ADVERTISEMENT

ಸ್ವಾತಂತ್ರ್ಯದ ತೊರೆಗಳು...

ಪ್ರಜಾವಾಣಿ ಚಿತ್ರ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ರಸ್ತೆಬದಿಯಲ್ಲಿ ಪತ್ರಿಕೆಗಳನ್ನೋ, ಬೊಂಬೆಗಳನ್ನೋ ಮಾರುತ್ತಿದ್ದ ಕೈಗಳಲ್ಲೆಗ ತ್ರಿವರ್ಣ ಧ್ವಜ. ಕೆಂಪು ದೀಪ ಹೊತ್ತಿ, ಸೆಕೆಂಡುಗಳ ಕ್ಷಣಗಣನೆ ಶುರುವಾದೊಡನೆ ಇವರ ವ್ಯಾಪಾರ ಚುರುಕುಗೊಳ್ಳುತ್ತದೆ. ಕಾರ್‌ನಲ್ಲಿ ಸಾಗುವವರು, ದ್ವಿಚಕ್ರ ವಾಹನ ಸವಾರರು ಇಷ್ಟದ ಧ್ವಜ ಖರೀದಿಸಿ, ಬೈಕ್‌ಗೆ ಸಿಕ್ಕಿಸಿ ಎದೆಯುಬ್ಬಿಸಿ ನಡೆಯುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ಇವೆಲ್ಲಕ್ಕೂ ಒಂದು ನೆಪವಷ್ಟೆ. ಬಳೇಪೇಟೆ ಕ್ರಾಸ್‌ನ ರೂಪಾ ಟೆಕ್ಸ್‌ಟೈಲ್ಸ್‌ನ ಡಿ.ಎಸ್.ಅರ್ಜುನ್ ದಶಕಗಳಿಂದ ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವದ ಸಂದರ್ಭ ಬಂದರೆ ಬಾವುಟಗಳನ್ನು ಬಿಕರಿ ಮಾಡುತ್ತಾರೆ. ಅವರ ಕೈಗಳಿಗೂ ಈಗ ಬಿಡುವಿಲ್ಲ. ಸ್ವಾತಂತ್ರ್ಯ ಹೀಗೆ ಲಾಂಛನಗಳ ಮಾರುವವರ ಸಂಭ್ರಮವೂ ಹೇಗಾಗುತ್ತದೆ ನೋಡಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.