ADVERTISEMENT

ಶಿವರಾತ್ರಿ ವಿಶೇಷ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಮಲೆಗಳಲ್ಲಿ ಮದುಮಗಳು
ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್: ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಇಡೀ ರಾತ್ರಿ ‘ಮಲೆಗಳಲ್ಲಿ ಮದುಮಗಳು’ ರಂಗ ಪ್ರಯೋಗದ ವಿಡಿಯೋ ಪ್ರದರ್ಶನ. ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಗೆ ಕೆ.ವೈ. ನಾರಾಯಣಸ್ವಾಮಿ ಮತ್ತು ಸಂಗಡಿಗರು ರಂಗರೂಪ ನೀಡಿದ್ದು, ಸಿ. ಬಸವಲಿಂಗಯ್ಯ ನಿದೇರ್ಶಿಸಿದ್ದಾರೆ. ಇತ್ತೀಚೆಗೆ ಮೈಸೂರಿನ ರಂಗಾಯಣದಲ್ಲಿ ಈ ನಾಟಕ ಪ್ರದರ್ಶಿತಗೊಂಡಿತ್ತು. ವಿಡಿಯೋ ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ. ಸ್ಥಳ: ನಗರ ಕೇಂದ್ರ ಗ್ರಂಥಾಲಯ, ಪಶ್ಚಿಮ ವಲಯ, ಹಂಪಿನಗರ. ರಾತ್ರಿ 9.  ಮಾಹಿತಿಗೆ: 94481 02158.

ಸಾಯಿ ನೃತ್ಯ ನಮನ
ಸಂಸ್ಕೃತಿ ಕೇಂದ್ರ: ಮಂಗಳವಾರ ಶ್ರೀ ಸಾಯಿ ಮಂದಿರದ ವಾರ್ಷಿಕೋತ್ಸವ. ಬೆಳಿಗ್ಗೆ 8ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ 7ಕ್ಕೆ ನೃತ್ಯ ನಮನ (ಭರತನಾಟ್ಯ). ಬುಧವಾರ ಶಿವರಾತ್ರಿ ಮಹೋತ್ಸವ. ಬೆಳಿಗ್ಗೆ 7.30ಕ್ಕೆ ರುದ್ರಾಭಿಷೇಕ, ಸಂಜೆ 6.30ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ. ಗಿರಿಜಾ ಕಲ್ಯಾಣೋತ್ಸವ. ರಾತ್ರಿ 9.30ಕ್ಕೆ ಶ್ರೀ ಅಭಯ ಚೈತನ್ಯ ಅವರಿಂದ ‘ಧ್ಯಾನ ಕ್ರಮ’ದ ಮಾಹಿತಿ ಹೊತ್ತಿಗೆ ಲೋಕಾರ್ಪಣೆ. ಸ್ಥಳ: ನಂ1, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಮಲ್ಲೇಶ್ವರಂ.

ಶಿವರಾತ್ರಿ ಸಂಗೀತ
ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ದಿಬ್ಬೂರು ವೀರಪ್ಪ ನಂಜಮ್ಮ ಎಂಡೋಮೆಂಟ್ ಟ್ರಸ್ಟ್: ಬುಧವಾರ ಶಿವರಾತ್ರಿ ಸಂಗೀತ. ಕಲಾವಿದರು: ದೇವರೆಡ್ಡಿ ಚಿಂಚೋಳಿ, ನಾರಾಯಣ್‌ರಾವ್ ಮಾನೆ, ಪಂ.ಪುಟ್ಟರಾಜ ಗವಾಯಿ ಸಂಗೀತ ಶಾಲೆಯ ಅಂಧಮಕ್ಕಳು, ನೀಲಾಂಬಿಕೆ, ಉಷಾ ನಟರಾಜ್ ಮತ್ತು ಸ್ನೇಹಾ, ಎನ್.ಎಂ.ರಾಜಶೇಖರ, ವೆಳ್ಳಿಯಮ್ಮ, ಬಾಪುಗೌಡ ಪಾಟೀಲ್. ಉದ್ಘಾಟನೆ: ಅರುಣಾ ಚಂದ್ರಶೇಖರ್. ಅಧ್ಯಕ್ಷತೆ: ದಿಬ್ಬೂರು ಸಿದ್ಧಲಿಂಗಪ್ಪ. ಸ್ಥಳ: ಜೆಎಸ್‌ಎಸ್ ಕಾಲೇಜು ಸಭಾಂಗಣ, ಜಗದ್ಗರು ಶಿವರಾತ್ರೀಶ್ವರ ವೃತ್ತ, 38ನೇ ಅಡ್ಡ ರಸ್ತೆ, ಜಯನಗರ 8ನೇ ಬ್ಲಾಕ್.
ಸಂಜೆ 6.

