ADVERTISEMENT

ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ

ಈರಪ್ಪ ನಾಯ್ಕರ್
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST
ಬುಡನಾಳದಲ್ಲಿರುವ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನದೊಳಗೆ ವಿವಿಧ ಔಷಧೀಯ ಸಸ್ಯಗಳ ಮಾಹಿತಿ ನೀಡುವ ಫಲಕಗಳು
ಬುಡನಾಳದಲ್ಲಿರುವ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನದೊಳಗೆ ವಿವಿಧ ಔಷಧೀಯ ಸಸ್ಯಗಳ ಮಾಹಿತಿ ನೀಡುವ ಫಲಕಗಳು   

ಹುಬ್ಬಳ್ಳಿಯಿಂದ ಸುಮಾರು 13 ಕಿಮೀ ದೂರದಲ್ಲಿ ಧಾರವಾಡ ಅರಣ್ಯ ವಿಭಾಗ ವ್ಯಾಪ್ತಿಯ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಬುಡನಾಳದ ‘ಅಮೃತ ಸಸ್ಯ ಸಂಜೀವಿನಿ ವನ’ ಈಗ ‘ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ’ವಾಗಿ ಮನ ಸೆಳೆಯುತ್ತಿದೆ.

1997-98ರಲ್ಲಿ ‘ಅಮೃತ ಸಸ್ಯ ಸಂಜೀವಿನಿ ವನ’ ಎಂದು ಕರೆಯಲಾಗುತ್ತಿದ್ದ ಈ ಉದ್ಯಾನ ಈಗ ವಿವಿಧ ಔಷಧೀಯ ಸಸ್ಯ , ಮರಗಳನ್ನು ಹೊಂದಿ ಇನ್ನಷ್ಟು ಹಸಿರು ಅರಣ್ಯ ಪರಿಸರದಲ್ಲಿ ಆಕರ್ಷಕವಾಗಿ ರೂಪುಗೊಂಡಿದೆ.

ವಿವಿಧೆಡೆಗಳಿಂದ ಬರುವ ಜನರಿಗಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಮುಂದೆ ಸಾಗಲು ಅನುವಾಗುವಂತೆ ವಿಭಿನ್ನವಾದ ತಂಗುದಾಣವನ್ನು ನಿರ್ಮಿಸಲಾಗಿದೆ. ಇಲ್ಲಿಯೇ ಮಕ್ಕಳಿಗೆ ಆಟವಾಡಲು ಹಲವು ಆಟಿಕೆಗಳು, ಜಾರುಬಂಡಿ, ಉಯ್ಯಾಲೆಯೊಂದಿಗೆ ಮನಸೆಳೆಯುತ್ತಿದೆ.

ADVERTISEMENT

ಜತೆಗೆ ಯಾವ ರೋಗಗಳಿಗೆ ಯಾವ ಸಸ್ಯ ಔಷಧೀಯ ಗುಣವನ್ನು ಹೊಂದಿದೆ ಎಂಬ ಫಲಕಗಳನ್ನು ನೆಡಲಾಗಿದೆ. ವಿಶ್ರಾಂತಿ ಗೋಪುರದೊಳಗೆ ವಿವಿಧ ಪ್ರಕಾರದ ಪ್ರಾಣಿ, ಪಕ್ಷಿ, ಕೀಟ ಹಾಗೂ ಹಾವುಗಳ ಬಗ್ಗೆ ಮಾಹಿತಿ ಫಲಕಗಳನ್ನು ತೂಗು ಬಿಡಲಾಗಿದೆ.


ಮಕ್ಕಳಿಗೆ ಆಟವಾಡಲು ಕಿರು ಉದ್ಯಾನ

ಬಗೆ ಬಗೆಯ ಹೆಸರಿನ ವನಗಳು...
ಮೂಲಿಕೆಗಳ ವನ, ಸ್ವಾಸ್ಥ್ಯ ವನ, ಬಾಲ ಚಿಕಿತ್ಸೆ ವನ, ಸ್ತ್ರೀ ರೋಗಗಳ ಚಿಕಿತ್ಸೆ ವನ, ಸೌಂದರ್ಯವರ್ಧಕ ವನ, ಸಾಮಾನ್ಯ ರೋಗಗಳ ಚಿಕಿತ್ಸೆ ವನ, ರಾಶಿ ಮತ್ತು ನಕ್ಷತ್ರ ವನ, ಪಂಚವಟಿ ವನ, ಮನೆಮದ್ದು ವನ, ಧಾರ್ಮಿಕ ವನ, ಆಯುರ್ವೇದಿಕ್ ಗುಂಪು, ಬಾಲವನ, ಪಶು ಚಿಕಿತ್ಸೆ ವನ, ಅರಣ್ಯ ಮತ್ತು ಕೃಷಿ, ತಪೋವನ, ಸುಗಂಧ ದ್ರವ್ಯಗಳ ವನ... ಸೇರಿದಂತೆ ಬಗೆಬಗೆಯ ವನಗಳ ಫಲಕಗಳನ್ನು ಅಳವಡಿಸಿ ಅಲ್ಲಿ ಸಸ್ಯಗಳನ್ನು ಬೆಳೆಸಲಾಗಿದೆ.

*
10 ಸಾವಿರ ಔಷಧೀಯ ಸಸ್ಯಗಳು...
ಇಲ್ಲಿನ ಅರಣ್ಯ ಪ್ರದೇಶ ಸುಮಾರು 14 ಹೆಕ್ಟೇರ್ ವಿಸ್ತಾರವಾಗಿದ್ದು ಇದರಲ್ಲಿ 25 ಎಕರೆ ಭೂಮಿಯಲ್ಲಿ 10 ಸಾವಿರ ವಿವಿಧ ಔಷಧೀಯ ಸಸ್ಯಗಳನ್ನು ನೆಡಲಾಗಿದೆ. ಟ್ರೀ ಪಾರ್ಕ್ ಯೋಜನೆಯಲ್ಲಿ 2017 ರಲ್ಲಿ ಪ್ರಾರಂಭಿಸಲಾಗಿದ್ದು 2021 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೀಗ ಅರ್ಧದಷ್ಟು ಕೆಲಸವನ್ನು ಪೂರ್ಣಗೊಳಿಸಲಾಗಿದೆ.

ಚಿತ್ರಗಳು ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.