ADVERTISEMENT

ಹಲವು ಭಾಷೆಗಳ ಸ್ವರಸಂಗಮ

ಎನ್.ರವಿ
Published 2 ಜನವರಿ 2017, 19:30 IST
Last Updated 2 ಜನವರಿ 2017, 19:30 IST
ಹಲವು ಭಾಷೆಗಳ ಸ್ವರಸಂಗಮ
ಹಲವು ಭಾಷೆಗಳ ಸ್ವರಸಂಗಮ   

ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಬೆಂಗಳೂರಿಗಷ್ಟೇ ಸೀಮಿತವಾಗಿ ‘ಚಾಂಟ್ ಇಂಡಿಯಾ’ ಹೆಸರಿನಲ್ಲಿ ನಗರದ ‘ವರ್ಲ್ಡ್‌ ಮ್ಯೂಸಿಕ್ ಕನ್ಸರ್ವೇಟರಿ’ ಸಂಸ್ಥೆಯು (ಗಾಯನ ಸ್ಪರ್ಧೆ) ರಿಯಾಲಿಟಿ ಶೋವೊಂದನ್ನು ಜುಲೈ ತಿಂಗಳಲ್ಲಿ ಆರಂಭಿಸಿತ್ತು.

ಈ ಶೋನಲ್ಲಿ ಕನ್ನಡ, ಹಿಂದಿ, ಬೆಂಗಾಳಿ, ತಮಿಳು ಭಾಷೆಗಳ ಸಿನಿಮಾಗಳಲ್ಲಿನ ಚಿತ್ರಗೀತೆಗಳನ್ನು ಹಾಡಲು ಸ್ಪರ್ಧಿಗಳು ಭಾಗಹಿಸಿರುವುದು ವಿಶೇಷ. ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು. ಇದೀಗ ‘ಚಾಂಟ್ ಇಂಡಿಯಾ’ ಸ್ವರ್ಧೆ ಅಂತಿಮ ಹಂತ ತಲುಪಿದೆ. ಹಲವು ಭಾಷೆಗಳ ಸ್ವರಸಂಗಮಕ್ಕೆ ಈ ಸ್ಪರ್ಧೆ ವೇದಿಕೆಯಾಗಲಿದೆ.

ಕ್ವಾಟರ್ ಫೈನಲ್‌ನಲ್ಲಿ ‘ರೆಟ್ರೊ ಇಂಡಿಯಾ’ ಪರಿಕಲ್ಪನೆಯ ಕಾರ್ಯಕ್ರಮ ನಡೆದಿತ್ತು. ಇಲ್ಲಿ 80ರ ದಶಕ ಮತ್ತು ಅದಕ್ಕಿಂತಲೂ ಹಿಂದಿನ ಗೀತೆಗಳನ್ನು ಹಾಡಲು ಅವಕಾಶ ನೀಡಲಾಗಿತ್ತು. ಸೆಮಿಫೈಲ್‌ನಲ್ಲಿ ಸಿನಿಮಾಗಳಲ್ಲಿನ ಭಕ್ತಿ ಗೀತೆಗಳಿಗೆ ಅವಕಾಶವಿತ್ತು. ಇದೀಗ ಜ.8 ರಂದು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ ಐದು ಗಂಟೆಗೆ ಈ ಸ್ಪರ್ಧೆ ನಡೆಯಲಿದೆ. ಪ್ರವೇಶ ಉಚಿತ.

17 ಸ್ಪರ್ಧಿಗಳು ಕಣದಲ್ಲಿ
‘ಆರಂಭದಲ್ಲಿ ಫೇಸ್‌ಬುಕ್, ಇಮೇಲ್‌ಗಳ ಮೂಲಕವೇ ಸ್ಪರ್ಧೆ ಬಗ್ಗೆ  ಮಾಹಿತಿ ವಿನಿಮಯ ಮಾಡಲಾಗಿತ್ತು.  ಬೆಂಗಳೂರಿನ ಕೆಲವು ಖಾಸಗಿ ಕಂಪೆನಿಗಳ ಉದ್ಯೋಗಿಗಳನ್ನು ಪತ್ರಗಳ ಮೂಲಕ ಆಹ್ವಾನಿಸಲಾಗಿತ್ತು. ಇದಕ್ಕೆ ಅನಿರೀಕ್ಷಿತ ಸ್ಪಂದನೆ ದೊರೆತು, ಮೊದಲ ಸುತ್ತಿನ ಸ್ಪರ್ಧೆಗೆ 400 ಸ್ಪರ್ಧಿಗಳು ಭಾಗವಹಿಸಿದ್ದರು. ಇದೀಗ ಅಂತಿಮ ಸ್ಪರ್ಧೆಗೆ 17 ಸ್ಪರ್ಧಿಗಳು ಉಳಿದಿದ್ದು, ಎರಡು ಹಂತದಲ್ಲಿ ಸ್ಪರ್ಧೆ ನಡೆಯಲಿದೆ ಎನ್ನುತ್ತಾರೆ ‘ವರ್ಲ್ಡ್‌ ಮ್ಯೂಸಿಕ್ ಕನ್ಸರ್ವೇಟರಿ’ ಸಂಸ್ಥೆಯ ವ್ಯವಸ್ಥಾಪಕಿ ಸಂಗೀತಾ ಶ್ರೀಕಿಷನ್.

ಶಾಲೆಗಳಿಗೆ ಶೌಚಾಲಯ
ಸಂಗೀತಾ ಅವರು ಸೇರಿದಂತೆ ಉಳಿದ ಮೂವರು ಸೇರಿ ‘ಸ್ಮೈಲ್ ಚಾರಿಟೆಬಲ್ ಟ್ರಸ್ಟ್’ ಎಂಬ ಖಾಸಗೀ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಅನುದಾನಿತ ಶಾಲೆಗಳಿಗೆ ಶೌಚಾಲಯ ನಿರ್ಮಿಸಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಒತ್ತು ನೀಡಲು ಮುಂದಾಗಿದೆ.

‘ಶೌಚಾಲಯ ನಿರ್ಮಾಣಕ್ಕೆ ಹಣದ ಅಗತ್ಯ ಇರುವುದರಿಂದ ಸಂಗೀತ ಕಾರ್ಯಕ್ರಮ ರೂಪಿಸಿದ್ದಾರೆ. ಕಾರ್ಯಕ್ರಮದಿಂದ ಬಂದ ಹಣವನ್ನು ಶೌಚಾಲಯ ನಿರ್ಮಾಣಕ್ಕೆ ಬಳಸಿಕೊಳ್ಳುವ ಯೋಜನೆ ಇದೆ’ ಎನ್ನುತ್ತಾರೆ ಅವರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.