ADVERTISEMENT

ಸುಷ್ಮಿತಾ ಯಶಸ್ಸಿನ ಹಾದಿಯಲ್ಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಸುಷ್ಮಿತಾ ಜೋಶಿ
ಸುಷ್ಮಿತಾ ಜೋಶಿ   

‘ರನ್‌ ಅ್ಯಂಟನಿ’ ಮತ್ತು ‘ನೂರೊಂದು ನೆನಪು’ ಚಿತ್ರಗಳಲ್ಲಿ ನಟಿಸಿ ಗಮನಸೆಳೆದಿರುವ ನಟಿ ಸುಷ್ಮಿತಾ ಜೋಶಿ ಮುಂದಿನ ಸಿನಿಮಾ ಆಯ್ಕೆಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆಯ ಹೆಜ್ಜೆ ಇಡುವ ಸೂಚನೆ ನೀಡಿದ್ದಾರೆ.

ವಿನಯ್‌ ರಾಜ್‌ಕುಮಾರ್‌ ಎದುರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ರನ್‌ ಆ್ಯಂಟನಿಯ ಅನುಭವವನ್ನು ಹಂಚಿಕೊಂಡ ಅವರು, ಕ್ಯಾಮೆರಾ ಹಿಂದಿನ ಕಾರ್ಯ ಚಟುವಟಿಕೆಗಳು ಮತ್ತು ಕಲೆಯಾಗಿ ನಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ನೂರೊಂದು ನೆನಪು ಚಿತ್ರದಲ್ಲಿ ನಾಚಿಕೆ ಸ್ವಭಾವದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಷ್ಮಿತಾ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆ ನಂತರ ಅನೇಕ ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂದಿದೆ. ಇನ್ನೂ ಕಾಲೇಜು ಓದುತ್ತಿರುವ ಸುಷ್ಮಿತಾ ಇದೇ ಕಾರಣದಿಂದ ಅನೇಕ ಅವಕಾಶಗಳನ್ನು ತಿರಸ್ಕರಿಸಿದ್ದಾರೆ. ತಮ್ಮ ಮುಂದಿನ ಸಿನಿಮಾ ಪಯಣದ ಬಗ್ಗೆ ನೀನಾ ಸಿ. ಜಾರ್ಜ್‌ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ.

ADVERTISEMENT

*ನೂರೊಂದು ನೆನಪು ಸಿನಿಮಾದ ನಿಮ್ಮ ಅನುಭವ ಹೇಗಿತ್ತು?
ನೂರೊಂದು ನೆನಪು ಚಿತ್ರ ಹಲವು ನಟರ ಸಮಾಗಮವಾಗಿತ್ತು. ಪ್ರತಿಯೊಬ್ಬ ನಟರೂ ಚಿತ್ರದ ಭಾಗವಾಗಿದ್ದರು. 1970ರ ದಶಕದ ಹೆಣ್ಣುಮಗಳ ಪಾತ್ರವನ್ನು ನಾನು ನಿರ್ವಹಿಸಿದ್ದೆ. ನನಗೆ ಅದೊಂದು ಹೊಸ ಅನುಭವ. ಅನೇಕ ಹಿರಿಯ ನಟರ ಜೊತೆ ನಟಿಸುವ ಅನುಭವ ನನ್ನದಾಗಿತ್ತು. ಅವರ ನಟನೆಯನ್ನು ನೋಡುತ್ತಾ ಕಲಿಯುವ ಅವಕಾಶ ನನಗೆ ಸಿಕ್ಕಿತ್ತು.