ಸಾಮೂಹಿಕ ಶಿವಪೂಜೆ
ಶರಣರ ಬಳಗ: ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಸಾಮೂಹಿಕ ಶಿವಪೂಜೆ. ನೇತೃತ್ವ: ಎಸ್.ಎನ್.ಶಿವಕುಮಾರಸ್ವಾಮಿ. ಅಧ್ಯಕ್ಷತೆ: ಶಕುಂತಲಾ ಜಯದೇವ್.ಸ್ಥಳ: ತೋಂಟದ ಶ್ರೀ ಸಿದ್ಧಲಿಂಗೇಶ್ವರ ಸಮುದಾಯ ಭವನ, 7ನೇ ಅಡ್ಡ ರಸ್ತೆ, 16ನೇ ಮುಖ್ಯ ರಸ್ತೆ, ಬಿಟಿಎಂ 2ನೇ ಹಂತ. ಸಂಜೆ 5.30.

 ‘ಶಿವಲೀಲೆ’
ಮುನೀಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್: ಬುಧವಾರ ಬೆಳಿಗ್ಗೆ ಅಭಿಷೇಕ. ಸಂಜೆ 6ಕ್ಕೆ ಶುದ್ಧಾತ್ಮಾನಂದ ಸ್ವಾಮಿ ಅವರಿಂದ ಎಂ.ಆರ್.ಮುನಿಸಿದ್ದಪ್ಪ ಅವರ ಶಿವರಾತ್ರಿ ಕೃತಿ

ಲೋಕಾರ್ಪಣೆ.
‘ಶಿವಲೀಲೆ’ ಕಥಾಕಾಲಕ್ಷೇಪ, ಕುಡೆನೂರು ವೆಂಕಟರಮಣದಾಸ ಅವರಿಂದ ಅಖಂಡ ಭಜನೆ. ಟಿ.ವಿ.ರಾಜ ಗೋಪಾಲಾಚಾರಿ ತಾಳಕುಂಟೆ ಹಾಗೂ ಎನ್.ಆರ್.ಕೃಷ್ಣಪ್ಪ ನಾರಾಯಣಕೆರೆ ಅವರಿಂದ ಸಂಗೀತ. ಟಿ.ವಿ. ವೆಂಕಟಶಾಮಾಚಾರಿ (ಹಾರ್ಮೋನಿಯಂ), ಮುನಿರಾಜು (ತಬಲಾ), ಟಿ.ವಿ.ರಾಜಗೋಪಾಲಚಾರಿ (ಸೋಲೆಕ್ಸ್), ಪಿಳ್ಳಪ್ಪ (ಘಟ). ಸ್ಥಳ: ನಂ.105, 4ನೇ ಅಡ್ಡ ರಸ್ತೆ, ಜೆಸಿ ರಸ್ತೆ, ನ್ಯೂ ಕಲಾಸಿಪಾಳ್ಯಂ ಎಕ್ಸ್‌ಟೆನ್‌ಷನ್.

 ಪೂಜೆ
ಗಾಯತ್ರಿ ಸತ್ಸಂಗ ಸಭಾ ಟ್ರಸ್ಟ್: ಬುಧವಾರ ಸಂಜೆ 6ರಿಂದ ಪೂಜೆ. ಸ್ಥಳ: ನಂ.74, 2ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ಆಂಧ್ರಹಳ್ಳಿ, ರಾಘವೇಂದ್ರನಗರ.

ಅಹೋರಾತ್ರಿ ಪೂಜೆ.
ಸನಾತನ ಭಕ್ತ ಮಂಡಲಿ ಟ್ರಸ್ಟ್: ಬುಧವಾರ ಅಹೋರಾತ್ರಿ ಪೂಜೆ. ಸ್ಥಳ: ಕೋದಂಡರಾಮ ದೇವಾಲಯ, ವಿಜಯನಗರ ಕಾರ್ಡ್ ರಸ್ತೆ (ಪೂರ್ವ).

