ADVERTISEMENT

ಸಂಗೀತ ಸಮ್ಮೇಳನದಲ್ಲಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಕರ್ನಾಟಕ ಗಾನ ಕಲಾ ಪರಿಷತ್ತು: ವಿದ್ವಾಂಸರ ಮತ್ತು ಯುವ ಪ್ರತಿಭೆಗಳ 42ನೇ ಸಂಗೀತ ಸಮ್ಮೇಳನದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಮೈಸೂರು  ವಿದ್ಯಾರ್ಥಿಗಳಿಂದ ಪ್ರಾರ್ಥನೆ. 11.15ಕ್ಕೆ  ಸಮ್ಮೇಳನಾಧ್ಯಕ್ಷೆ ಆರ್.ಎ.ರಮಾಮಣಿ ಅವರಿಂದ `ಪಲ್ಲವಿಗಳಲ್ಲಿ ಮನೋಧರ್ಮ ಸಂಗೀತ~.12.15ಕ್ಕೆ ಮಾನಸಿ ಪ್ರಸಾದ್ (ವೇರಿಯಸ್ ಕ್ಲಾಸಿಕಲ್ ಮ್ಯೂಸಿಕ್ ಸಿಸ್ಟಂಸ್ ಅರೌಂಡ್ ದ ಗ್ಲೋಬ್) ಕುರಿತು ಉಪನ್ಯಾಸ.
 
ಸಂಜೆ 5ಕ್ಕೆ ವಿದ್ಯಾಭೂಷಣ ಅವರಿಂದ ಗಾಯನ. ಪಕ್ಕವಾದ್ಯದಲ್ಲಿ: ಗೋವಿಂದ ಸ್ವಾಮಿ (ವಯಲಿನ್), ಎನ್.ವಾಸುದೇವ್ (ಮೃದಂಗ), ದಯಾನಂದ್ ಮೋಹಿತೆ (ಘಟ).  7.15ಕ್ಕೆ ಆರ್.ವಿಶ್ವೇಶ್ವರಂ  ಅವರಿಂದ ವೀಣಾ ವಾದನ. ಸಿ. ಚೆಲುವರಾಜ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ).

ಭಾನುವಾರ ಬೆಳಿಗ್ಗೆ 9ಕ್ಕೆ ಬಿ.ಟಿ.ಗೋಪಾಲ್, ಎ.ಎನ್.ನಾಗೇಶ್ ಅವರಿಂದ ನಾದಸ್ವರ. ಸಿ.ವೆಂಕಟಸ್ವಾಮಿ , ಬಿ.ಟಿ.ಮಣಿ (ತವಿಲ್). ತ್ಯಾಗರಾಜರ ಪಂಚರತ್ನ ಕೀರ್ತನೆಗಳು. ಬೆಳಿಗ್ಗೆ 11.15 ಆರ್.ಎ.ರಮಾಮಣಿ ಅವರಿಗೆ `ಗಾನಕಲಾಭೂಷಣ~ ಮತ್ತು ಎ.ಎಸ್.ಎನ್.ಸ್ವಾಮಿ ಅವರಿಗೆ `ಗಾನಕಲಾಶ್ರೀ~ ಬಿರುದು ಪ್ರದಾನ. ಅತಿಥಿಗಳು: ಆರ್.ಎ.ಶ್ರೀಕಂಠನ್, ಆರ್.ವಿಶ್ವೇಶ್ವರನ್.

ನಂತರ ಡಾ.ಎ.ವಿ.ಪ್ರಸನ್ನ (ಗಮಕ), ಎನ್.ಆರ್. ನಾರಾಯಣ ಮೂರ್ತಿ (ಕಲಾಪೋಷಕ), ಉಮಾ ನಾಗಭೂಷಣ್ (ಗಾಯನ), ನರಹರಿ ಶಾಸ್ತ್ರಿ (ಕಲಾವಿದ), ಸಿ.ವೆಂಕಟಸ್ವಾಮಿ (ತವಿಲ್), ನಟರಾಜ ಮೂರ್ತಿ (ವಯಲಿನ್), ರೇವತಿ ಮೂರ್ತಿ (ವೀಣಾ), ಡಾ.ಎಂ.ಸೂರ್ಯ ಪ್ರಸಾದ್ (ಕಲಾ ವಿಮರ್ಶಕ) ಅವರಿಗೆ ಸನ್ಮಾನ. ಸಂಜೆ 6ಕ್ಕೆ ಮೈಸೂರು ಎಂ.ನಾಗರಾಜ್, ಮೈಸೂರು ಡಾ.ಎಂ.ಮಂಜುನಾಥ್ ಅವರಿಂದ ದ್ವಂದ್ವ ವಯಲಿನ್. ಪಕ್ಕವಾದ್ಯದಲ್ಲಿ: ಟಿ.ಎ.ಎಸ್.ಮಣಿ (ಮೃದಂಗ), ಎ.ಎಸ್.ಎನ್.ಸ್ವಾಮಿ (ಖಂಜಿರಾ), ಗಿರಿಧರ್ ಉಡುಪ (ಘಟ). ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.