*ನೀವು ಮೊದಲ ಸಿನಿಮಾಕ್ಕೆ ಆಯ್ಕೆಯಾಗಿದ್ದು ಹೇಗೆ?
ನಾನು ನಟಿಯಾಗಬೇಕೆಂದು ಬಯಸಿರಲಿಲ್ಲ. ರನ್‌ ಆ್ಯಂಟನಿ ಸಿನಿಮಾದ ನಿರ್ಮಾಪಕರು ನನ್ನ ಪ್ರೊಫೈಲ್‌ ಚಿತ್ರವನ್ನು ನೋಡಿದ್ದರು. ಆ ಪಾತ್ರಕ್ಕೆ ನಾನು ಸೂಕ್ತ ಎಂದು ಅವರಿಗೆ ಅನಿಸಿದೆ. ನನ್ನ ಸ್ಕ್ರೀನ್‌ ಟೆಸ್ಟ್‌ ಯಶಸ್ವಿಯಾಯಿತು. ನನಗೆ ತಿಳಿಯುವ ಮೊದಲೇ ನಾನು ಆ ಚಿತ್ರದ ಭಾಗವಾಗಿದ್ದೆ. ಆನಂತರ ಹಿಂತಿರುಗಿ ನೋಡಿಲ್ಲ.

*ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಹೇಗನ್ನಿಸುತ್ತಿದೆ?
ಇಲ್ಲಿನ ಜನರು ಮತ್ತು ಯೋಜನೆಗಳು ಉತ್ತಮವಾಗಿವೆ. ಆದರೆ ಕನ್ನಡದಲ್ಲಿ ಮಾತನಾಡುವುದು ಕಷ್ಟವಾಗುತ್ತಿದೆ. ಕನ್ನಡ ಕಲಿಯುವುದು ಸಾಧ್ಯವಾಗಿಲ್ಲ. ಭಾಷೆ ಬಾರದೆ ನಟಿಸುವುದು ಬಹಳ ಕಷ್ಟವಾಗುತ್ತಿದೆ.

*ಅನೇಕ ಅವಕಾಶಗಳನ್ನು ತಿರಸ್ಕರಿಸಿದ್ದೀರಿ, ಇದಕ್ಕೆ ಕಾರಣವೇನು?
ನಾನು ಪ್ರಾಡಕ್ಟ್‌ ಡಿಸೈನ್‌ ವಿದ್ಯಾರ್ಥಿನಿ. ಪೂರ್ಣಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಕೊಳ್ಳುವುದಕ್ಕೂ ಮುನ್ನ ನನ್ನ ಶಿಕ್ಷಣವನ್ನು ಪೂರೈಸಬೇಕು. ಇದಕ್ಕೆ ಅವಕಾಶ ನೀಡುವಂಥ ಯೋಜನೆಗಳಲ್ಲಿ ಮಾತ್ರ ತೊಡಗಿಕೊಳ್ಳಲು ಬಯಸಿದ್ದೇನೆ. ಹಾಗಾಗಿ ಅನೇಕ ಉತ್ತಮ ಅವಕಾಶಗಳನ್ನು ತಿರಸ್ಕರಿಸಿದ್ದೇನೆ. ಅದಕ್ಕಾಗಿ ವಿಷಾದಪಡುವುದಿಲ್ಲ.

*ಇದುವರೆಗೆ ನಮಗೆ ಸಿಕ್ಕಿರುವ ಅತ್ಯುತ್ತಮ ಹೊಗಳಿಕೆ ಯಾವುದು?
ಯಾವುದೇ ಪಾತ್ರವನ್ನು ನಿರ್ವಹಿಸುವ ಶಕ್ತಿ ನನಗಿದೆ ಎಂದು ಅನೇಕರು ಹೊಗಳಿದ್ದಾರೆ. ನನ್ನಂತೆ ಈ ಕ್ಷೇತ್ರಕ್ಕೆ ಹೊಸದಾಗಿ ಬರುವವರಿಗೆ ಇಂಥಾ ಪ್ರೋತ್ಸಾಹ ಅಗತ್ಯ. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

*ನಟಿಯಾದ ನಂತರ ನಿಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ ಅನ್ನಿಸುತ್ತಿದೆಯೇ?
ಹಿಂದೆ ಗೆಳೆಯರ ಜೊತೆ ಸುತ್ತಾಡಲು ಹೋಗುತ್ತಿದೆ. ಬೀದಿಯಲ್ಲಿ ಪಾನಿಪೂರಿ ತಿನ್ನುತ್ತಿದ್ದೆ. ಈಗ ಹಾಗೆ ಸುತ್ತಾಡುವುದು ದೊಡ್ಡ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.