ಪಲ್ಲಕ್ಕಿ ಉತ್ಸವ
ಗವಿಗಂಗಾಧರೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಸಮಿತಿ: ಬುಧವಾರ ಬೆಳಿಗ್ಗೆ 7.30ರಿಂದ  ರಾಮಚಂದ್ರ (ಮಂಗಳವಾದ್ಯ), ಜಿ.ಎನ್.ಪ್ರಕಾಶ್ ರಾವ್ ಬಾಗಲ್ (ವೀಣಾವಾದನ), ವೆಂಕೋಬರಾವ್ ಬಾಗಲ್ (ಪಿಟೀಲು ವಾದನ), ದಾಸವಾಣಿ ತಂಡ (ಭಕ್ತಗೀತೆ), ಮಂಜುಳವಾಣಿ ಯುವತಿ ಸಂಘ (ಭಕ್ತಗೀತೆ), ಎಸ್.ಪ್ರವೀಣ್ ಕುಮಾರ್ ಅವರ ಇಂಚರ ತಂಡ (ಸುಗಮ ಸಂಗೀತ), ಪಾಮುಡಿ ನಾಗಮಣಿ ಮನೋಹರ್ ತಂಡ (ಭಕ್ತಿಸಂಗೀತ), ಸ್ವರಲಯಾಮೃತ ತಂಡ (ಕೋಳಲುವಾದನ), ನಂದಿನಿ ವಿಜಯ ವಿಠಲ (ಭಾವಗೀತೆ, ದೇವರಪದ). ಗುರವಾರ ಬೆಳಗಿನ 6ರ ವರೆಗೆ ಪೂಜೆ. ಸ್ಥಳ: ಗವೀಪುರ.

 ‘ಆರ್‌ವಿಎಂ ಶಿವ ಭಜನ್’
ಮಹಾ ಶಿವರಾತ್ರಿ ನಿಮಿತ್ರ ಸಂಗೀತ ಪ್ರಿಯರಿಗಾಗಿ ರವಿ ಮೇಲ್ವಾನಿ ಅವರ ‘ಆರ್‌ವಿಎಂ’ ಪ್ರತಿಷ್ಠಾನವು ‘ಆರ್‌ವಿಎಂ ಶಿವ ಭಜನ್’ ಸೀಡಿ ಹೊರತಂದಿದೆ.ಇದು ಎಂಟು ಶಿವ ಭಜನೆ ಒಳಗೊಂಡಿದ್ದು, ರವಿ ವಿ. ಮೆಲ್ವಾನಿ ಇವನ್ನು ರಚಿಸಿದ್ದಾರೆ. ಹಿರಿಯ ಗಾಯಕ ಅನುಪ್ ಜಲೋಟಾ ಅವರು ಧ್ವನಿ ನೀಡಿದ್ದಾರೆ.ಇದಲ್ಲದೆ ಬುಧವಾರ ಶಿವರಾತ್ರಿ ನಿಮಿತ್ತ ದರ್ಶನ, ವಿಶೇಷ ಪೂಜೆ, ಆರತಿ. ಗುರುವಾರ ಬೆಳಗಿನ 4ರ ವರೆಗೆ ಜಾಗರಣೆ.ಸ್ಥಳ: ಶಿವ ದೇವಸ್ಥಾನ, ಕಿಡ್ಸ್ ಕೆಂಪ್ ಹಿಂಭಾಗ, ಹಳೆ ವಿಮಾನ ನಿಲ್ದಾಣ ರಸ್ತೆ.

ಯಾಮ ಪೂಜೆ
ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ: ಬುಧವಾರ ಬೆಳಗಿನ 5ಕ್ಕೆ ಸುಪ್ರಭಾತ ಸೇವೆ. ರುದ್ರಾಭಿಷೇಕ. ರಾತ್ರಿಯಿಂದ ಗುರುವಾರ ಬೆಳಗಿನ 5.30ರ ವರೆಗೆ ಯಾಮ ಪೂಜೆ. ಬೆಳಿಗ್ಗೆ 7.30ಕ್ಕೆ ದೇವರ ಮೆರವಣಿಗೆ, ಉತ್ಸವ. ಸ್ಥಳ: ಕೆಇಬಿ ರಸ್ತೆ, ಇಟ್ಟಮಡು, ಬನಶಂಕರಿ 3ನೇ ಹಂತ.

