ಸಾಯಿ ಗೋಲ್ಡ್ ಪ್ಯಾಲೇಸ್ ಮತ್ತು ಆದರ್ಶ ಸುಗಮ ಸಂಗೀತ ಅಕಾಡೆಮಿ ಆಶ್ರಯದಲ್ಲಿ ಬಸವನಗುಡಿ, ಕೆ.ಆರ್.ರಸ್ತೆಯ ಗಾಯನ ಸಮಾಜದಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರು, ಅವರ ರಕ್ಷಣಾಕಾರ್ಯದಲ್ಲಿ ತೊಡಗಿದ್ದ ವೇಳೆ ಪ್ರಾಣ ಕಳೆದುಕೊಂಡ ಯೋಧರ ನೆನಪಿನಲ್ಲಿ ಶನಿವಾರ `ಸ್ಮರಣಾಂಜಲಿ', `ಗೀತಾಂಜಲಿ', `ಗೀತ-ನೃತ್ಯ ನಮನ' ಆಯೋಜಿಸಲಾಗಿದೆ.
ಉದ್ಘಾಟನೆ: ಸಚಿವೆ ಉಮಾಶ್ರೀ. ಅಧ್ಯಕ್ಷತೆ: ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್. ಪ್ರಶಸ್ತಿ ಪ್ರದಾನ: ಪತ್ರಕರ್ತ ಎಚ್.ಆರ್.ರಂಗನಾಥ್. ಸನ್ಮಾನಿತರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಯಕ ರಾಜೇಶ್ ಕೃಷ್ಣನ್. ಮುಖ್ಯ ಅತಿಥಿಗಳು: ಸಚಿವ ಎಚ್.ಆಂಜನೇಯ, ಶಾಸಕ ಎನ್. ಚೆಲುವರಾಯಸ್ವಾಮಿ, ಪತ್ರಕರ್ತ ಇ.ವಿ.ಸತ್ಯನಾರಾಯಣ, ಎಚ್.ಎಸ್.ವೆಂಕಟೇಶ ಮೂರ್ತಿ, ಗಾಯಕ ಶಿವಮೊಗ್ಗ ಸುಬ್ಬಣ್ಣ, ನಿರ್ದೇಶಕ ಟಿ.ಎನ್.ಸೀತಾರಾಂ. ಸಂಜೆ 5.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.