ADVERTISEMENT

ಹನಿ ಹನಿ ಕವನ...

ಪಿಕ್ಚರ್ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಮಳೆ ಹನಿಯೊಂದು ನೆಲಕ್ಕೆ ಬಿದ್ದು ಚಿಮ್ಮಿ, ಸಹಸ್ರ ಹನಿಗಳ ಜೊತೆ ಸೇರಿ ಹರಿದು ನದಿಯನ್ನೂ, ಆಮೇಲೆ ಸಮುದ್ರವನ್ನೋ ಸೇರಿ, ಮತ್ತೆ ಆವಿಯಾಗಿ ಮೋಡದ ಬಿಂದುವಾಗುವ ಬಗೆ ಸೋಜಿಗ. ಬಾನಿನಿಂದ ಬೀಳುವ ಹನಿಯೊಂದು ನೆಲಕ್ಕೆ ತಾಕುವ ಮೊದಲೇ ಎಲೆಯ ಮೇಲೆ, ಜೇಡರ ಬಲೆಯ ನಡುವೆ, ಹೂದಳದ ಮೇಲೆ ನಿಂತಾಗ ಪ್ರಕೃತಿಗೇ ಕಚಗುಳಿ ಇಟ್ಟಂತಾಗುತ್ತದೆ. ಹಾಗೆ ಚಿಗುರೆಲೆಯ ಮೇಲೆ ನಿಂತ ಹನಿಗಳು ಹವ್ಯಾಸಿ ಛಾಯಾಗ್ರಾಹಕ ಮುರಳಿ ಕ್ಯಾಮೆರಾಕ್ಕೆ ಸೆರೆಸಿಕ್ಕಿದ್ದು ಹೀಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.