ಬ್ರಹ್ಮ ರಥೋತ್ಸ
ಶನಿದೇವರ ದೇವಾಲಯ: ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ಸಂಜೆ 7ಕ್ಕೆ ಕುಂಭ ಮೆರವಣಿಗೆ (ಎಳ್ಳಿನ ದೀಪಾರತಿ)ಬುಧವಾರ ಬೆಳಿಗ್ಗೆ 11.30ಕ್ಕೆ ಬ್ರಹ್ಮ ರಥೋತ್ಸವ. ರಾತ್ರಿ 11ಕ್ಕೆ ಬೆಳ್ಳಿ ಪಲ್ಲಕ್ಕಿ ಉತ್ಸವ. ಪಠ, ನಂದಿ ಧ್ವಜಗಳ ಮೆರೆತ, ಚಿಟ್ಟಿ ಮೇಳ, ವೀರಗಾಸೆ, ಗಾರುಡಿ ಬೊಂಬೆ ನೃತ್ಯ, ತಮಟೆ ವಾದ್ಯ, ಸೋಮನ ಕುಣಿತ, ಬ್ಯಾಂಡ್ ಸೆಟ್, ನಾಸಿಕ್ ಡೋಲ್, ಪೂಜಾ ಕುಣಿತ. ಸ್ಥಳ; ರಾಮಕೃಷ್ಣ ಮಠ, ಬಡಾವಣೆ, ಕೆಂಪೇಗೌಡ ನಗರ.

ಸಾಮೂಹಿಕ ಶಿವಪೂಜಾ
ಶರಣರ ಬಳಗ: ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಸಾಮೂಹಿಕ ಶಿವಪೂಜೆ. ನೇತೃತ್ವ: ಎಸ್.ಎನ್. ಶಿವಕುಮಾರ ಸ್ವಾಮಿ. ಅಧ್ಯಕ್ಷತೆ; ಶಕುಂತಲಾ ಜಯದೇವ್. ಸ್ಥಳ: ತೋಂಟದ ಶ್ರೀ ಸಿದ್ಧಲಿಂಗೇಶ್ವರ ಸಮುದಾಯ ಭವನ. 7ನೇ ಅಡ್ಡ ರಸ್ತೆ, ಬಿಟಿಎಂ ಬಡಾವಣೆ, 2ನೇ ಹಂತ.ಸಂಜೆ 5.30.

ಸುಗಮ ಸಂಗೀತ
ಮಲೆಮಹದೇಶ್ವರ ಸ್ವಾಮಿ ದೇವಾಲಯ: ಮಂಗಳವಾರ ಕಾವೇರಿ ಮಾತಾ ಸಂಗೀತ ಅಕಾಡೆಮಿಯ  ಕಾವೇರಿ ಅಯ್ಯಪ್ಪ  ತಂಡದವರಿಂದ ಭಕ್ತಿ ಗೀತೆ ಮತ್ತು ಸುಗಮ ಸಂಗೀತ. ಬುಧವಾರ ಸಂಜೆ 6ಕ್ಕೆ ವೆಂಕಟಪ್ಪ ಮತ್ತು ಸಂಗಡಿಗರಿಂದ ನಾದಸ್ವ. ರಾತ್ರಿ 10.30ಕ್ಕೆ ಕೋಣನಕೊಪ್ಪಲು ಕೆ.ಎಂ.ಸಿದ್ಧರಾಜು ಮತ್ತು ಸಂಗಿಡಗರಿಂದ ದೇವರ ಕಥಾ ಕಾಲಕ್ಷೇಪ. ಸ್ಥಳ: ನಂ. 100. 2ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಚಾಮರಾಜಪೇಟೆ.

ಸಂಗೀತ ಕಛೇರಿ
ಕಾಡುಮಲ್ಲೇಶ್ವರ ಗೆಳೆಯರ ಬಳಗ: ಬುಧವಾರ ಸಂಗೀತ ಕಛೇರಿ ಮತ್ತು ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್ ಅವರಿಗೆ ಸನ್ಮಾನ. ಎಂ.ಟಿ. ಸೆಲ್ವನಾರಾಯಣ ಗಾಯನ. ಅಭಿಷೇಕ್ ಭಗವಾನ್ ಮತ್ತು ಶ್ರೀಹರಿ ಶ್ರೀರಾಂ (ಸಹ ಗಾಯನ). ವಿ.ಎಲ್. ಕುಮಾರ್ (ವಯಲಿನ್), ಶ್ರೀಮುಷಣ್ಮಂ ರಾಜಾರಾವ್ (ಮೃದಂಗ), ದಯಾನಂದ ಮೋಹಿತೆ (ಘಟ). ಸ್ಥಳ; ಕಾಡು ಮಲ್ಲೇಶ್ವರ ದೇವಸ್ಥಾನ. 12ನೇ ಅಡ್ಡ ರಸ್ತೆ. ಮಲ್ಲೇಶ್ವರ.

