸಿಜೆನ್. ನಿರ್ಲಕ್ಷಿತ ಯುವಜನರಿಗಾಗಿ ಕೆಲಸ ಮಾಡುತ್ತಿರುವ ಎನ್‌ಜಿಒ ಸ್ಲಂ ಸಾಕರ್ ಮೂಲಕ ಫುಟ್‌ಬಾಲ್‌ಗಳನ್ನು ವಿತರಿಸುವ ಯೋಜನೆ ಹೊಂದಿದೆ.

ಈ ಕಾರ್ಯಕ್ರಮದ ಭಾಗವಾಗಿ ಮೂರು ವರ್ಷಗಳ ಪ್ರಾಯೋಜನೆಯ ಒನ್ ವರ್ಲ್ಡ್ ಫುಟ್ಬಾಲ್‌ ಪ್ರಾಜೆಕ್ಟ್ ವಿಶ್ವದಾದ್ಯಂತ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳು, ನಿರ್ಲಕ್ಷಿತರ ಶಿಬಿರ ಮತ್ತು ವಿಶ್ವದ ಇತರೆ ಕಡೆಗಣಿಸಲಾದ ಸಮುದಾಯದ ಯುವಜನರಿಗೆ ಅಂದಾಜು 15 ಲಕ್ಷ ಫುಟ್‌ಬಾಲ್‌ ವಿತರಿಸುವ ಗುರಿ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.