ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಭಾನುವಾರ ಚೇತನಾ ತೀರ್ಥಹಳ್ಳಿ ಅವರ ‘ಶಬರಿಯ ಅವಸರ’ ಕವಿತೆಗಳು ಹಾಗೂ ಹೃದಯಶಿವ ಅವರ ‘ಹರಿವ ತೊರೆ’ ಕಿರುಗವಿತೆ, ಲಾರಾ ಇಂಗಲ್ಸ್ ವೈಲ್ಡರ್ ಅವರ ‘ದೊಡ್ಡಕಾಡಿನಲ್ಲಿ ಪುಟ್ಟಮನೆ’, ‘ಹುಲ್ಲುಗಾವಲಿನಲ್ಲಿ ಪುಟ್ಟಮನೆ’, ‘ರೈತರ ಹುಡುಗ’, ‘ಪ್ಲಂ ನದಿಯ ತೀರದಲ್ಲಿ’, ‘ಚಳಿಯ ಸುಳಿಯಲ್ಲಿ’, ‘ಸಿಲ್ವರ್ ಲೇಕ್ ದಡದಲ್ಲಿ’, ‘ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ’, ‘ಆ ಸೊಗಸಿನ ಬಂಗಾರದ ದಿನಗಳು’ (ಅನುವಾದ– ಎಸ್. ಅನಂತನಾರಾಯಣ) ಹಾಗೂ ‘ಮೊದಲ ನಾಲ್ಕು ವರ್ಷಗಳು’ (ಅನುವಾದ– ಕೆ.ಪಿ. ಈಶಾನ್ಯೆ) ಪುಸ್ತಕ ಲೋಕಾರ್ಪಣೆ– ಸಾಹಿತಿ ಡಾ. ಸಿದ್ದಲಿಂಗಯ್ಯ. ಅತಿಥಿ– ಪತ್ರಕರ್ತ ಜೋಗಿ. ಉಪಸ್ಥಿತಿ– ಚೇತನಾ ತೀರ್ಥಹಳ್ಳಿ, ಹೃದಯಶಿವ. ಬೆಳಿಗ್ಗೆ 10.30.
ಸಪ್ನ ಬುಕ್ ಹೌಸ್: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ಶನಿವಾರ ಬೇಲೂರು ರಘುನಂದನ್ ಅವರ ‘ಅರಿವು ತೊರೆ’ ಕಟ್ಟುಪದ ಸಂಕಲನ (ಆಧುನಿಕ ವಚನಗಳು) ಕೃತಿ ಬಿಡುಗಡೆ–ಸಾಹಿತಿ ಡಾ.ಕಮಲಾ ಹಂಪನಾ, ಕೃತಿ ಕುರಿತು–ಸಂಸ್ಕೃತಿ ಚಿಂತಕ ಡಾ.ಬಿ.ಯು.ಸುಮಾ, ಉಪಸ್ಥಿತಿ–ಕವಿ ಎಲ್.ಎನ್.ಮುಕುಂದರಾಜ್. ಸಂಜೆ 5.
ಶ್ರೀಪಾದ ಪ್ರಕಾಶನ: ಕುವೆಂಪು ಸಭಾಂಗಣ, 3ನೇ ಮಹಡಿ, ಕನ್ನಡ ಮತ್ತು ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಭಾನುವಾರ ‘ಪಂಚಾಮೃತ’ ಕೃತಿ ಲೋಕಾರ್ಪಣೆ– ಸಾಹಿತಿ ರಾಮಮೂರ್ತಿ. ಲೇಖಕರು– ಭಾಗ್ಯಲಕ್ಷ್ಮಿ ಮಗ್ಗೆ, ಬೆಮೆಲ್ ಸೆಲ್ವಕುಮಾರ್, ಹೆಬ್ಬಗೋಡಿ ಗೋಪಾಲ್, ಎಸ್.ಟಿ. ಶಾಂತಕುಮಾರಿ, ಪದ್ಮಾವತಿ ಚಂದ್ರು. ಅಧ್ಯಕ್ಷತೆ– ನಗೆಲೋಕ ಅಧ್ಯಕ್ಷ ಕೋ.ಲ. ರಂಗನಾಥರಾವ್. ಉದ್ಘಾಟನೆ– ರು. ಬಸಪ್ಪ. ಅತಿಥಿ– ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಶ್, ಸಾಹಿತಿ ಎಸ್.ಜಿ. ಮಾಲತಿಶೆಟ್ಟಿ, ಪದ್ಮಾವತಿ ಚಂದ್ರು. ಬೆಳಿಗ್ಗೆ 10.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.