 ಭಜನೆ
ಪರಮಹಂಸ ಸನ್ಯಾಸ ಆಶ್ರಮ: ಬುಧವಾರ 70ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ. ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅಖಂಡ ಶಿವಪಂಚಾಕ್ಷರಿ ನಾಮಜಪ. ಸಂಜೆ 6ಕ್ಕೆ ಪರಮಹಂಸ ಸನ್ಯಾಸ ಆಶ್ರಮದ ಭಕ್ತವೃಂದದಿಂದ ಭಜನೆ. ರಾತ್ರಿ 12ಕ್ಕೆ ಆಹ್ವಾನಿತ ಭಾಗವತರು ಹಾಗೂ ಆಶ್ರಮದ ಭಕ್ತವೃಂದವರಿಂದ ನಾಮ ಸಂಕೀರ್ತನೆ.ಸ್ಥಳ: 61, 9ನೇ ಅಡ್ಡ ರಸ್ತೆ, 1ನೇ ಮುಖ್ಯರಸ್ತೆ, ರಹೇಜಾ ಅಪಾರ್ಟ್‌ಮೆಂಟ್ ಎದುರು, ಗೋವಿಂದರಾಜ ನಗರ.

ವಿಶೇಷ ಪೂಜೆ
ಕಾಶಿ ವಿಶ್ವನಾಥ ದೇವಸ್ಥಾನ: ಬುಧವಾರ ವಿಶೇಷ ಪೂಜೆ. ಸ್ಥಳ: ವನ್ನಾರ್‌ಪೇಟೆ

ಶಿವರಾತ್ರಿ ಮಹಿಮೆವ್ಯಾಸಮಧ್ವ ಸಂಶೋಧನ ಪ್ರತಿಷ್ಠಾನ: ಬುಧವಾರ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ‘ಶಿವರಾತ್ರಿ ಮಹಿಮೆ’ ‘ಪ್ರವಚನ. ಸ್ಥಳ: ಪಾಜಕ, 89/24, 2ನೇ ಅಡ್ಡ ರಸ್ತೆ, ಮೌಂಟ್‌ಜಾಯ್ ಬಡಾವಣೆ. ಹನುಮಂತನಗರ. ಸಂಜೆ 6.30.

ADVERTISEMENT

ರುದ್ರಾಭಿಷೇಕ
ರಾಮಕೃಷ್ಣ ಭಜನ ಮಂದಿರ ಮತ್ತು ಶನಿದೇವರ ದೇವಾಲಯ: ಬುಧವಾರ ಶನೇಶ್ವರ ಸ್ವಾಮಿ ಹಾಗೂ ಶಿವಲಿಂಗಕ್ಕೆ ರುದ್ರಾಭಿಷೇಕ. 7ಕ್ಕೆ ರುದ್ರ ಹೋಮ. ರಾತ್ರಿ 7ಕ್ಕೆ ಗಜಾನನ ಭಜನಾ ಮಂಡಳಿ ತಂಡದವರಿಂದ ಭಜನೆ.
ಸ್ಥಳ: ನಂ.3, 2ನೇ ಅಡ್ಡ ರಸ್ತೆ, ಮುನೇಶ್ವರ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ.

ಪ್ರಿಯಾಂಕ ನೃತ್ಯ 
ಪೊನ್ನಯ್ಯ ಲಲಿತಕಲಾ ಅಕಾಡೆಮಿ: ಬುಧವಾರ ಶಿವರಾತ್ರಿ ಸಾಂಸ್ಕೃತಿಕ ಉತ್ಸವ. ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದಿಂದ ಶಿವಕಥಾ ಗುಚ್ಛಗಳು ಕುರಿತು ಗಮಕ ವಾಚನ. ಲಲಿತ ಕಲಾ ಅಕಾಡೆಮಿಯ ಪ್ರಿಯಾಂಕ  ಅವರಿಂದ ನೃತ್ಯ. ತುಮಕೂರಿನ ಶ್ರೀಕಂಠದಾಸರಿಂದ ಭಕ್ತ ಮಾರ್ಕಂಡೇಯ ಹರಿಕಥೆ. ಕಬ್ಬನ್‌ಪೇಟೆಯ ದಿಶಾ ಆರ್ಟ್ಸ್ ಅಂಡ್ ಕಲ್ಚರ್ ಅವರಿಂದ ಸಮೂಹ ನೃತ್ಯ. ನೂಪುರ ನಿನಾದ ನೃತ್ಯ ಅಕಾಡೆಮಿಯ ಎಸ್.ರಂಜನ ಅವರಿಂದ ನೃತ್ಯ. ವಿಶಾಖ ಅವರಿಂದ ನೃತ್ಯ. ಸ್ಥಳ: ಪದ್ಮಿನಿರಾವ್ ಪರಂಪರಾ ಆರ್ಟ್ಸ್ ಅಂಡ್ ಕಲ್ಚರ್ ನಂ.8, 8ನೇ ಅಡ್ಡ ರಸ್ತೆ ಬನಶಂಕರಿ ಮೂರನೇ ಹಂತ ಚೆನ್ನಮ್ಮನಕೆರೆ ಅಚ್ಚುಕಟ್ಟು. ಸಂಜೆ 5 ರಿಂದ.

