
ನಗರದಲ್ಲಿ ಹೆಲ್ಮೆಟ್ ಕಡ್ಡಾಯ. ಆದರೂ ಅದನ್ನು ಹೊರೆ ಎಂದು ಭಾವಿಸಿದವರು ಅನೇಕರಿದ್ದಾರೆ. ಅದರಲ್ಲೂ ಬೇಸಗೆಯಲ್ಲಿ ಬೆವರು ಬಸಿಯುವ ಹವೆಯಿಂದಾಗಿ ಹೆಲ್ಮೆಟ್ ಧರಿಸುವುದನ್ನು ಕಿರಿಕಿರಿ ಎಂದುಕೊಂಡವರೇ ಹೆಚ್ಚು. ಹೆಲ್ಮೆಟ್ಟನ್ನು ಪೆಟ್ರೋಲ್ ಟ್ಯಾಂಕಿನ ಮೇಲೆ ಇಟ್ಟುಕೊಂಡೋ, ಹಿಂಬದಿ ಸವಾರರಿಗೆ ಒಪ್ಪಿಸಿಯೋ, ತಮ್ಮ ಕೈಗೆ ತಾವೇ ಸಿಕ್ಕಿಸಿಕೊಂಡೋ ವಾಹನ ಓಡಿಸುವವರ ನೋಟವಿಲ್ಲಿ ಮಾಮೂಲು.
ಟ್ರಾಫಿಕ್ ಪೊಲೀಸರನ್ನು ಕಂಡ ತಕ್ಷಣ ಹೆಲ್ಮೆಟ್ ತಂತಾನೇ ತಲೆ ಏರುತ್ತದೆ. ಇನ್ನು ಕೆಲವರಿಗೆ ಮೊಬೈಲ್‌ನಲ್ಲಿ ಮಾತಾಡಲು ಹೆಲ್ಮೆಟ್ ಅಡ್ಡಿಪಡಿಸುತ್ತದೆ. ಆಗ ಅದನ್ನು ತಮ್ಮಿಷ್ಟಕ್ಕೆ ತಕ್ಕಷ್ಟು ಮೇಲೆತ್ತಿದಾಗ ಹೇಗೆಹೇಗೋ ಕಾಣುತ್ತಾರೆ. ಹೆಲ್ಮೆಟ್ ಕೇಂದ್ರಿತವಾದ ಹಲವು ಭಾವಗಳು ಇದೋ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.