
ಪ್ರಜಾವಾಣಿ ವಾರ್ತೆಸೋನಿಯು ಹೊಸ ಎನ್‌ಡಬ್ಲುಜಡ್- ಬಿ170 ಸೀರೀಸ್ ವಾಕ್‌ಮನ್ ಬಿಡುಗಡೆಗೊಳಿಸಿದೆ. ಬಾಸ್ ಬೂಸ್ಟ್ ಬಟನ್ ಜೊತೆಗೆ 3 ನಿಮಿಷದ ಕ್ವಿಕ್ ರೀಚಾರ್ಜ್ ಮಾಡಿ 90 ನಿಮಿಷಗಳವರೆಗೆ ಪ್ಲೇಬ್ಯಾಕ್ ಕೇಳಬಹುದು, ಸುಲಭವಾದ ಡ್ರಾಗ್ ಮತ್ತು ಡ್ರಾಪ್ ಮ್ಯೂಸಿಕ್ ಟ್ರಾನ್ಸ್‌ಫರ್ ಮತ್ತಿತರ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.
ಹೊಸ ಮಾಡಲ್‌ಗಳಾಗಿರುವ ಎನ್‌ಡಬ್ಲುಜಡ್-ಬಿ172 ಹಾಗೂ ಬಿ173 ಬಿಲ್ಟ್ ಇನ್ ಲಿಥಿಯಮ್-ಇಯೋನ್ ಬ್ಯಾಟರಿ ಸೌಲಭ್ಯವನ್ನು ಒಳಗೊಂಡಿದೆ. ಈ ಬ್ಯಾಟರಿ ಮೂಲಕ ಸುಮಾರು 18 ಗಂಟೆಗಳ ಕಾಲ ಪ್ಲೇಬ್ಯಾಕ್ ಕೇಳಬಹುದು.
ನಾಲ್ಕು ಬಣ್ಣಗಳಲ್ಲಿ (ಕಪ್ಪು, ಕೆಂಪು, ಪಿಂಕ್, ಗೋಲ್ಡ್) ಲಭ್ಯವಿದ್ದು, ನಾಲ್ಕು ಜಿ.ಬಿ ಸಾಮರ್ಥ್ಯ ಹೊಂದಿರುವ ವಾಕ್‌ಮನ್‌ಗೆ 3,990 ಹಾಗೂ ಎರಡು ಜಿ.ಬಿ. ಸಾಮರ್ಥ್ಯ ಹೊಂದಿರುವ ವಾಕ್‌ಮನ್‌ಗೆ 2,990 ರೂಪಾಯಿ. ಎಲ್ಲ ಸೋನಿ ಸೆಂಟರ್‌ಗಳು ಮತ್ತು ಎಲೆಕ್ಟ್ರಾನಿಕ್ ಔಟ್‌ಲೆಟ್‌ಗಳಲ್ಲಿ ಇವು ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.