ಪಂಚಾಮೃತ ಅಭಿಷೇಕ
ಶ್ರೀ ಮಹಾಗಣಪತಿ ದೇವಸ್ಥಾನ: ಬುಧವಾರ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಪ್ತ ಋಷಿ ಪೂಜೆ, ಭಸ್ಮಾಭಿಷೇಕ. ಸ್ಥಳ: 8ನೇ ಅಡ್ಡ ರಸ್ತೆ ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ.

ಸಹಸ್ರ ಬಿಲ್ವಾರ್ಚನೆ
ಮಹಂತರ ಮಠದ ಟ್ರಸ್ಟ್: ಬುಧವಾರ ಬೆಳಿಗ್ಗೆ ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಜಯಂತಿ ಮತ್ತು ಕಾಶಿ ಜಗದ್ಗುರು ವಿಶ್ವಾರಾಧ್ಯ ಜಯಂತಿಯ ಪ್ರಯುಕ್ತ ಜಗದ್ಗುರು ರೇಣುಕಾಚಾರ್ಯ ಮೂರ್ತಿಗೆ ಹಾಗೂ ಕ್ಷೇತ್ರನಾಥ ವಿರೂಪಾಕ್ಷಸ್ವಾಮಿ ಹಾಗೂ ಸರ್ವದೇವರುಗಳಿಗೆ ಏಕವಾರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಿವಭಜನೆ. ಸ್ಥಳ: ಚಿಕ್ಕಪೇಟೆ.

ರುದ್ರ ಹೋಮ
ವಿಜಯನಗರ ಆರ್ಯ ವೈಶ್ಯ ಮಂಡಳಿ: ಬುಧವಾರ ಮಧುಕೇಶ್ವರ ಸ್ವಾಮಿ ಪ್ರತಿಷ್ಠೆ, ರುದ್ರ ಹೋಮ.ಸ್ಥಳ: ನಂ.66, (ಸಿ.ಎ.10) 2ನೇ ಮುಖ್ಯರಸ್ತೆ, ವಿಜಯನಗರ.

 ವಿಶೇಷ ದರ್ಶನ
ಶರಣ ಸಂಗಮ: ಬುಧವಾರ ಸಂಜೆಯಿಂದ ನಾಗಲೋಕದಲ್ಲಿ ನಾಗಲಿಂಗೇಶ್ವರ ವಿಶೇಷ ದರ್ಶನ. ಪ್ರವೀಣ್ ಗೋಡ್ಕಿಂಡಿ ಅವರಿಂದ ಫ್ಯೂಷನ್ ಸಂಗೀತ. ಬರಗೂರು ತಂಡದವರಿಂದ ಹಾಸ್ಯೋತ್ಸವ. ಹರಿಪ್ರಸಾದ್ ತಂಡದವರಿಂದ ಸ್ಯಾಕ್ಸೋಫೋನ್. ರಘು ದೀಕ್ಷಿತ್ ತಂಡ ಮತ್ತು ಬೀಟ್ ಗುರು ತಂಡದಿಂದ ಗಾಯನ.

ಶಾಸ್ತ್ರೀಯ ನೃತ್ಯ ಸಂಭ್ರಮದಲ್ಲಿ  ಸೂರ್ಯ ಆರ್ಟ್ಸ್ ಇಂಟರ್‌ನ್ಯಾಷನಲ್ ತಂಡದಿಂದ ಭೂ ಕೈಲಾಸ. ನಂತರ ರಾಜ್ಯ ಪ್ರಶಸ್ತಿ ವಿಜೇತ ಲಿಂಗದೇವರು ಮಹದೇವಪ್ಪ ತಂಡದಿಂದ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ನಂದಿಧ್ವಜ ಕುಣಿತ. ಅತಿಥಿ: ನಟ ಸುದೀಪ್.
ಸ್ಥಳ: ಬಿಬಿಎಂಪಿ ಮೈದಾನ, 9ನೇ ಮುಖ್ಯ ರಸ್ತೆ,  ದೂರವಾಣಿ ಕೇಂದ್ರದ ಮುಂಭಾಗ, ಜಯನಗರ 4ನೇ ಬಡಾವಣೆ.
ರುದ್ರಾಭಿಷೇಕ

