ADVERTISEMENT

ಸೆರಾಮಿಕ್‌ನಲ್ಲಿ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಕಲಾವಿದರ ಕೈಗೆ ಯಾವುದೇ ವಸ್ತು ಸಿಕ್ಕರೂ ಅದನ್ನು ಸುಂದರವಾಗಿ ರೂಪಿಸುತ್ತಾರೆ. ಅವರ ಸೃಜನಶೀಲತೆಯ ಮೂಸೆಯೊಳಗೆ ಕಲೆ ಸಹ ಅರಳುತ್ತಾ ಹೋಗುತ್ತದೆ. ಹೊಸ ಹೊಸ ವಿನ್ಯಾಸದಲ್ಲಿ ಮೈದಳೆಯುತ್ತದೆ.

ಕಲಾವಿದರಾದ ಬಿ.ಆರ್.ಪಂಡಿತ್ ಹಾಗೂ ಅಭಯ್ ಪಂಡಿತ್ ಅವರು ಕುಂಭಕಲಾ (ಸೆರಾಮಿಕ್ಸ್) ಕುಶಲಿಗಳು. ಇವರು ತಮ್ಮ ಕೈಗೆ ಸಿಕ್ಕ ಜೇಡಿ ಮಣ್ಣಿಗೆ ತಮ್ಮ ಮನೋ ಅಭಿವ್ಯಕ್ತಿಗನುಗುಣವಾಗಿ ಆಕೃತಿ ಕೊಟ್ಟು ಅದಕ್ಕೆ ಚೆಂದವಾಗಿ ಬಣ್ಣ ಲೇಪಿಸಿದ್ದಾರೆ. ಕುಂಭದ ಮೇಲೆ ವಿವಿಧ ಬಗೆಯ ಸೂಕ್ಷ್ಮ ಕಲಾಕೃತಿಗಳನ್ನು ಸಹ ಚಿತ್ರಿಸಿ ಅದರ ಅಂದವನ್ನು ಹೆಚ್ಚಿಸಿದ್ದಾರೆ. ಇವರು ರಚಿಸಿರುವ ಕ್ರಿಸ್ಟಲಿನ್ ವಾಸ್, ಕಾಪರ್ ರೆಡ್ ವಾಸ್, ವೈರ್‌ಕಟ್ ಪ್ಲಾಟರ್ ಮೊದಲಾದ ಕಲಾಕೃತಿಗಳು ಮನಸೆಳೆಯುತ್ತವೆ.

ಸ್ಥಳ: ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್. ಪ್ರದರ್ಶನ ಮಂಗಳವಾರದಿಂದ ಗುರುವಾರದ ವರೆಗೆ. ಬೆಳಿಗ್ಗೆ 10.30 ರಿಂದ ಸಂಜೆ 7.30.  ಜ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.