ಗಣಪತಿ ಸೇವಾ ಟ್ರಸ್ಟ್: ಬುಧವಾರ ರುದ್ರಾಭಿಷೇಕ. ರುದ್ರ ಹೋಮ. ಸುಧಾಕರ ನೇತೃತ್ವದ ಉರಗಾಚಾಲ ಸಂಗೀತ ವೃಂದದವರಿಂದ ಸುಗಮ ಸಂಗೀತ.  ಸ್ಥಳ: ಶಾರದಾ ಕಾಲೋನಿ, ಬಸವೇಶ್ವರ ನಗರ.

ಸುಂದರಕಾಂಡ
ಮಾರುತಿ ಕೃಪಾ ಪೋಷಿತ ಯಕ್ಷಗಾನ ನಾಟಕ ಮಂಡಳಿ: ಬುಧವಾರ ಸುಂದರಕಾಂಡ ರಾಮಾಯಣ ಯಕ್ಷಗಾನ. ಸ್ಥಳ: ಹನುಮಂತರಾಯ ಸ್ವಾಮಿ ದೇವಸ್ಥಾನ ಮುಂಭಾಗ. ನಾಯಂಡಹಳ್ಳಿ. ರಾತ್ರಿ 9.

ಭರತನಾಟ್ಯ
ಸಂಸ್ಕೃತಿ: ಬುಧವಾರ ಸತ್ಯನಾರಾಯಣ ರಾಜು ಅವರಿಂದ ಭರತನಾಟ್ಯ. ಮಾಧುರಿ ಮತ್ತು ಪ್ರಮದಾ ಉಪಾಧ್ಯ ಅವರಿಂದ ಯಕ್ಷಗಾನ. ಭರತ್ ಆರ್.ಪ್ರಭಾತ್ ಮತ್ತು ಶರತ್ ಆರ್.ಪ್ರಭಾತ್ ಅವರಿಂದ ಕಥಕ್, ದೀಪಾ ಭಟ್, ಶಮಾ ಕೃಷ್ಣ, ಮಾಳವಿಕಾ, ಕೀರ್ತನಾ, ಶ್ರಾವಂತಿ ಅವರಿಂದ ಭರತನಾಟ್ಯ, ಸುದರ್ಶನ ಮತ್ತು ತಂಡದಿಂದ ಕಳರಿಪಯಟ್ಟು.ಸ್ಥಳ; 17ನೇ ಎ ಕ್ರಾಸ್, 15ನೇ ಮೇನ್, ಜೆ.ಪಿ.ನಗರ, 5ನೇ ಫೇಸ್. ಮಾಹಿತಿಗೆ: 9844017675.

ಅಷ್ಟೋತ್ತರ ಅರ್ಚನೆ
ರಾಮಕೃಷ್ಣ ಮಠ: ಬುಧವಾರ ಸಂಜೆ 5.30ರಿಂದ ಗುರುವಾರ ಬೆಳಿಗ್ಗೆ 5ರ ವರೆಗೆ ಮಹಾಶಿವರಾತ್ರಿ ವಿಶೇಷ ಪೂಜೆ. ಭಜನೆ, ಆರತಿ, ಶಿವಅಷ್ಟೋತ್ತರ ಅರ್ಚನೆ, ಬಿಲ್ವಾರ್ಪಣೆ.ಸ್ಥಳ: ಸ್ವಾಮಿ ವಿವೇಕಾನಂದ ರಸ್ತೆ, ಹಲಸೂರು.

ವೀರಶೈವ ಸಂಗಮ ದಕ್ಷಿಣ ನಾಗರಿಕರ ಕ್ಷೇಮಾಭಿವೃದ್ಧಿ ವೇದಿಕೆ ಮತ್ತು ನೀಲಾಂಬಿಕ ಸಮಾಜ: //ಬುಧವಾರ ರಾತ್ರಿ 8 ರಿಂದ ಮಹಾ ಶಿವರಾತ್ರಿ ಮಹೋತ್ಸವ. ಸಾನಿಧ್ಯ: ರೇಣುಕ ಶಿವಾಚಾರ್ಯ ಸ್ವಾಮೀಜಿ. ದಿ. ಪುಟ್ಟರಾಜ ಗವಾಯಿ ಸಂಸ್ಥೆಯ ಅಂಧ ವಿದ್ಯಾರ್ಥಿನಿಯರು ಹಾಗೂ ದೇವರೆಡ್ಡಿ ಚಿಂಚಲಿ ತಂಡ (ಭಕ್ತಿ ಗೀತೆ ಮತ್ತು ವಚನ ಗಾಯನ), ವೀರಣ್ಣ ಹಿರೇಗೌಡ ಶಿಷ್ಯರು (ತಬಲಾ ವಾದನ), ನಾರಾಯಣರಾವ್ ಮಾನೆ (ಗಾಯನ), ಸತೀಶ್ ಹಂಪಿಹೊಳಿ (ಸುಗಮ ಸಂಗೀತ), ಯಶವಂತ್ ಹಳಿಬಂಡಿ ಮತ್ತು ಪಂಚಮ್ ಹಳಿಬಂಡಿ (ಭಕ್ತಿ ಗೀತೆ, ತತ್ವಪದ ಹಾಗೂ ಜಾನಪದ ಗೀತೆ) ಸಾಂಸ್ಕೃತಿಕ ಕಾರ್ಯಕ್ರಮ.ಸ್ಥಳ: , ಆರ್‌ಬಿಐ ಬಡಾವಣೆ, ಪುಟ್ಟೇನಹಳ್ಳಿ, ಜೆಪಿ ನಗರ 7ನೇ ಹಂತ.

ಸೋಮೇಶ್ವರಸ್ವಾಮಿ ದೇವಸ್ಥಾನ: //ಬುಧವಾರ ಬೆಳಿಗ್ಗೆ7.30 ರಿಂದ ಗುರುವಾರ ಬೆಳಿಗ್ಗೆ ವರೆಗೆ ವಿಶೇಷ ಪೂಜೆ. ಗಣಪತಿ ಗಾನ ಸಭಾ, ಸಾಸ್ಥ ಸ್ಥಾಯಿ ಸಮಿತಿ, ಶರ್ವಾಣಿ ಸಂಘ, ನಟರಾಜ ಕಲಾ ನಿಕೇತನ, ಸುಜಾತಾ ಭಾಸ್ಕರನ್ ತಂಡ, ಶ್ರೀ ವಿದ್ಯಾ ಸತ್ಸಂಗ, ಆನಂದಥೀರ್ಥ ಭಜನಾ ಮಂಡಳಿ, ಚಂದ್ರಿಕಾ ಮಂಜುನಾಥ್, ಅನುಪಮಾ ಸತ್ಯಬಾಬು, ನಿರುಪಮಾ, ಭುವನೇಶ್ವರಿ ಕಲಾವೃಂದ, ಚಿಗುರು ಚೇತನ ಕಲಾ ಬಳಗ, ಮೈಕೊ ವಿಜಯಕುಮಾರ್ ತಂಡದಿಂದ ಭಕ್ತಿ ಸಂಗೀತ, ಭಜನೆ, ಹಾಸ್ಯಮಂಜರಿ, ನಾಟಕ.ಸ್ಥಳ: ಹಲಸೂರು.

ಭಾನುನಾಥ ಚಿತ್ರ ಸಹಿತ
ಗುರು ಶನೇಶ್ಚರ ಸ್ವಾಮಿ ದೇವಾಲಯ:
//ಮಂಗಳವಾರ ಬೆಳಿಗ್ಗೆ ಹೋಮ. //ಬುಧವಾರ ಬೆಳಿಗ್ಗೆ 9 ರಿಂದ //ಗುರುವಾರ ಬೆಳಿಗ್ಗೆ 9ರ ವರೆಗೆ ಹೋಮ. ಹರಿಕಥೆ, ಎಳ್ಳಿನ ಆರತಿ, ರಾಜಬೀದಿ ಉತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ. ಚಂದ್ರಪ್ಪ ಗುಮ್ಮಾಳಪುರ, ಗೋವಿಂದರಾಜು ತಂಡ, ವೀರಭದ್ರಸ್ವಾಮಿ ಜಾನಪದ ಕಲಾ ತಂಡ, ಸಿ ಬಿ ವಿಶ್ವನಾಥ್ ತಂಡ, ಪುಟ್ಟಶಾಮಾಚಾರ್, ವಿಷ್ಣು ಮತ್ತು ತಿಮ್ಮಯ್ಯದಾಸ ತಂಡದಿಂದ ಜನಪದ ಕಾರ್ಯಕ್ರಮ.ಸ್ಥಳ: 40 ಅಡಿ ರಸ್ತೆ, ಆವಲಹಳ್ಳಿ, ಮುನೇಶ್ವರ ಬ್ಲಾಕ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.